ಸೋಮವಾರ, ಏಪ್ರಿಲ್ 28, 2025
HometechnologyWhatsApp 6 New Features : 2022ರಲ್ಲಿ ವಾಟ್ಸಾಪ್‌ನಲ್ಲಿ ಸಿಗುತ್ತೆ 6 ಹೊಸ ಫೀಚರ್ಸ್

WhatsApp 6 New Features : 2022ರಲ್ಲಿ ವಾಟ್ಸಾಪ್‌ನಲ್ಲಿ ಸಿಗುತ್ತೆ 6 ಹೊಸ ಫೀಚರ್ಸ್

- Advertisement -

ನಂಬರ್ 1 ಮೆಸೇಜಿಂಗ್ ಆ್ಯಪ್‌(Messaging App) ವಾಟ್ಸಾಪ್ (WhatsApp) ಗ್ರೂಪ್ ವಿಡಿಯೋ ಕಾಲಿಂಗ್, ಒನ್ ಟೈಮ್ ವಾಚೇಬಲ್ ಮುಂತಾದ ಹೊಸ ಹೊಸ ಫೀಚರ್‌ಗಳನ್ನು ಈಗಾಗಲೇ ತಂದಿದೆ. ಇದೀಗ 2022ರಲ್ಲಿ ಆರು ಹೊಸ ಫೀಚರ್‌ಗಳನ್ನು (WhatsApp 6 New Features)ತನ್ನ ಬಳಕೆದಾರರಿಗೆ ನೀಡಲು ಮೆಟಾ(Meta)ಅಧೀನದ ವಾಟ್ಸಾಪ್ ನಿರ್ಧರಿಸಿದೆ. ಕಳೆದ ವರ್ಷ ಇನ್ಸ್ಟಂಟ್ ಮೆಸೇಜಿಂಗ್ ಆ್ಯಪ್‌ ವಾಟ್ಸಾಪ್ ಡೆಸ್ಕ್ ಟಾಪ್ ಮೂಲಕ ಆಡಿಯೋ ವಿಡಿಯೋ ಕಾಲ್ಲಿಂಗ್, ಡಿಸಪ್ಪಿಯರಿಂಗ್ ಫೋಟೋ ಮತ್ತು ವಿಡಿಯೋ ಫೀಚರ್ ಹೊರ ತಂದಿತ್ತು. ಇದೀಗ ತನ್ನ ಪಾಪುಲರಿಟಿ(Popularity) ಉಳಿಸುವ ನಿಟ್ಟಿನಲ್ಲಿ ಮತ್ತು ಒಂದಷ್ಟು ಹೊಸ ಫೀಚರ್ ಗ್ರಾಹಕರಿಗೆ ನೀಡಲು ಮುಂದಾಗಿದೆ. ಹಾಗಿದ್ರೆ ಆ ಆರು ಹೊಸ ಫೀಚರ್ ಯಾವುದು ಅಂತೀರಾ? ಈ ಸ್ಟೋರಿಯಲ್ಲಿ ಫುಲ್ ಡೀಟೈಲ್ಸ್ ನೀಡಲಾಗಿದೆ.

  1. ವಾಟ್ಸಾಪ್ ನೋಟಿಫಿಕೇಶನ್ ನಲ್ಲಿ ಕಾಣಲಿದೆ ಪ್ರೊಫೈಲ್ ಫೋಟೋ
    ಈ ಫೀಚರ್ ಪ್ರಸ್ತುತ ಐ ಒ ಎಸ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಸದ್ಯ ಐ ಒ ಎಸ್ 15ರ ಕೆಲವು ಬೀಟಾ ಟೆಸ್ಟರ್ ಮಾತ್ರ ದೊರಕಿದ್ದು ಮುಂದಿನ ದಿನಗಳಲ್ಲಿ ಇದು ಎಲ್ಲರಿಗೂ ಸಿಗಲಿದೆ. ಈ ಫೀಚರ್ ಮೂಲಕ ಗ್ರೂಪ್ ಅಥವಾ ಪರ್ಸನಲ್ ಚಾಟ್ ನೋಟಿಫಿಕೇಶನ್ ಜೊತೆಗೆ ಮೆಸೇಜ್ ಸೆಂಡ್ ಮಾಡಿದವರ ಪ್ರೊಫೈಲ್ ಫೋಟೋ ಕೂಡ ಕಾಣಿಸಲಿದೆ.
  2. ಸೆಲೆಕ್ಟೆಡ್ ಕಾಂಟ್ಯಾಕ್ಟ್‌ಗಳಿಂದ ಲಾಸ್ಟ್ ಸೀನ್ ಹೈಡ್ ಮಾಡಬಹುದು
    ಇದುವರೆಗೆ ವಾಟ್ಸಾಪ್‌ನಲ್ಲಿ ಎಲ್ಲ ಕಾಂಟ್ಯಾಕ್ಟ್ ಲಾಸ್ಟ್ ಸೀನ್ ಹೈಡ್ ಮಾಡಲು ಸಾಧ್ಯವಿತ್ತು. ಆದರೆ ಇನ್ಮುಂದೆ ನಾವು ಸೆಲೆಕ್ಟ್ ಮಾಡಿದ ಕಾಂಟ್ಯಾಕ್ಟ್ ಲಿಸ್ಟ್ ಮಾತ್ರ ಹೈಡ್ ಮಾಡಲು ಸಾಧ್ಯವಿದೆ.
  3. ಮೀಡಿಯಾ ಶೇರಿಂಗ್ ಆಪ್ಶನ್
    ಈ ಹೊಸ ಫೀಚರ್ ಮೂಲಕ ಮೀಡಿಯಾ ಫೈಲುಗಳನ್ನು ಹೊಸ ವ್ಯಕ್ತಿಯ ಜೊತೆ ಶೇರ್ ಮಾಡಲು ಸಾಧ್ಯವಿದೆ. ಅಷ್ಟೇ ಅಲ್ಲದೇ, ಒಂದು ಮೀಡಿಯಾ ಶೇರ್ ಮಾಡುವಾಗ ಅದನ್ನು ಸ್ಟೇಟಸ್ ಅಪ್ಲೋಡ್ ಮಾಡುವ ಸೌಲಭ್ಯ ಕೂಡ ಇನ್ಮುಂದೆ ಇರಲಿದೆ.
  4. ವಾಟ್ಸಾಫ್ ಮೆಸೇಜ್ ರಿಯಾಕ್ಷನ್
    ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಬಳಕೆ ಮಾಡುವವರಿಗೆ ಗೊತ್ತೇ ಇದೆ, ಅದರಲ್ಲಿ ಮೆಸೇಜಿಗೆ ರಿಯಾಕ್ಷನ್ ನೀಡಬಹುದು. ಅದೇ ರೀತಿ ಇನ್ನು ವಾಟ್ಸಾಪ್ ನಲ್ಲೂ ಈ ಇಮೋಜಿ ರಿಯಾಕ್ಷನ್ ಫೀಚರ್ ಸದ್ಯದಲ್ಲೇ ಬರಲಿದೆ.
  5. ವಾಟ್ಸಾಪ್ ಕಮ್ಯುನಿಟಿ
    10 ಚಾಟ್ ಗ್ರೂಪುಗಳನ್ನು ಒಟ್ಟು ಸೇರಿಸಿ ಒಂದು ಗ್ರೂಪ್ ಮಾಡುವ ಫೀಚರ್ ಇದಾಗಿದೆ. ಆದರೆ ಈ ಹೊಸ ಫೀಚರ್ ಕೇವಲ್ ಅಡ್ಮಿನ್‌ಗಳಿಗೆ ಮಾತ್ರ ಲಭ್ಯವಿರುತ್ತದೆ.
  6. ಲಾಗ್ ಔಟ್
    ಈ ಹಿಂದೆ ವಾಟ್ಸಾಪ್ ಅಕೌಂಟ್ ಡಿಲೀಟ್ ಆಪ್ಶನ್ ಇತ್ತು. ಆದರೆ ಇನ್ನುಮುಂದೆ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ನಂತೆ ಇಲ್ಲಿಯೂ ಲಾಗ್ ಔಟ್ ಆಪ್ಶನ್ ಇರಲಿದೆ.

ಇದನ್ನೂ ಓದಿ: Samsung Galaxy S21 FE: ಸ್ಯಾಮ್‌ಸಂಗ್‌ನ ಹೊಸ Galaxy S21 FE ಬಿಡುಗಡೆ; ರೇಟೆಷ್ಟು? ವಿಶೇಷತೆಯೇನು?

(WhatsApp 6 New Features in 2022 check details here)

RELATED ARTICLES

Most Popular