ಸೋಮವಾರ, ಏಪ್ರಿಲ್ 28, 2025
HometechnologyWhatsApp Font Size ನಿಮಗಿದು ಗೊತ್ತೇ! ವ್ಯಾಟ್ಸ್‌ಅಪ್‌ನ ಫಾಂಟ್‌ ಸೈಜ್‌ ಬದಲಾಯಿಸಬಹುದು ಎಂದು?

WhatsApp Font Size ನಿಮಗಿದು ಗೊತ್ತೇ! ವ್ಯಾಟ್ಸ್‌ಅಪ್‌ನ ಫಾಂಟ್‌ ಸೈಜ್‌ ಬದಲಾಯಿಸಬಹುದು ಎಂದು?

- Advertisement -

WhatsApp ಜಗತ್ತಿನಲ್ಲಿ ಅತಿ ಹೆಚ್ಚಾಗಿ ಬಳಸುವ ಇನ್‌ಸ್ಟಂಟ್‌ ಮೆಸ್ಸೇಜಿಂಗ್‌ ಆಪ್‌ ಬಳಕೆದಾರರ ಸುರಕ್ಷಿತ ಮತ್ತು ಮೌಲ್ಯವರ್ಧಿತ ಚಾಟಿಂಗ್‌ ಅನುಭವಕ್ಕಾಗಿ ಹಲವು ವೈಶಿಷ್ಟ್ಯಗಳನ್ನು‌ ಪರಿಚಯಿಸಿದೆ. Meta ಒಡೆತನದಲ್ಲಿರುವ ಈ ವಾಟ್ಸಾಪ್ ಜಗತ್ತಿನಲ್ಲಿ ಬಿಲಿಯನ್‌ಗಳಷ್ಟು ಬಳಕೆದಾರರನ್ನು ಹೊಂದಿದೆ. ಇದು ನಮಗೆ ಜಗತ್ತಿನಾದ್ಯಂತ ಇರುವ ಜನರನ್ನು ಸಂಪರ್ಕಿಸಲು ಅನುವು ಮಾಡಿಕೊಟ್ಟಿದೆ. ಪ್ರತಿದಿನ ಬಳಸುವ ಈ ವಾಟ್ಸಾಪ್‌ನ ಎಷ್ಟೋ ವೈಶಿಷ್ಟ್ಯಗಳು ನಮಗಿನ್ನೂ ತಿಳಿದಿಲ್ಲ.

ವಾಟ್ಸಾಪ್ ನಲ್ಲಿಯ ಚಾಟಿಂಗ್‌ ಅನುಭವದ ಮಜಾವನ್ನು ಇನ್ನೂ ಹಿಚ್ಚಿಸಿಕೊಳ್ಳಲು ಬಳಕೆದಾರರೂ ಎದಿರುನೋಡುತ್ತಲೇ ಇರುತ್ತಾರೆ. ಉದಾಹರಣೆಗೆ, ಫಾಂಟ್‌ ಸೈಜ್‌ನ ವೈಶಿಷ್ಟ್ಯ . ನಮ್ಮಲ್ಲಿ ಹಲವರಿಗೆ ವ್ಯಾಟ್ಸ್‌ಅಪ್‌ನಲ್ಲಿಯ ಫಾಂಟ್‌ ಸೈಜ್‌ಅನ್ನು ಬದಲಾಯಿಸಬಹುದು ಅನ್ನುವ ಸಂಗತಿ ಗೊತ್ತಿರಲಿಕ್ಕಿಲ್ಲ. ಈ ವೈಶಿಷ್ಟ್ಯವು ವ್ಯಾಟ್ಸ್‌ಅಪ್‌ನ ಸೆಟ್ಟಿಂಗ್ಸ್‌ನಲ್ಲಿ ದೊರೆಯುವುದು. ಅದರ ಸಹಾಯದಿಂದ ನಿಮ್ಮಿಚ್ಛೆಯಂತೆಯೇ ಅಕ್ಷರಗಳನ್ನು ದೊಡ್ಡದು ಅಥವಾ ಚಿಕ್ಕದು ಮಾಡಬಹುದು.

ಇದನ್ನೂ ಓದಿ : Charger for Smartphone ನೀವು ಆಯ್ದುಕೊಂಡ ಚಾರ್ಜರ್‌ ನಿಮ್ಮ ಮೊಬೈಲ್‌ಗೆ ಹೇಳಿಮಾಡಿಸಿದಂತಿದೆಯೇ?

ಸ್ಮಾರ್ಟ್‌ಫೋನ್‌ನಲ್ಲಿರುವ WhatsApp ಫಾಂಟ್‌ ಸೈಜ್‌ ಅನ್ನು ಈ ಕೆಳಗೆ ಕೊಟ್ಟಂತೆಯೇ ಮಾಡಿ ಸುಲಭವಾಗಿ ಬದಲಾಯಿಸಿ:

  • ಫಾಂಟ್‌ ಸೈಜ್‌ ಬದಲಾಯಿಸುವ ಸಲುವಾಗಿ ವ್ಯಾಟ್ಸ್‌ಅಪ್‌ ತೆರೆಯಿರಿ.
  • ವ್ಯಾಟ್ಸ್‌ಅಪ್‌ನ ಬಲತುದಿಯ ಮೇಲಿರುವ ಮೂರು ಚುಕ್ಕಿಗಳನ್ನು ಕ್ಲಿಕ್ಕಿಸಿ.
  • ಮೆನ್ಯು ಬಟ್ಟನ್ನ‌್‌ಲ್ಲಿರುವ ಸೆಟ್ಟಿಂಗ್ಸ್‌ ಆಯ್ದುಕೊಳ್ಲಿ.
  • ಡ್ರಾಪ್‌ ಡೌನ್‌ ಮೆನ್ಯು ಕಾಣಿಸುವುದು, ಅದರಲ್ಲಿ ಚಾಟ್ಸ್‌ ಆಯ್ದುಕೊಳ್ಳಿ.
  • ಹೊಸ ಪುಟ ತೆರೆಯುವುದು. ಅದರಲ್ಲಿಯ ಚಾಟ್‌ ಸೆಟ್ಟಿಂಗ್ಸ್‌ನಲ್ಲಿರು ಫಾಂಟ್‌ ಸೈಜ್‌ ಆಯ್ದುಕೊಳ್ಳಿ.
  • ನೀವು ಟ್ಯಾಪ್‌ ಮಾಡಿದ ಕೂಡಲೇ ಹೊಸ ಪಾಪ್‌ಅಪ್‌ ಮೆನ್ಯು ತೆರೆದುಕೊಳ್ಳುವುದು. ಅದರಲ್ಲಿ ಮೂರು ಆಯ್ಕೆಗಳಿರುತ್ತವೆ. ಸ್ಮಾಲ್‌, ಮೀಡಿಯಂ, ಮತ್ತು ಲಾರ್ಜ್‌ ಎಂದು.
  • ನಿಮ್ಮಿಷ್ಟದ ಫಾಂಟ್‌ ಸೈಜ್‌ ಆಯ್ದುಕೊಳ್ಳಿ.
  • ನಂತರ ವ್ಯಾಟ್ಸ್ಅಪ್‌ನ ಚಾಟ್‌ ವಿಂಡೋ ತೆರೆಯಿರಿ. ಟೆಕ್ಸ್ಟ್‌ನ ಸೈಜ್‌ ಬದಲಾಗಿದೆಯೇ ಇಲ್ಲವೇ ಎಂದು ಪರಿಶೀಲಿಸಲು ಒಂದು ಮೆಸ್ಸೇಜ್‌ ಮಾಡಿ.

ಇದನ್ನೂ ಓದಿ: Aadhaar History : ನಿಮ್ಮ ಆಧಾರ್‌ ತಪ್ಪಾಗಿ ಬಳಕೆಯಾಗಿರಬಹುದೆಂಬ ಅನುಮಾನವಿದೆಯೇ? ಅದನ್ನು ತಿಳಿಯಲು ನಾವು ಹೇಳಿದಂತೆ ಮಾಡಿ

(WhatsApp Font Size Change the WhatsApp text font size very easily)

RELATED ARTICLES

Most Popular