WhatsApp image blur tool feature: ಮೆಟಾ (Meta) ಮಾಲೀಕತ್ವದ ತ್ವರಿತ ಸಂದೇಶ (Instant Message) ಕಳುಹಿಸುವ ಅಪ್ಲಿಕೇಶನ್ ವಾಟ್ಸ್‌ಅಪ್ (WhatsApp new feature) ಕೆಲವು ಬೀಟಾ ಬಳಕೆದಾರರಿಗಾಗಿ ಇಮೇಜ್ ಬ್ಲರ್ (Image Blur) ಟೂಲ್ ಅನ್ನು ಪರಿಚಯಿಸಿದೆ. ವರದಿಯ ಪ್ರಕಾರ ವಾಟ್ಸ್‌ಅಪ್ ನ ಹೊಸ ಮತ್ತು ಮುಂಬರುವ ವೈಶಿಷ್ಟ್ಯಗಳನ್ನು ಟ್ರ್ಯಾಕ್ ಮಾಡುವ ಆನ್‌ಲೈನ್ ಪ್ಲಾಟ್‌ಫಾರ್ಮ್, ಚಿತ್ರಗಳನ್ನು ಮಸುಕುಗೊಳಿಸುವ (ಇಮೇಜ್ ಬ್ಲರ್) ವೈಶಿಷ್ಟ್ಯವನ್ನು ಕೆಲವು ಡೆಸ್ಕ್‌ಟಾಪ್ ಬೀಟಾ ಪರೀಕ್ಷಕರಿಗೆ ಪರಿಚಯಿಸಿದೆ. ಈ ವೈಶಿಷ್ಟ್ಯವು ಬಳಕೆದಾರರಿಗೆ ತಮ್ಮ ಚಿತ್ರಗಳಿಂದ ಸೂಕ್ಷ್ಮ ಮಾಹಿತಿಯನ್ನು ತೆಗೆದುಹಾಕಲು ಅನುವು ಮಾಡಿಕೊಡುತ್ತದೆ.
ವಾಟ್ಸ್‌ಅಪ್ ಎರಡು ಬ್ಲರ್ ಟೂಲ್‌ಗಳನ್ನು ರಚಿಸಿದೆ. ಬ್ಲರ್ ಎಫೆಕ್ಟ್ ಅನ್ನು ಬಳಸಿಕೊಂಡು ಬಳಕೆದಾರರು ತಮ್ಮ ಚಿತ್ರಗಳನ್ನು ಬ್ಲರ್ ಮಾಡಲು ಅನುವು ಮಾಡಿಕೊಡುತ್ತದೆ ಎಂದು ವರದಿ ಹೇಳುತ್ತದೆ. ಇದು ಗ್ರ್ಯಾನ್ಯುಲರ್ ನಿಖರತೆಯೊಂದಿಗೆ ಪರಿಣಾಮವನ್ನು ಬೀರುತ್ತದೆ. ಇದರಲ್ಲಿ ಬಳಕೆದಾರರು ಬ್ಲರ್ (ಮಸುಕು) ಗಾತ್ರವನ್ನು ಸಹ ಆಯ್ಕೆ ಮಾಡಬಹುದಾಗಿದೆ.
ವಾಟ್ಸ್‌ಅಪ್‌ಗೆ ಸಂಬಂಧಿಸಿದಂತೆ, ವಾಟ್ಸ್‌ಅಪ್, ಗೂಗಲ್ ಪ್ಲೇ ಸ್ಟೋರ್(WhatsApp Google Play Store) ಮೂಲಕ ಆಂಡ್ರಾಯ್ಡ್ ಬೀಟಾ 2.22.23.15 ನವೀಕರಣವನ್ನು ಬಿಡುಗಡೆ ಮಾಡಿದೆ. ಇದು ವಾಟ್ಸ್‌ಅಪ್ ಮೂಲಕ ಶೀರ್ಷಿಕೆಯೊಂದಿಗೆ ಮಾಧ್ಯಮವನ್ನು ಫಾರ್ವರ್ಡ್ ಮಾಡುವ ಸಾಮರ್ಥ್ಯವನ್ನು ನೀಡುತ್ತದೆ. ಇದು ಚಿತ್ರಗಳು, ವೀಡಿಯೊಗಳು, GIF ಗಳು ಮತ್ತು ಡಾಕ್ಯುಮೆಂಟ್‌ಗಳನ್ನು ಒಳಗೊಂಡಿರುತ್ತದೆ. ವಾಟ್ಸ್‌ಅಪ್‌ನ ಹೊಸ ಅಪ್‌ಡೇಟ್‌ನಲ್ಲಿ ಆಂಡ್ರಾಯ್ಡ್ ಬೀಟಾ ಬಳಕೆದಾರರು ಫಾರ್ವರ್ಡ್ ಮಾಡಲಾಗುತ್ತಿರುವ ಮಾಧ್ಯಮಕ್ಕೆ ಕ್ಯಾಪ್ಷನ್ ಅನ್ನು ಸೇರಿಸಲು ಕೆಳಭಾಗದಲ್ಲಿ ಹೊಸ ಸಂದೇಶ ಬಾಕ್ಸ್ ಅನ್ನು ನೋಡಬಹುದಾಗಿದೆ. ಇದರ ಜೊತೆಗೆ ಕ್ಯಾಪ್ಷನ್ ಅನ್ನು ತೆಗೆದುಹಾಕಲು ಸಾಧ್ಯವಾಗುತ್ತದೆ. ತೆಗೆದು ಹಾಕುವ ಐಕಾನ್ ಅನ್ನು ಟ್ಯಾಪ್ ಮಾಡುವ ಮೂಲಕ ಈ ವೈಶಿಷ್ಟ್ಯವನ್ನು ಬಳಸಬಹುದಾಗಿದೆ.
(WhatsApp introduces a new image blur tool feature. This is for only desktop beta users)