ಮಂಗಳವಾರ, ಏಪ್ರಿಲ್ 29, 2025
HometechnologyWhatsApp Latest Update : ಐಫೋನ್‌ನ ವಾಟ್ಸ್‌ಅಪ್‌ ಗ್ರೂಪ್‌ ಅಡ್ಮಿನ್‌ಗಳಿಗೆ ಗುಡ್‌ ನ್ಯೂಸ್‌! ಈ ಶಾರ್ಟ್‌ಕಟ್‌...

WhatsApp Latest Update : ಐಫೋನ್‌ನ ವಾಟ್ಸ್‌ಅಪ್‌ ಗ್ರೂಪ್‌ ಅಡ್ಮಿನ್‌ಗಳಿಗೆ ಗುಡ್‌ ನ್ಯೂಸ್‌! ಈ ಶಾರ್ಟ್‌ಕಟ್‌ ವೈಶಿಷ್ಟ್ಯಗಳು ನಿಮಗಾಗಿ

- Advertisement -

ಇನ್‌ಸ್ಟಂಟ್‌ ಮೆಸ್ಸೇಜಿಂಗ್‌ ಪ್ಲಾಟ್‌ಫಾರ್ಮ್‌ ವಾಟ್ಸ್‌ಅಪ್‌ (WhatsApp) ಆಗಾಗ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಿರುತ್ತದೆ. ಮೆಟಾ ಒಡೆತನದಲ್ಲಿರುವ ವಾಟ್ಸ್‌ಅಪ್‌ ಗ್ರೂಪ್‌ ಅಡ್ಮಿನ್‌ಗಳ ಕಾರ್ಯವನ್ನು ಸುಲಭಗೊಳಿಸುವ ಸಲುವಾಗಿ ಕೆಲವು ಹೊಸ ವೈಶಿಷ್ಟ್ಯಗಳನ್ನು (WhatsApp Latest Update) ನೀಡಿದೆ. ಅದು ಕೆಲವು ಶಾರ್ಟ್‌ಕಟ್‌ಗಳನ್ನು ಗ್ರೂಪ್‌ ಅಡ್ಮಿನ್‌ (Group Admin) ಗಳಿಗೆ ಪರಿಚಯಿಸಿದೆ. ಅವುಗಳು ವಾಟ್ಸ್‌ಅಪ್‌ನ ಇತ್ತೀಚಿನ ಆವೃತ್ತಿಯಲ್ಲಿ ಮಾತ್ರ ಇರಲಿದೆ. ಆದರೆ, ಸದ್ಯ ಈ ವೈಶಿಷ್ಟ್ಯವು iOS ಬಳಕೆದಾರರಿಗೆ ಮಾತ್ರ ಸೀಮಿತವಾಗಿದೆ.

ವಾಟ್ಸ್‌ಅಪ್‌ ಗ್ರೂಪ್‌ ಅಡ್ಮಿನ್‌ಗಳಿಗಾಗಿ ನವೀಕರಿಸಿದ ಹೊಸ ಶಾರ್ಟ್‌ಕಟ್‌ಗಳು:

  • WeBetaInfo ವರದಿಯ ಪ್ರಕಾರ, ಇತ್ತೀಚಿನ ನವೀಕರಣವನ್ನು ಗ್ರೂಪ್‌ನಲ್ಲಿ ಭಾಗವಹಿಸುವವರ ಮಿತಿಯು 1024ಕ್ಕೆ ಹೆಚ್ಚಿದ್ದನ್ನು ಗಮನದಲ್ಲಿಟ್ಟುಕೊಂಡು ಇದನ್ನು ಹೊರತರಲಾಗಿದೆ. ಅದಕ್ಕಾಗಿ ಬಳಕೆದಾರರು ಇತ್ತೀಚಿನ ವಾಟ್ಸ್‌ಅಪ್‌ ಆವೃತ್ತಿಯನ್ನು ನವೀಕರಿಸಿಕೊಂಡಿರಬೇಕು.
  • ಪಾರ್ಟಿಸಿಪೆಂಟ್‌ಗಳು ಗ್ರೂಪ್‌ ಸೇರಿದಾಗ ಅಥವಾ ತೊರೆದಾಗ ಈವೆಂಟ್‌ಗಳಲ್ಲಿ ಬಳಕೆದಾರರ ಸಂಪರ್ಕ ಸಂಖ್ಯೆಯನ್ನು ವಾಟ್ಸ್‌ಅಪ್‌ ಈಗ ಹೈಲೈಟ್ ಮಾಡುತ್ತದೆ.
  • ಗ್ರೂಪ್ ಅಡ್ಮಿನ್‌ಗಳು ವಾಟ್ಸಾಪ್‌ನಲ್ಲಿ ಸಂಪರ್ಕದ ಸಂಖ್ಯೆಯನ್ನು ಟ್ಯಾಪ್ ಮಾಡಿ ಹಿಡಿದುಕೊಳ್ಳುವುದರ ಮೂಲಕ ತ್ವರಿತವಾಗಿ ಕರೆಗಳನ್ನು ಮಾಡಬಹುದಾಗಿದೆ.
  • ವಾಟ್ಸ್‌ಅಪ್‌ ನ ಇತ್ತೀಚಿನ iOS ಆವೃತ್ತಿಯೊಂದಿಗೆ ಸೇರಿಸಲಾದ ಇತರ ಶಾರ್ಟ್‌ಕಟ್‌ಗಳು ಫೋನ್ ಸಂಖ್ಯೆಯನ್ನು ಕಾಪಿಮಾಡುವ ಮತ್ತು ಗ್ರೂಪ್‌ ಪಾರ್ಟಿಸಿಪೆಂಟ್‌ಗಳನ್ನು ಅಡ್ರೆಸ್‌ ಬುಕ್‌ನಲ್ಲಿ ಸೇರಿಸುವ ಸಾಮರ್ಥ್ಯ ನೀಡಿದೆ.
  • ಈ ವೈಶಿಷ್ಟ್ಯವು ಗ್ರೂಪ್‌ ಅಡ್ಮಿನ್‌ಗಳಿಗೆ ಸಾಕಷ್ಟು ಸಮಯವನ್ನು ಉಳಿಸುತ್ತದೆ. ಏಕೆಂದರೆ ಅವರು ಇನ್ನು ಮುಂದೆ ಸಂಪರ್ಕ ಮಾಹಿತಿಯನ್ನು ಹುಡುಕಲು (ಕಾಂಟ್ಯಾಕ್ಟ್‌ ನಂಬರ್‌) ಗ್ರೂಪ್‌ ಇನ್ಫೋ ಸ್ಕ್ರೀನ್‌ ಮೂಲಕ ನ್ಯಾವಿಗೇಟ್ ಮಾಡುವ ಅಗತ್ಯವಿರುವುದಿಲ್ಲ.

ವಾಟ್ಸಾಪ್‌ ತನ್ನ ಮೂಲಕ ಹಂಚಿಕೊಳ್ಳಲಾದ ಫೋಟೋಗಳ ಪಿಕ್ಸೆಲ್‌ಗಳು ಮತ್ತು ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ವಾಟ್ಸ್‌ಅಪ್‌ನಲ್ಲಿ ಬಳಕೆದಾರರು ತಮ್ಮ ಚಿತ್ರಗಳನ್ನು ಮೂಲ ಗುಣಮಟ್ಟದೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುವ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವಾಟ್ಸ್‌ಅಪ್‌ ಘೋಷಿಸಿದೆ.

ಇದನ್ನೂ ಓದಿ : Intranasal covid vaccine: ಗಣರಾಜ್ಯೋತ್ಸವದಂದು ವಿಶ್ವದ ಮೊದಲ ಕೋವಿಡ್‌ ಮೂಗಿನ ಲಸಿಕೆ ಪ್ರಾರಂಭ

ಇದನ್ನೂ ಓದಿ : Protest by transport workers: ವೇತನ ಹೆಚ್ಚಳಕ್ಕೆ ಆಗ್ರಹ: ಸಾರಿಗೆ ನೌಕರರಿಂದ ಬೃಹತ್‌ ಪ್ರತಿಭಟನೆ, ಸೋಮವಾರ ಬಸ್‌ ಸಂಚಾರ ವ್ಯತ್ಯಯ ಸಾಧ್ಯತೆ

(WhatsApp Latest Update simplified shortcuts for group admins)

RELATED ARTICLES

Most Popular