ಭಾನುವಾರ, ಏಪ್ರಿಲ್ 27, 2025
Homeಪ್ರವಾಸGreen Beach : ಬೀಚ್‌ ಅಂದ್ರೆ ಸಾಮಾನ್ಯವಾಗಿ ಮರಳು, ಆದರೆ ಎಂದಾದ್ರೂ ಹಸಿರು ಬೀಚ್‌ ನೋಡಿದ್ರಾ...

Green Beach : ಬೀಚ್‌ ಅಂದ್ರೆ ಸಾಮಾನ್ಯವಾಗಿ ಮರಳು, ಆದರೆ ಎಂದಾದ್ರೂ ಹಸಿರು ಬೀಚ್‌ ನೋಡಿದ್ರಾ !

- Advertisement -

ಕಡಲ ತೀರ ಮನಸ್ಸನ್ನ ಶಾಂತವಾಗಿಸುತ್ತವೆ. ಮಾನಸಿಕ ಒತ್ತಡಗಳಿದ್ದರೂ ಕೂಡ ಕಡಲ ತೀರದ ಗಾಳಿ ಬೀಸಿದಾಗ ಮನಸ್ಸು ಆಹ್ಲಾದಕರವೆನಿಸುತ್ತೆ. ಇದಕ್ಕಾಗಿಯೇ ಹೆಚ್ಚಿನ ಜನರು ಕಡಲ ತೀರವನ್ನು ಇಷ್ಟ ಪಡುತ್ತಾರೆ. ಕಡಲ ತೀರಗಳು ಹೆಚ್ಚಾಗಿ ಮಳೆಗಾಲಕ್ಕಿಂತಲೂ ಇತರೇ ಸಮಯದಲ್ಲೇ ಜನರಿಂದ ತುಂಬಿ ತುಳಕುತ್ತಾರೆ. ಆದರೆ ಮಳೆಗಾಲದಲ್ಲಿ ಕೂಡ ಭೇಟಿ ನೀಡಬಹುದಾದ ಕೆಲವು ಬೀಚ್‌ಗಳು ಭಾರತದ ಹಲವು ರಾಜ್ಯಗಳಲ್ಲಿವೆ. ಆದರೆ ಹಚ್ಚ ಹಸಿರನ್ನೇ ಮೈದುಂಬಿಕೊಂಡಿರುವ ಅಪರೂಪದ ಬೀಚ್‌ಗಳು ಯಾವುದು ಗೊತ್ತಾ ?

ಕುಡ್ಲೆ ಬೀಚ್‌ : ಕರ್ನಾಟಕ ರಾಜ್ಯದ ಜನಪ್ರಿಯ ಗೋಕರ್ಣ ಕಡಲ ತೀರದಿಂದ ಸ್ವಲ್ಪ ದೂರದಲ್ಲಿದೆ ಈ ಕುಡ್ಲೆ ಬೀಚ್‌. ಕುಡ್ಲೆ ಕಡಲ ತೀರವು ಆಕರ್ಷಣೀಯ ಭೂದೃಶ್ಯ ಹೊಂದಿದೆ. ಮಾನ್ಸೂನ್‌ ಸಮಯದಲ್ಲಿ ಸುತ್ತಮುತ್ತಲ ಪ್ರದೇಶವನ್ನು ಹಸಿರಿನಿಂದ ತುಂಬಿಕೊಂಡು ಮತ್ತಷ್ಟು ಸುಂದರವಾಗಿ ಕಾಣುತ್ತದೆ. ಈ ಬೀಚ್‌ಗೆ ತೆರಳುವವರು, ಸಮೀಪದಲ್ಲಿಯೇ ಇರುವ ಗೋಕರ್ಣ ದೇವಾಲಯಕ್ಕೂ ಭೇಟಿ ನೀಡಿ ಬರಬಹುದಾಗಿದೆ.

ಇದನ್ನೂ ಓದಿ: ಬಂಡೀಪುರ ʼರಾಷ್ಟ್ರೀಯ ಉದ್ಯಾನ ಜೀವ ವೈವಿದ್ಯತೆಯ ಸ್ವರ್ಗ

ಪ್ರೊಮೆನೇಡ್‌ ಬೀಚ್‌ : ಪಾಂಡಿಚೇರಿಯಲ್ಲಿರುವ ಪ್ರೊಮೆನೇಡ್‌ ಬೀಚ್‌ ಪ್ರವಾಸಿಗರ ಪಾಲಿಗೆ ಹಾಟ್‌ ಸ್ಪಾಟ್.‌ ಮಳೆಗಾಲದ ಸಮಯದಲ್ಲಿ ಇಲ್ಲಿನ ಹವಾಮಾನ ಬೆಚ್ಚಗಿರುತ್ತದೆ. ಆದರೆ ಬೆಳಗಿನ ಮತ್ತು ಸಂಜೆ ಸಮಯದಲ್ಲಿ ಆಹ್ಲಾದಕರವಾಗಿರುತ್ತದೆ. ಇಲ್ಲಿಗೆ ಭೇಟಿ ನೀಡಿದರೆ ಇನ್ನೂ ಹಲವು ಬೀಚ್‌ಗಳಲ್ಲಿ ಮೋಜು ಮಾಡಬಹುದು. ಅರಬಿಂದೋ ಆಶ್ರಮ, ಉದ್ಯಾನ, ವಸ್ತು ಸಂಗ್ರಹಾಲಯಗಳನ್ನು ನೋಡಿಕೊಂಡು ಬರಬಹುದು.

ಪಲೊಲೆಮ್‌ ಬೀಚ್‌ : ಗೋವಾದಲ್ಲಿರುವ ಪಲೊಲೆಮ್‌ ಬೀಚ್‌ ವರ್ಷಪೂರ್ತಿ ಪ್ರಯಾಣಿಕರನ್ನು ಸೆಳೆಯುವ ಬೀಚ್‌ ಇದು. ತಾಳೆ ಮರಗಳ ಜೊತೆ ಸುತ್ತಲಿನ ಹಸಿರು ವಾತಾವರಣದ ನಡುವೆ ಸಮುದ್ರ ತೀರ ಆಹ್ಲಾದ ಭಾವ ನೀಡುತ್ತದೆ. ಸಾಹಸ ಚಟುವಟಿಕೆ, ಪಾರ್ಟಿ, ಆಯುರ್ವೇದ ಚಿಕಿತ್ಸೆಗೆ ಇದು ಸಹಕಾರಿ. ಈ ಸಮಯದಲ್ಲಿ ಗೋವಾದಲ್ಲಿ ಹೆಚ್ಚು ಪ್ರವಾಸಿಗರು ಇರುವುದಿಲ್ಲ. ಹಾಗಾಗಿ ಊಟ, ವಸತಿ ಎಲ್ಲವೂ ಕಡಿಮೆ ಬೆಲೆಗೆ ಸಿಗುತ್ತವೆ.

ಇದನ್ನೂ ಓದಿ: Montreal ಸೌಂದರ್ಯಕ್ಕೆ ಮನಸೋಲದವರೇ ಇಲ್ಲ : ಹೇಗೆ ಗೊತ್ತಾ ನಿಸರ್ಗ ತಾಣ

ವೆಲ್ನೇಶ್ವರ್‌ ಬೀಚ್‌ : ಮಹಾರಾಷ್ಟ್ರದಲ್ಲಿರುವ ವೆಲ್ನೇಶ್ವರ್‌ ಬೀಚ್‌ ದೇಶದ ಪ್ರಾಚೀನ ಕಡಲ ತೀರಗಳಲ್ಲಿ ಒಂದಾಗಿದೆ. ಮಹಾರಾಷ್ಟ್ರದ ಹೊರ ಭಾಗದಲ್ಲಿರುವ ಈ ಬೀಚ್‌ ಮಳೆಗಾಲದಲ್ಲಿನ ರಜಾದಿನವನ್ನು ಸುಂದರ ವಾತಾವರಣದಲ್ಲಿ ಆನಂದಿಸಲು ಇದು ಸಹಕಾರಿ. ಸ್ವಿಮ್ಮಿಂಗ್‌ ಹಾಗೂ ಸನ್‌ ಬಾತ್‌ಗೆ ಇದು ಹೆಸರುವಾಸಿ. ಇಲ್ಲಿರುವ ಶಿವ ಟೆಂಪಲ್‌ಗೆ ಪ್ರವಾಸಿಗರು ಹೆಚ್ಚು ಭೇಟಿ ನೀಡುತ್ತಾರೆ. ವಾಟರ್‌ ಸ್ಪೋರ್ಟ್ ಗೆ ಇದು ಹೆಸರುವಾಸಿ ಎನಿಸಿಕೊಂಡಿದೆ.

(Beach is usually sandy, but never seen a green beach!)

RELATED ARTICLES

Most Popular