ಅತ್ಯಂತ ಸುಂದರ ಪ್ರದೇಶಗಳಲ್ಲಿ ಜೇನುಕಲ್ಲು ಗುಡ್ಡವು ಒಂದಾಗಿದ್ದು, ಮೂರು ಕಾಲಗಳಲ್ಲಿಯೂ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಪ್ರತಿ ವರ್ಷವೂ ಈ ಸುಂದರ ತಾಣವನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬೇಟಿನೀಡುತ್ತಾರೆ. ತಾಲೂಕು ಕೇಂದ್ರ ಯಲ್ಲಾಪುರ ದಿಂದ 17 ಕಿ.ಮೀ ದೂರದ ದಟ್ಟ ಕಾನನದ ನಡುವೆ ಇರುವುದೇ ಜೇನುಕಲ್ಲು ಗುಡ್ಡ.

ಪಶ್ಚಿಮ ಘಟ್ಟಗಳ ಮಡಿಲಿನಲ್ಲಿ ಇರುವ ಸುಂದರ ತಾಣಗಳಲ್ಲಿ ಇದು ಒಂದಾಗಿದೆ. ಜೇನುಹುಳುಗಳಿಗೆ ಪೂರಕ ವಾತಾವರಣ ಇರುವುದರಿಂದ ಅಪಾರ ಪ್ರಮಾಣದ ಜೇನು ಗೂಡುಗಳು ಕಾಣಸಿಗುತ್ತವೆ ಅದಕ್ಕೆ ಜೇನುಕಲ್ಲು ಗುಡ್ಡ ಎಂದು ಕರೆಯುತ್ತಾರೆ ಎಂಬ ಪ್ರತೀತಿ ಇದೆ. ಅಲ್ಲಿಗೆ ತಲುಪಿದಾಗ ಮನಸ್ಸಿನ ಬೇಸರವೆಲ್ಲ ಕಳೆದು ಹೋಗುವುದಂತು ನಿಜ.

ಇದನ್ನೂ ಓದಿ: Scary tourist spots : ಭಾರತದ ಮೊಸ್ಟ್ ವಾಂಟೆಡ್ ಭಯಾನಕ ತಾಣಗಳು ಯಾವುದೆಂದು ಗೊತ್ತಾ
ಗುಡ್ಡದ ತುದಿಯಲ್ಲಿ ನಿಂತು ಸುತ್ತಲಿನ ಪ್ರದೇಶವನ್ನು ನೋಡಿದಾಗ ಗುಡ್ಡಗಳು ಒಂದರ ಮೇಲೊಂದರಂತೆ ಹಾಸಿಕೊಂಡಂತೆ ಗೋಚರವಾಗುತ್ತದೆ. ಗುಡ್ಡಗಳನ್ನು ಆಗಾಗ ಮುತ್ತಿಕ್ಕುವ ಮಂಜಿನ ಹೊದಿಕೆಗಳು ಗುಡ್ಡವನ್ನು ಅದೃಶ್ಯ ಗೊಳಿಸುತ್ತದೆ ಕೆಲವೂಮ್ಮೆ ಮಂಜಿನ ಹೊದಿಕೆ ಸರಿದು ಗುಡ್ಡ ಗೋಚರಿಸುತ್ತದೆ.

ಮಲೆನಾಡಿನಲ್ಲಿ ನಿರಂತರ ಮಳೆಯಿಂದ ಪೃಕೃತಿ ಮಾತೆ ಹಚ್ಚ ಹಸಿರಿನಿಂದ ಕಂಗೊಳಿಸುವ ಜೊತೆಗೆ ಹಸಿರು ಬಣ್ಣದ ಸೀರೆ ಉಟ್ಟಂತೆತೋರುತ್ತದೆ. ಉತ್ತಮ ವಾತಾವರಣ ಸೃಷ್ಟಿಯಾಗಿದೆ ಪ್ರವಾಸಿಗರು ನೈಸರ್ಗಿಕ ಸೌಂದರ್ಯ ಸವಿಯಲು ಎರಡು ಕಣ್ಣುಗಳು ಸಾಲದು. ತಂಪಾದ ಹವಾಮಾನ ಪ್ರವಾಸಿಗರ ಹೊರ ಜಗತ್ತಿನ ನೋವನ್ನು ಮರೆಸುವ ಜೊತೆಗೆ ಶುದ್ಧ ವಾತಾವರಣ ಒದಗಿಸುತ್ತದೆ.
ಇದನ್ನೂ ಓದಿ: ಮಲೆನಾಡ ಒಡಲು ತೀರ್ಥಹಳ್ಳಿಯಲ್ಲಿವೆ ಪ್ರವಾಸಿಗರ ನೆಚ್ಚಿನ ತಾಣಗಳು
(Jenu kallu gudda is a favorite tourist spot)