ಹಚ್ಚ ಹಸಿರಿನ ವನರಾಶಿ, ಕಣ್ಣು ಹಾಯಿಸಿದಷ್ಟು ದೂರ ಹಸಿರನ್ನೇ ಹೊದ್ದು ಮಲಗಿರುವ ಬೆಟ್ಟ ಗುಡ್ಡಗಳು, ತಂಗಾಳಿಯ ಜೊತೆಗೆ ಮಂಜು ಮುಸುಕಿದ ಹಾದಿ. ಅಂಕುದೊಂಡಾದ ಹಾದಿಯುದ್ದಕ್ಕೂ ಸ್ವಾಗತ ಕೋರುವ ಮಳೆಯ ಹನಿ. ಹೌದು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಮುಳ್ಳಯ್ಯನಗಿರಿ ಶಿಖರ ಟ್ರಕ್ಕಿಂಗ್ ಪ್ರಿಯರಿಗೆ ಸ್ವರ್ಗವೇ ಸರಿ.

ಚಿಕ್ಕಮಗಳೂರು ನಗರದಿಂದ ಕೇವಲ 20 ಕಿಲೋಮೀಟರ್ ದೂರದಲ್ಲಿರುವ ಮುಳ್ಳಯ್ಯನಗಿರಿ ಶಿಖರ ಸಮುದ್ರ ಮಟ್ಟದಿಂದ 1950 ಮೀಟರ್ (6317 ಅಡಿ) ಎತ್ತರದಲ್ಲಿದೆ. ಶಿಖರದ ತುತ್ತ ತುದಿಯಲ್ಲಿ ಮುಳ್ಳಯ್ಯ ಸ್ವಾಮಿಯ ದೇವಾಲಯವಿದೆ. ಶಾಂತ ಪರಿಸರ, ಪ್ರಕೃತಿ ಸೌಂದರ್ಯ ಇವೆಲ್ಲವೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಇನ್ನು ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಸಿಗುವ ಮಜವೇ ಬೇರೆ. ಚಾರಣಿಗರು ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳವರೆಗೆ ಇಲ್ಲಿ ಭೇಟಿ ನೀಡುವುದು ಸೂಕ್ತ ಸಮಯ.
ಇದನ್ನೂ ಓದಿ: Montreal ಸೌಂದರ್ಯಕ್ಕೆ ಮನಸೋಲದವರೇ ಇಲ್ಲ : ಹೇಗೆ ಗೊತ್ತಾ ನಿಸರ್ಗ ತಾಣ

ಮುಳ್ಳಯ್ಯನಗಿರಿ ತಲುಪುವ ಮೊದಲು ಸೀತಾಳಯ್ಯನ ಗಿರಿ ಸಿಗುತ್ತದೆ. ಈ ಸ್ಥಳದಲ್ಲಿ ಸೀತಾಳಯ್ಯ ತಪಸ್ಸು ಮಾಡಿದ್ದರಿಂದ ಸೀತಾಳಯ್ಯನ ಗಿರಿ ಎಂಬ ಹೆಸರು ಬಂದಿದೆ. ಇಲ್ಲಿ ಈಶ್ವರ ದೇವಾಲಯವಿದೆ. ಇಲ್ಲಿಂದ ಸುಮಾರು ಎರಡು ಕಿಲೋಮೀಟರ್ ಗಳ ಅಂತರದಲ್ಲಿದೆ ಮುಳ್ಳಯ್ಯನಗಿರಿ ಬೆಟ್ಟ.
ಇದನ್ನೂ ಓದಿ: Nandi Hills : ಪ್ರವಾಸಿಗರಿಗೆ ಬಿಗ್‌ಶಾಕ್ : ನಂದಿ ಬೆಟ್ಟಕ್ಕೆ 20 ದಿನ ಪ್ರವೇಶ ಬಂದ್

ಬೆಟ್ಟದ ಅರ್ಧ ಭಾಗದವರೆಗೆ ವಾಹನ ಸಂಚಾರಕ್ಕೆ ಮಾರ್ಗವಿದ್ದು, ನಂತರದ ಮುನ್ನೂರಕ್ಕೂ ಹೆಚ್ಚು ಮೆಟ್ಟಿಲುಗಳನ್ನು ನಡೆದು ಸಾಗಬೇಕು. ಜೋರಾಗಿ ಬೀಸುವ ಗಾಳಿ ಜೊತೆ ಬೆಟ್ಟ ಹತ್ತುವ ಅನುಭವವೇ ಬೇರೆ. ಬೆಟ್ಟದ ತುದಿ ತಲುಪಿದಾಗ ಶ್ರೀ ಗುರು ಮುಳ್ಳಪ್ಪ ಸ್ವಾಮಿ ಮಾಡಿರುವ ಗದ್ದುಗೆ ಹಾಗೂ ದೇವಾಲಯ ಸಿಗುತ್ತದೆ. ಈ ಗಿರಿಗೆ ಭೇಟಿ ನೀಡಿಲ್ಲ ಅಂದ್ರೆ ಮಿಸ್ ಮಾಡದೆ ಭೇಟಿ ನೀಡಿ ನಿಸರ್ಗದ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ.
(Mullaiyanagiri: A Paradise for Trucking Lovers)