ಬೆಂಗಳೂರು : ಸದ್ಯ ರಾಜ್ಯದಲ್ಲಿ ಬೇಸಿಗೆ ಕಾಲ ತನ್ನ ಆರ್ಭಟ ತೋರುತ್ತಿದೆ. ಜನರು ಉರಿ ಬಿಸಿಲು ತಾಳಲಾರದೇ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಹೀಗೆ ಬಿಸಿಲು, ಧಗೆ, ಉರಿ ತಡೆದುಕೊಂಡಿರೋ ಜನರಿಗೆ ಸದ್ಯದಲ್ಲೇ ಮಿಕ್ಸ್ ವೆದರ್ ಶಾಕ್ (Weather extremes) ಕಾದಿದೆ ಅಂತಿದ್ದಾರೆ ಹವಾಮಾನ ವಿಜ್ಞಾನಿಗಳು. ಹೌದು, ಇದು ಬಿಸಿಲಿಗಿಂತ ಶಾಕಿಂಗ್ ಸತ್ಯ. ಈ ಭಾರಿ ಉರಿಯ ಧಗೆಯೂ ನಿಮ್ಮ ನೀರಿಕ್ಷೆ ಮೀರಲಿದೆ. ಅದರ ಜೊತೆ ಜೊತೆಗೆ ಮಳೆಯೂ ಆರ್ಭಟಿಸಲಿದೆ. ಈ ರೀತಿಯ ಎರಡು ಹವಾಮಾನಗಳನ್ನು ಎದುರಿಸೋದಕ್ಕೆ ಜನರು ರೆಡಿಯಾಗ್ಬೇಕಿದೆ. ಯಾಕೆಂದ್ರೆ ಇನ್ನೇನು ಕೆಲವೇ ದಿನಗಳಲ್ಲಿ ಫ್ರೀ ಮಾನ್ಸೂನ್ ಶುರುವಾಗಲಿದೆ.
ಕಳೆದ ವರ್ಷ ಚಳಿಯ ಅವಧಿ ಹೆಚ್ಚಾಗಿದ್ದ ಕಾರಣದಿಂದ, ಬೇಸಿಗೆ ಬಹಳ ಲೇಟಾಗಿ ಶುರುವಾಗಿತ್ತು. ಈ ವರ್ಷದಲ್ಲಿ ಬಿಸಿಲಿನ ಬೇಗೆಯ ಅವಧಿ ಈ ವರ್ಷ ಕೇವಲ 9 ವಾರಗಳು ಮಾತ್ರ ಇರಲಿದ್ದು, ಮುಂಜಾನೆಯಿಂದ ಸಂಜೆಯವರೆಗೂ ಹೆಚ್ಚು ಬಿಸಿಲಿರಲಿದೆ, ಸಂಜೆ ವೇಳೆ ಮಳೆಯಾಗಲಿದೆ. ಫೆಬ್ರವರಿಯಲ್ಲಿ ಶುರುವಾಗಿರೋ ಬೇಸಿಗೆ ಮಾರ್ಚ್ ಮೂರನೇ ವಾರದಲ್ಲಿ ಗರಿಷ್ಠ ತಲುಪಲಿದೆ. ಇದು ಗರಿಷ್ಠ ಮಟ್ಟಕ್ಕೆ ತಲುಪಿದ ಕೂಡಲೇ ವಾತಾವರಣದಲ್ಲಿ ಬದಲಾವಣೆ ಉಂಟಾಗಿ ಮಾರ್ಚ್ 20 ರ ಬಳಿಕ ಪ್ರೀ ಮಾನ್ಸೂನ್ ಆರಂಭವಾಗಲಿದೆ ಎಂದು ಹವಾಮಾನ ವಿಜ್ಞಾನಿ ರಾಜೇಗೌಡರು ಮಾಹಿತಿ ನೀಡಿದ್ದಾರೆ.
ಸದ್ಯಕ್ಕೆ ಬೇಸಿಗೆ ಕಾಲ ಶುರುವಾಗಿ ಮೂರ್ನಾಲ್ಕು ವಾರಗಳು ಕಳೆದಿದೆ, ನಗರದಲ್ಲಿ ಇನ್ನು 32 ಡಿಗ್ರಿಯಷ್ಟು ತಾಪಮಾನ ದಾಖಲಾಗ್ತಿದ್ದು, ಈ ಬಾರಿ ಪ್ರೀ ಮಾನ್ಸೂನ್ 140 ಮಿ.ಮೀ ನಿಂದ 180 ಮಿ.ಮೀ ಸಾಧ್ಯತೆ ಇದೆ ಎನ್ನಲಾಗ್ತಿದೆ.ಮಾರ್ಚ್ ಅಂತ್ಯದಲ್ಲಿ ಶುರುವಾಗೋ ಪ್ರೀ ಮಾನ್ಸೂನ್ ಜೂನ್‌ವರೆಗೂ ಇರಲಿದೆ.ಹೀಗಾಗಿ ಜನರು ಬಿಸಿಲು ಹಾಗೂ ಮಳೆ ಎರಡನ್ನು ತಡೆದುಕೊಳ್ಳಬೇಕಿದೆ.
ಇದನ್ನೂ ಓದಿ : BMTC ಬಸ್‌ನಲ್ಲಿ ಅಗ್ನಿ ದುರಂತ, ಕಂಡಕ್ಟರ್ ಸಜೀವ ದಹನ
ಇದನ್ನೂ ಓದಿ : Heat wave : ಕರಾವಳಿ ಕರ್ನಾಟಕದಲ್ಲಿ ಬೀಸಲಿದೆ ಬಿಸಿ ಗಾಳಿ: ಹವಾಮಾನ ಇಲಾಖೆ ಎಚ್ಚರಿಕೆ
ಆದರೆ ಈ ರೀತಿ ಅಕಾಲಿಕವಾಗಿ ವಾತಾವರಣ ಬದಲಾಗೋದರಿಂದ ಜನರು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿದ್ದು, ಶೀತ ಜ್ವರ ತಲೆನೋವು, ನಿರ್ಜಲೀಕರಣ, ಮಲೆರಿಯಾ, ಹೊಟ್ಟೆಯ ಸಮಸ್ಯೆಗಳು ಕೂಡ ತಲೆದೋರಬಹುದು. ಅದರಲ್ಲೂ ಶಿಶುಗಳು ಹಾಗೂ ಬಾಳಂತಿಯರ ಆರೋಗ್ಯವೂ ಹದಗೆಡುವ ಸಾಧ್ಯತೆ ಇದ್ದು, ಜನರು ಆದಷ್ಟು ವಾತಾವರಣಕ್ಕೆ ಪೂರಕವಾದ ಆಹಾರ ಸೇವನೆ, ಸಾಕಷ್ಟು ಬಿಸಿನೀರು, ಮಜ್ಜಿಗೆಯಂತಹ ತಂಪು ಪದಾರ್ಥಗಳ ಸೇವನೆಯ ಜೊತೆಗೆ ವಿಶ್ರಾಂತಿ, ಒತ್ತಡ ಮುಕ್ತ ಜೀವನ ಕ್ರಮ ಅನುಸರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ತಜ್ಞರು ಹೇಳ್ತಿದ್ದಾರೆ. ಅಲ್ಲದೇ ಅನಗತ್ಯ ಪ್ರವಾಸಗಳನ್ನು ತಪ್ಪಿಸೋದು ಸೂಕ್ತ ಅನ್ನೋದು ವೈದ್ಯರ ಅಭಿಪ್ರಾಯ ಆಗಿದೆ.
Weather extremes are waiting for Bangalore: It will rain with sunshine