ಪ್ರತಿದಿನ 12-ಗಂಟೆಗಳ ಕೆಲಸ, ಮಹಿಳೆಯರಿಗೆ ರಾತ್ರಿ ಪಾಳಿ

ಬೆಂಗಳೂರು: (Karnataka New Labour Law) ದೇಶದೆಲ್ಲಡೆ ಕಾರ್ಮಿಕರಿಗೆ ಗರಿಷ್ಠ ಒಂಬತ್ತು ಗಂಟೆ ಅವಧಿಯಲ್ಲಿ ಪಾಳಿ ಕೆಎಲಸ ಎಂಬ ಕಾನೂನಿದ್ದು, ಮಹಿಳಾ ಉದ್ಯೋಗಿಗಳನ್ನು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಒತ್ತಾಯಿಸುವಂತಿಲ್ಲ ಎಂಬ ಕಾನೂನಿತ್ತು. ಈ ಹಿನ್ನಲೆಯಲ್ಲಿ ಕರ್ನಾಟಕ ಸರಕಾರ ಕಾರ್ಮಿಕ ಕಾನೂನಿನಲ್ಲಿ ತಿದ್ದುಪಡಿ ಮಾಡಿದ್ದು, ಕಾರ್ಪೋರೇಟ್‌ ಕಂಪನಿಗಳಿಗೆ ಅನುಕೂಲವಾಗುವಂತೆ ಕಾರ್ಮಿಕ ಕಾನೂನಿನಲ್ಲಿ ಬದಲಾವಣೆಗಳನ್ನು ಮಾಡಿದೆ.

ವರದಿ ಪ್ರಕಾರ, ಈ ಮಹತ್ವದ ಕಾನೂನು ತಿದ್ದುಪಡಿಗೆ ಕಾರಣವಾಗಿದ್ದು ಆಪಲ್‌ ಹಾಗೂ ಫಾಕ್ಸ್‌ ಕಾನ್‌ ಕಂಪನಿಗಳು. ಬೇರೆ ದೇಶಗಳಲ್ಲೂ ಇಂತಹದೇ ರೀತಿಯ ಕಾರ್ಮಿಕ ಕಾನೂನುಗಳಿದ್ದು, ರಾಜ್ಯದಲ್ಲೂ ಕೂಡ ಅಂತಹದೇ ವ್ಯವಸ್ಥೆ ಮಾಡಬೇಕು ಎನ್ನುವುದಾಗಿ ಫಾಕ್ಸ್‌ ಕಾನ್‌ ಹಾಗೂ ಆಪಲ್‌ ಬೇಡಿಕೆ ಇಟ್ಟಿದ್ದವು ಎನ್ನಲಾಗಿದೆ. ಈ ಕಾರಣಕ್ಕೆ ರಾಜ್ಯ ಸರಕಾರ ಕಾರ್ಮಿಕ ಕಾನೂನಿನಲ್ಲಿ ತಿದ್ದುಪಡಿ ತಂದಿದೆ ಎಂದು ಹೇಳಲಾಗುತ್ತಿದೆ. ಈ ಕಾನೂನು ತಿದ್ದುಪಡಿಯ ಮೂಲಕ ಕಂಪನಿಗಳು ಇನ್ನು ಮುಂದೆ ನೌಕರರಿಗೆ ಹನ್ನೆರಡು ಗಂಟೆಗಳ ಕಾಲ ಪಾಳಿಯಲ್ಲಿ ಕೆಲಸ ಮಾಡಿಸಲು ಅನುಮತಿ ನೀಡುತ್ತದೆ. ಹಾಗೆ ಮಹಿಳಾ ಕಾರ್ಮಿಕರಿಗೂ ಕೂಡ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿಸಿಕೊಳ್ಳಬಹುದು.

ಚೀನಾದಲ್ಲಿ ಐಫೋನ್‌ ತಯಾರಿಕಾ ಕೇಂದ್ರಗಳನ್ನು ಹೊಂದಿರುವ ಫಾಕ್ಸ್‌ ಕಾನ್‌ ಭಾರತದಲ್ಲಿ ಘಟಕಗಳನ್ನು ತೆರೆಯಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಹಾಗೂ ಹೈದರಾಬಾದ್‌ ನಲ್ಲಿ ಪರಿಶೀಲನೆಯನ್ನು ನಡೆಸಿ ಕರ್ನಾಟಕ ಹಾಗೂ ತೆಲಂಗಾಣ ಸರಕಾರದ ಜೊತೆ ಎಂಒಯು ಮಾಡಿಕೊಂಡಿದೆ. ಕರ್ನಾಟಕದಲ್ಲಿ ಫಾಕ್ಸ್‌ ಕಾನ್‌ ಕೇಂದ್ರ ಪ್ರಾರಂಭವಾದಲ್ಲಿ ಐಟಿ ಬೀಡು ಕರ್ನಾಟಕಕ್ಕೆ ಮತ್ತೊಂದು ಗರಿ ಏರಿದಂತಾಗುತ್ತದೆ. ಈ ಹಿನ್ನಲೆಯಲ್ಲಿ ರಾಜ್ಯ ಸರಕಾರ ಫಾಕ್ಸ್‌ ಕಾನ್‌ ಇಟ್ಟಿದ್ದ ಬೇಡಿಕೆಗೆ ಸ್ಪಂದಿಸಿ ಕಾರ್ಮಿಕ ಕಾನೂನಿಲ್ಲಿ ತಿದ್ದುಪಡಿ ಮಾಡಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : Heat wave : ಕರಾವಳಿ ಕರ್ನಾಟಕದಲ್ಲಿ ಬೀಸಲಿದೆ ಬಿಸಿ ಗಾಳಿ: ಹವಾಮಾನ ಇಲಾಖೆ ಎಚ್ಚರಿಕೆ

ಇದನ್ನೂ ಓದಿ : ಚುನಾವಣೆ ಹೊತ್ತಿನಲ್ಲಿ ಬಾಂಬೆ ಬುಕ್ ಬಾಂಬ್ : ಪುಸ್ತಕದಲ್ಲಿದೆ 17 ಶಾಸಕರು ರಂಗೀನ್ ಕಹಾನಿ !

ಇದನ್ನೂ ಓದಿ : ವೇತನ ಹೆಚ್ಚಳಕ್ಕೆ ಆಗ್ರಹ: ಮಾರ್ಚ್ 24 ರಾಜ್ಯ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

Karnataka New Labour Law : 12 hour shift daily night time work for women

Comments are closed.