ಮನೋರಂಜನಾ ಕ್ಷೇತ್ರದಲ್ಲಿ ಹೊಸ ಸಂಚಲನವನ್ನೇ ಮೂಡಿಸಿ ಟಿಆರ್‌ಪಿಯಲ್ಲಿ ಹೊಸ ದಾಖಲೆ ಬರೆಯುವಂತೆ ಮಾಡಿದ್ದ ಹಾಗೂ ನಾಡಿನ ಹಲವು ಹೆಸರಾಂತ ಸಾಧಕರ ಅಸಲಿ ಕತೆಯನ್ನು ಪರಿಚಯಿಸಿದ್ದ (Weekend With Ramesh Season 5) ಶೋ ವಿಕೇಂಡ್ ವಿತ್ ರಮೇಶ್. ಈಗಾಗಲೇ ನಾಲ್ಕು ಸೀಸನ್ ಗಳನ್ನು ಮುಗಿಸಿರೋ ಈ ಶೋದ ಐದನೇ ಸೀಸನ್ ಸದ್ಯದಲ್ಲೇ ಆರಂಭವಾಗಲಿದೆ ಅನ್ನೋ ಸಿಹಿ ಸುದ್ದಿಯನ್ನು ಜೀ ವಾಹಿನಿ ನೀಡಿದ್ದು, ಇದೀಗ ಈ ಜನಪ್ರಿಯ ಕಾರ್ಯಕ್ರಮ ಯಾವಾಗ ಪ್ರಾರಂಭವಾಗಲಿದೆ ಎಷ್ಟು ಗಂಟೆಗೆ ಪ್ರಸಾರವಾಗಲಿದೆ ಎನ್ನುವ ಮಾಹಿತಿ ಕೂಡ ಸಿಕ್ಕಿದೆ.
ಹೌದು ಜೀ ಕನ್ನಡ ವಾಹಿನಿಯು ಅಧಿಕೃತವಾಗಿ, “ಎಲ್ಲರೂ ಕೇಳ್ತಿದ್ದ ಪ್ರಶ್ನೆಗಳಿಗೆ ಉತ್ತರ ಕೊಡೋ ಟೈಮ್ ಅಂತೂ ಬಂದೇ ಬಿಡ್ತು..! ವೀಕೆಂಡ್ ವಿತ್ ರಮೇಶ್ ಸೀಸನ್ 5 ಇದೇ ಮಾರ್ಚ್ 25ರಿಂದ ಶನಿ-ಭಾನು ರಾತ್ರಿ 9ಕ್ಕೆ” ಪ್ರಸಾರವಾಗಲಿದೆ ಎಂದು ಮತ್ತೊಂದು ಪ್ರೊಮೋ ಮೂಲಕ ತಿಳಿಸಿದ್ದಾರೆ. ಇನ್ನು ಪ್ರೊಮೋದಲ್ಲಿ ಎಲ್ಲರೂ ಸೀಸನ್ ಯಾವಾಗ ಶುರುವಾಗುತ್ತದೆ ಎಂದು ಕೇಳಿದಾಗ ನಟ ರಮೇಶ್ ಟೈಮ್ ಬಂದಾಗ ಹೇಳುತ್ತೇನೆ ಎನ್ನುತ್ತಾರೆ. ಪ್ರೊಮೋದ ಕೊನೆಯಲ್ಲಿ ಅಂತೂ ಟೈಮ್ ಬಂತು ಸೀಯೂ ಸೂನ್ ಎಂದು ಹೇಳಿದ್ದಾರೆ.
ಎಲ್ಲರೂ ಕೇಳ್ತಿದ್ದ ಪ್ರಶ್ನೆಗಳಿಗೆ ಉತ್ತರ ಕೊಡೋ ಟೈಮ್ ಅಂತೂ ಬಂದೇ ಬಿಡ್ತು..!
— Zee Kannada (@ZeeKannada) March 16, 2023
ವೀಕೆಂಡ್ ವಿತ್ ರಮೇಶ್-5 | ಮಾರ್ಚ್ 25ರಿಂದ ಶನಿ-ಭಾನು ರಾತ್ರಿ 9ಕ್ಕೆ.#WeekendWithRameshSeason5 #WeekendWithRamesh #WWR #WWR5 #March25th #RameshAravind #ZeeKannada #BayasidaBaagiluTegeyona @Ramesh_aravind pic.twitter.com/Lm8x7fHPIx
ನಾಡಿನ ಮನೋರಂಜನಾ ಕ್ಷೇತ್ರದಲ್ಲಿ ಹಲವು ಗುಣಾತ್ಮಕ ಕಾರ್ಯಕ್ರಮಗಳ ಮೂಲಕ ಹೆಸರುವಾಸಿಯಾದ ಜೀ ವಾಹಿನಿ ಈಗ ಮತ್ತೊಮ್ಮೆ ತನ್ನ ಜನಪ್ರಿಯ ಕಾರ್ಯಕ್ರಮವನ್ನು ಪುನರಾರಂಭಿಸಲು ಸಿದ್ಧವಾಗಿದೆ. ರಾಜಕೀಯ, ಸಿನಿಮಾ ,ಪೊಲೀಸ್ ಇಲಾಖೆ ಸೇರಿದಂತೆ ನಾಡಿನ ಎಲ್ಲ ಕ್ಷೇತ್ರದ ಸಾಧಕರ ಸಾಧನೆಯ ಹಾದಿ, ಬದುಕು, ಬವಣೆ ಎಲ್ಲವನ್ನು ಮನಮುಟ್ಟುವಂತೆ ತೆರೆಗೆ ತಂದ ಖ್ಯಾತಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕಿದೆ. ಸಿದ್ಧರಾಮಯ್ಯನವರಿಂದ ಆರಂಭಿಸಿ, ಸುಧಾ ಮೂರ್ತಿಯವರ ತನಕ ಎಲ್ಲ ಸಾಧಕರ ಸಾಧನೆಯನ್ನು ಕಂಡ ನಾಡಿನ ಜನರು ಪ್ರೇರಣೆಗೊಂಡಿದ್ದು ಸುಳ್ಳಲ್ಲ.
ಇಂಥ ಪ್ರೇರಣಾತ್ಮಕ ಕಾರ್ಯಕ್ರಮವನ್ನು ಮಿಸ್ ಮಾಡಿಕೊಳ್ತಿದ್ದ ಜನರಿಗೆ ಜೀ ವಾಹಿನಿ ಸಿಹಿಸುದ್ದಿ ನೀಡಿದೆ. ಈ ಬಗ್ಗೆ ಝೀ ವಾಹಿನಿ ಅಧಿಕೃತ ಪ್ರೋಮೋ ರಿಲೀಸ್ ಮಾಡಿದೆ. ನಟ ರಮೇಶ್ ಅರವಿಂದ್ ಹಾಗೂ ರಂಗಿತರಂಗ ಖ್ಯಾತಿಯ ನಟಿ ರಾಧಿಕಾ ನಾರಾಯಣ್ ಈ ಪ್ರೋಮೋದಲ್ಲಿ ಭಾಗಿಯಾಗಿದ್ದಾರೆ. ರಾಧಿಕಾ ನಾವು ಐಪೆಲ್ ಟವರ್ ನೋಡಲು ಹೋಗೋಣ್ವಾ ಎಂಬ ಪ್ರಶ್ನೆಗೆ ಅಯ್ಯೋ ಅದು ಸಾವಿರಾರು ಅಡಿ ಎತ್ತರ ನೋಡಿದ್ರೇ ಕತ್ತು ನೋವು ಬರುತ್ತೆ ಅಂತಾರೆ ರಮೇಶ್. ಅದಕ್ಕೆ ಪರವಾಗಿಲ್ಲ ಕಾಶ್ಮೀರಕ್ಕೆ ಹೋಗೋಣ ಅಂದ್ರೇ ಅಲ್ಲಿ ತುಂಬಾ ಚಳಿ ಎನ್ನುತ್ತಾರೆ.
ಇದನ್ನೂ ಓದಿ : ಸ್ಯಾಂಡಲ್‌ವುಡ್ ನವರಸ ನಾಯಕ ಜಗ್ಗೇಶ್‌ಗೆ ಹುಟ್ಟುಹಬ್ಬದ ಸಂಭ್ರಮ
ಇದನ್ನೂ ಓದಿ : ಸ್ಯಾಂಡಲ್‌ವುಡ್ ಬಹುನಿರೀಕ್ಷಿತ ಸಿನಿಮಾ “ಕಬ್ಜ” ಕ್ಕೂ ತಗುಲಿದ ಪೈರಸಿ ಕಾಟ
ಹೋಗಲಿ ಇಲ್ಲೇ ಊಟಿ ಕೊಡೈಕೆನಾಲ್ ಗೆ ಹೋಗೋಣ ಅಂದ್ರೇ ಇಲ್ಲ ನಾನು ಕೆಲಸದಲ್ಲಿ ತುಂಬಾ ಬ್ಯುಸಿ ಇದ್ದಿನಿ ಎಂದಿದ್ದಾರೆ. ಅದಕ್ಕೆ ರಾಧಿಕಾ ಖುಷಿಯಿಂದ ಹೌದಾ? ಯಾವಾಗಾ ಶುರುವಾಗುತ್ತೆ ಎಂದು ಕೇಳಿದಾಗ ಹೇಳ್ತಿನಿ ಸಮಯ ಬಂದಾಗ ಎಂದಿದ್ದಾರೆ. ಇದೀಗ ಅಧಿಕೃತವಾಗಿ ಶೋ ಪ್ರಾರಂಭವಾಗುವ ದಿನಾಂಕವನ್ನು ತಿಳಿಸಿದ್ದು, ಮೊದಲ ಅತಿಥಿ ಯಾರು ಎನ್ನುವುದನ್ನು ಇನ್ನು ಅಧಿಕೃತವಾಗಿ ತಿಳಿಸಿರುವುದಿಲ್ಲ. ಹಾಗಾಗಿ ಈ ಬಾರೀ ಮೊದಲು ಸಾಧಕರ ಸೀಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆಷ್ಟೇ.
TV Popular Show Weekend With Ramesh Season 5 Date Fix