ನಟ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬ : ಶಿವರಾಜ್‌ಕುಮಾರ್‌ ಭಾವುಕ ಸಾಲುಗಳು ಆಯ್ತು ವೈರಲ್

ಸ್ಯಾಂಡಲ್‌ವುಡ್‌ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಇಂದು (ಮಾರ್ಚ್‌ 17) 48ನೇ ವರ್ಷದ (Puneeth Rajkumar Birthday) ಹುಟ್ಟುಹಬ್ಬದ ಸಂಭ್ರಮ. ಇಂದು ಕನ್ನಡ ಸಿನಿರಂಗ ಮಾತ್ರವಲ್ಲದೇ ಇಡೀ ಭಾರತೀಯ ಸಿನಿರಂಗ ಕೂಡ ಅಪ್ಪು ಅವರನ್ನು ನೆನೆದಿದ್ದಾರೆ. ಸದಾ ಮುಗುಳುನಗೆ ಮೂಲಕ ಸಹಸ್ರ ಸಂಖ್ಯೆಯ ಅಭಿಮಾನಿಗಳ ಮನಗೆದ್ದಿರುವ ಮೇರುನಟ ಡಾ.ರಾಜ್‌ಕುಮಾರ್‌ ಹಾಗೂ ಪಾರ್ವತಮ್ಮ ಅವರ ಮುದ್ದಿನ ಮಗ ಪುನೀತ್‌ ರಾಜ್‌ಕುಮಾರ್‌ ನಮ್ಮನ್ನೆಲ್ಲ ಅಗಲಿ ಒಂದೂವರೆ ವರ್ಷ ಕಳೆದಿದೆ. ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಅಭಿಮಾನಿಗಳು, ಸಿನಿತಾರೆಯರು ಹಾಗೂ ಕುಟುಂಬದವರು ಬಹಳ ವಿಶೇಷವಾಗಿ ಶುಭಾಶಯ ಹೇಳಿದ್ದಾರೆ. ನಟ ಪುನೀತ್‌ ಅಣ್ಣ ಶಿವರಾಜ್‌ಕುಮಾರ್‌ (Puneeth Rajkumar – Shivarajkumar) ಮುದ್ದಿನ ತಮ್ಮನ ಅಗಲಿಕೆ ನೋವಿನಲ್ಲಿ ಭಾವುಕರಾಗಿ ಸಾಲುಗಳನ್ನು ಬರೆದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಟ ಶಿವರಾಜ್‌ಕುಮಾರ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ, “ನೀನು ಹುಟ್ಟಿದಾಗ ನಮ್ಮ ಮನೆಯಲ್ಲಿ ಉಲ್ಲಾಸ ಉಕ್ಕಿ ಹರಿಯುತ್ತಿತ್ತು, ನಿನ್ನ ಕಣ್ಣಲ್ಲಿದ್ದ ಹೊಳಪು ನೀನು ಪವರ್‌ಸ್ಟಾರ್‌ ಆಗೋದನ್ನು ಆವಾಗ್ಲೇ ಹೇಳ್ತಾ ಇತ್ತು. ನೀನು ನಕ್ಕರೆ ಎಲ್ರು ನಗ್ತಾ ಇದ್ರು, ನೀನು ಕುಣಿದರೆ ಎಲ್ಲರೂ ರೋಮಾಂಚನದಿಂದ ನೋಡ್ತಾ ಇದ್ರು, ಮನೆಗೆ ಬಂದ ಅತಿಥಿ ನೆಂಟರುಗಳಿಗೆಲ್ಲ ನೀನೇ ಬೇಕು. ಅಂತಹ ಪುಟ್ಟ ಅಪ್ಪು ಮಿಂಚಿನಂತೆ ತೆರೆಯ ಮೇಲೆ ಬಂದು, ಹೆಮ್ಮರವಾಗಿ, ಕೋಟ್ಯಾಂತರ ಜನರಿಗೆ ನೆರಳಾಗಿದ್ದನ್ನು ಹತ್ತಿರದಿಂದ ನೋಡಿದ ನಾನೇ ಪುನೀತ.

ನಿನ್ನನ್ನು ಎತ್ತಿ ಆಡಿಸಿದ ಅಣ್ಣನಾಗಿ‌, ನಿನ್ನ ಜೊತೆ ಕೂಡಿ ಆಡಿದ ಸ್ನೇಹಿತನಾಗಿ, ನಿನ್ನ ಕೆಲಸಗಳನ್ನು ಮೆಚ್ಚಿ ಅಪ್ಪಿಕೊಮಡ ಕನ್ನಡಿಗನಾಗಿ, ಹಬ್ಬ ಯಾವ್ದೇ ಆಗಿದ್ರೂ ನಿನ್ನ ಹೆಸರಲ್ಲಿ ಪಟಾಕಿ ಹಚ್ಚೋ ಅಭಿಮಾನಿಗಳಲ್ಲಿ ಒಬ್ಬನಾಗಿ ಹೇಳ್ತಾ ಇದೀನಿ. ನೀನು ಹುಟ್ಟಿದ್ದೇ ಒಂದು ಉತ್ಸವ, ನೀನು ಬೆಳೆದಿದ್ದು ಇತಿಹಾಸ, ನಿನ್ನ ಜೀವನ ಒಂದು ದಂತಕಥೆ, ನಿನ್ನ ನೆನಪುಗಳು ಎಂದಿಗೂ ಅಮರ! ಹುಟ್ಟುಹಬ್ಬದ ಶುಭಾಶಯಗಳು ಅಪ್ಪು!” ಎಂದು ಬಹಳ ಭಾವುಕರಾಗಿ ಸಾಲುಗಳನ್ನು ಬರೆದು ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ : ಸ್ಯಾಂಡಲ್‌ವುಡ್‌ ನವರಸ ನಾಯಕ ಜಗ್ಗೇಶ್‌ಗೆ ಹುಟ್ಟುಹಬ್ಬದ ಸಂಭ್ರಮ

ಇದನ್ನೂ ಓದಿ : ಸ್ಯಾಂಡಲ್‌ವುಡ್‌ ಬಹುನಿರೀಕ್ಷಿತ ಸಿನಿಮಾ “ಕಬ್ಜ” ಕ್ಕೂ ತಗುಲಿದ ಪೈರಸಿ ಕಾಟ

ಮುದ್ದಿನ ತಮ್ಮನ ಅಗಲಿಕೆ ನೋವುಂಡ ಶಿವಣ್ಣ ಅಪ್ಪು ನಮ್ಮ ನಡುವೆ ಇದ್ದಾರೆ ಎನ್ನುವ ಅವರ ಸಾಲುಗಳು ನಿಜಕ್ಕೂ ಮನಕುಲುಕುತ್ತದೆ. ಇಂದು (ಮಾರ್ಚ್‌ 17) ನಟ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬವಿದ್ದು , ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಅಗಲಿಕೆಯ ನಂತರವು ಅದ್ದೂರಿಯಾಗಿ ಆಚರಿಸಲು ಅಭಿಮಾನಿಗಳು ಭರ್ಜರಿ ಆಚರಿಸುತ್ತಿದ್ದಾರೆ. ಅಪ್ಪು ಜೀವಂತ ಇದ್ದಾಗ ಕೂಡ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಬಹಳ ವಿಶೇಷವಾಗಿ ಆಚರಿಸಿಕೊಂಡು ಬಂದಿದ್ದಾರೆ. ಅದರಂತೆ ಈ ಬಾರೀ ಕೂಡ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಇಂದು (ಮಾರ್ಚ್‌ 17) ನಟ ಪುನೀತ್‌ ಅಭಿನಯದ ‘ಯುವರತ್ನ’ ಸಿನಿಮಾವನ್ನು ಬೆಂಗಳೂರಿನ ಜೆಪಿ ನಗರದ ಸಿದ್ಧಲಿಂಗೇಶ್ವರ ಸಿನಿಮಂದಿರದಲ್ಲಿ ಉಚಿತ ಪ್ರದರ್ಶನವನ್ನು ನಡೆಸಿದ್ದಾರೆ.

Puneeth Rajkumar – Shivarajkumar : Actor Puneeth Rajkumar’s Birthday: Shivarajkumar’s Emotional Lines Go Viral

Comments are closed.