ಕನ್ನಡ ಮನೋರಂಜನಾ ಕ್ಷೇತ್ರದಲ್ಲಿ ಪ್ರತಿದಿನ ಸಾಕಷ್ಟು ಪ್ರತಿಭೆಗಳು ಬರುತ್ತಲೆ ಇರುತ್ತಾರೆ. ಅದರಲ್ಲೂ ಸಹ ಸಾಕಷ್ಟು ದಿನದಿಂದ ತಮ್ಮ ಪ್ರಯತ್ನದಿಂದ ತಮ್ಮ ಟ್ಯಾಲೆಂಟ್ ತೋರಿಸಲು ಒಂದೊಂದು ಹೆಜ್ಜೆ ಮುಂದೆ ಹೋಗುತ್ತಾ ಗುರುತಿಸಿಕೊಳ್ಳುವುದು. ತನ್ನ ಪ್ರತಿಭೆಯಿಂದಲೇ ಈ ಮನೋರಂಜನಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿರೋ ಟ್ಯಾಲೆಂಟ್ ಗಳಲ್ಲಿ ಈ ರಾಪರ್ ಗಳು ಮುಂಚೂಣಿಯಲ್ಲಿದ್ದಾರೆ.

ಹೌದು, ಕನ್ನಡದಲ್ಲಿ ಇತ್ತೀಚಿಗೆ ಇಂತಹ ಪ್ರತಿಭಾವಂತರು ಹೆಚ್ಚಾಗಿದ್ದು, ಅದರಲ್ಲಿ ಕೂರ್ಗ್ ಪ್ರತಿಭೆ ವಿವೇಕ್ ರಾಚಪ್ಪ ಕೂಡ ಒಬ್ಬರೂ. ಐಟಿ ಕ್ಷೇತ್ರದಲ್ಲಿ ತನ್ನ ವೃತ್ತಿಜೀವನ ನೆಡಸುತ್ತಿರುವ ಮಡಿಕೇರಿ ಹುಡುಗನಿಗೆ ಸಂಗೀತದಲ್ಲಿ ಸಿಕ್ಕಾಪಟ್ಟೆ ಒಲವು. ಆ ಸಂಗೀತದ ಪ್ರೀತಿನೆ ತನ್ನ ಹಾಡುಗಳಿಗೆ ತಾನೇ ಬಂಡವಾಳ ಹೂಡಿ, ಎಲ್ಲರಿಂದಲೂ ಸೈ ಅನಿಸಿಕೊಂಡಿದ್ದ. ಇವಾಗ ಮತ್ತೊಂದು ಹೊಸದಾಗಿ ಹಾಡೊಂದನ್ನ ರೆಡಿ ಮಾಡಿದ್ದು, ಬಿಡುಗಡೆಗೆ ರೆಡಿಯಾಗಿ ನಿಂತಿದೆ.

ಹಲವಾರು ಕನಸುಗಳೊಂದಿಗೆ ಮೂಡಿ ಬಂದಿರೋ ಈ “ಹೊಸ ಪರಿಣಿತಿ” ಹಾಡು ಹೊಸದೊಂದು ಲೋಕಕ್ಕೆ ಕರ್ಕೊಂಡು ಹೋಗುತ್ತೆ ಅನ್ನೋ ನಂಬಿಕೆ ವಿವೇಕ್ ಅವರದ್ದು. ವಿವೇಕ್ ಜೊತೆ ವಿಡಿಯೋದಲ್ಲಿ ಸಿರಿ ರಾಜು ಜೋಡಿಯಾಗಿ ನಟಿಸಿದ್ದು, ನವೀನ್ ಪಂಚಾಕ್ಷರಿ ಕ್ಯಾಮೆರಾ ಕೈಚಳಕ ತೇರಿದ್ದಾರೆ. Lazy Kid ಪ್ರೊಡಕ್ಷನ್ ಅಡಿಯಲ್ಲಿ ಹಾಡು ನಿರ್ಮಾಣವಾಗಿದೆ.

ಮೊದಲೆರಡು ಹಾಡುಗಳು ಸಹ ಸಾಕಷ್ಟು ಪ್ರಶಂಸೆಗೊಂಡಿದ್ದು, ಬಾ ಕುಣಿಯುವ ಬಾ ಮತ್ತು ಜೋಕೆ ಹಾಡುಗಳು ವಿವೇಕ್ ಅವರ ಪ್ರತಿಭೆಗೆ ಹಿಡಿದ ಕೈಗನ್ನಡಿ. ಹಲವಾರು ಕಾರ್ಯಕ್ರಮಗಳಲ್ಲಿ ಹಾಡಿದ್ದು, ರೇಡಿಯೋ ಪ್ರೊಮೊಗಳಿಗೆ, ಕಂಪನಿಗಳಲ್ಲಿ ತನ್ನ ಗಾಯನ ಪ್ರತಿಭೆ ತೋರಿಸಿದ್ದಾರೆ.
ಇವರ ಹೊಸ ಪರಿಣಿತಿ ಹಾಡು ಇದೇ ತಿಂಗಳು ಬಿಡುಗಡೆಯಾಗಲಿದ್ದು, ಇಡೀ ತಂಡಕ್ಕೆ ನಮ್ ಕಡೆಯಿಂದ ಆಲ್ ದಿ ಬೆಸ್ಟ್.
