ಬ್ಯಾಂಕಿನಲ್ಲಿದೆ ಗ್ರಾಮಸ್ಥರ 70000000000 ರೂ.! ಇದು ಭಾರತದಲ್ಲಿರುವ ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ..!

ಇದು ಏಷ್ಯಾದಲ್ಲಿಯೇ ಅತ್ಯಂತ ಶ್ರೀಮಂತ ಗ್ರಾಮ. ಈ ಗ್ರಾಮದಲ್ಲಿರುವ ಜನರ ಬಳಿಯಲ್ಲಿದೆ 7000 ಕೋಟಿ ಮೌಲ್ಯದ ಸ್ಥಿರ ಠೇವಣಿ. ಇಂತಹ ಗ್ರಾಮ ಭಾರತದಲ್ಲಿದೆ ಅಂದ್ರೆ ನಂಬೋದಕ್ಕೆ ಸಾಧ್ಯವೇ. ಏಷ್ಯಾ ಖಂಡದ ಅತ್ಯಂತ ಶ್ರೀಮಂತ ಗ್ರಾಮ ಅನಿಸಿಕೊಂಡಿರುವುದು ಗುಜರಾತಿನ ಮಧಾಪುರ (Asia’s richest village Madhapar) ಗ್ರಾಮ. ಅಷ್ಟಕ್ಕೂ ಇಲ್ಲಿನ ಜನರ ಬಳಿ ಇಷ್ಟೊಂದು ಸಂಪತ್ತು ಇರೋದು ಯಾಕೆ ಗೊತ್ತಾ ?

ಏಷ್ಯಾ ಖಂಡ ಆರ್ಥಿಕವಾಗಿ ಅತ್ಯಂತ ಶ್ರೀಮಂತಿಕೆಯಿಂದ ಕೂಡಿದೆ. ವಿಶ್ವದ ಹಲವು ಶತಕೋಟ್ಯಾಧಿಪತಿಗಳು ನೆಲೆಸಿರೋದು ಕೂಡ ಇದೇ ಏಷ್ಯಾ ಖಂಡದಲ್ಲಿ. ಇಂತಹ ಶ್ರೀಮಂತ ನಗರದಲ್ಲಿರುವ ಶ್ರೀಮಂತ ನಗರ ಯಾವುದು ಅಂತಾ ಕೇಳಿದ್ರೆ ಸಿಗುವ ಉತ್ತರ ಗುಜರಾತ್‌ನ ಮಾಧಾಪುರ ಗ್ರಾಮ. ಮಾಧಾಪುರ ಗ್ರಾಮದಲ್ಲಿರುವ ಬಹುತೇಕರು ವಿದೇಶಗಳಲ್ಲಿ ನೆಲೆಸಿದ್ದಾರೆ.

Rs 70000000000 money in bank! this is Asia’s richest village Madhapar, a village in the Kutch district of Gujarat Kannada News

ಗುಜರಾತ್‌ನ ಭುಜ್‌ನಲ್ಲಿರುವ ಮಾಧಾಪುರ ಗ್ರಾಮದಲ್ಲಿರು ಜನಸಂಖ್ಯೆ ಕೇವಲ 32,000. ಆದರೆ ಅತೀ ಹೆಚ್ಚು ಸಂಖ್ಯೆಯಲ್ಲಿ ಇಲ್ಲಿನ ನಿವಾಸಿಗಳು ವಿದೇಶದಲ್ಲಿ ನೆಲೆಸಿದ್ದಾರೆ. ಭಾರತದಲ್ಲಿನ ಯಾವುದೇ ಗ್ರಾಮದಲ್ಲಿ ಕಾಣಸಿಗದ ಅತ್ಯಾಧುನಿಕ ರಸ್ತೆಗಳು, ಶಾಲೆ, ಮೂಲ ಸೌಕರ್ಯಗಳಲ್ಲಿ ಅಭಿವೃದ್ದಿಯನ್ನು ಕಂಡಿದೆ ಮಾಧಾಪುರ ಗ್ರಾಮ. ಇಲ್ಲಿನ ಜನರು ಬ್ಯಾಂಕಿನಲ್ಲಿ ಬರೋಬ್ಬರಿ 7000 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಠೇವಣಿಯನ್ನು ಹೊಂದಿದ್ದಾರೆ. ಈ ಮಾಹಿತಿಯನ್ನು ಭಾರತ ಸರಕಾರ ಕೂಡ ಒಪ್ಪಿಕೊಂಡಿದೆ.

Also Read : ರಾಷ್ಟ್ರೀಯ ಪಿಂಚಣಿ ರೂಲ್ಸ್‌ ಬದಲಾವಣೆ : ಸರಕಾರಿ ನೌಕರರು, ಸಾರ್ವಜನಿಕರಿಗೆ ಲಾಭ

Asia’s richest village Madhapar : ಇಷ್ಟೊಂದು ಶ್ರೀಮಂತವಾಗಿದ್ದು ಹೇಗೆ ಮಾಧಾಪುರ ?

ಗುಜರಾತ್‌ನ ಈ ಮಾಧಾಪುರ ಇಷ್ಟೊಂದು ಶ್ರೀಮಂತಿಕೆಯಿಂದ ಕೂಡಿರುವುದಕ್ಕೆ ಪ್ರಮುಖ ಕಾರಣವೇ ಗ್ರಾಮದಲ್ಲಿರುವ ಅನಿವಾಸಿ ಭಾರತೀಯ ಸಂಖ್ಯೆ. ಇದು ಭಾರತದ ಅನಿವಾಸಿ ಜನಸಂಖ್ಯೆಗೆ ಹೋಲಿಸಿದ್ರೆ ಶೇ.65ರಷ್ಟಿದೆ. ಇಲ್ಲಿನರು ಜನರು ಅಮೇರಿಕಾ, ಯುಕೆ ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಹಾಗೂ ಆಫ್ರಿಕಾದಲ್ಲಿ ನೆಲೆಸಿದ್ದಾರೆ. ಶ್ರೀಮಂತ ರಾಷ್ಟ್ರದಲ್ಲಿ ನೆಲೆಸಿರೋ ಕಾರಣಕ್ಕೆ ಗ್ರಾಮ ಕೂಡ ಶ್ರೀಮಂತವಾಗಿದೆ.

Asia’s richest village Madhapar : ಬ್ಯಾಂಕ್‌ ಠೇವಣಿಯಿಂದ ಗ್ರಾಮದ ಅಭಿವೃದ್ದಿ

ಇಲ್ಲಿನ ಅನಿವಾಸಿ ಭಾರತೀಯರು ಬ್ಯಾಂಕಿನಲ್ಲಿ ಸಾವಿರಾರು ರೂಪಾಯಿಯ ಸ್ಥಿರ ಠೇವಣಿಯನ್ನು ಹೊಂದಿದ್ದಾರೆ. ಇದರಿಂದಾಗಿ ಇಲ್ಲಿನ ಸರಕಾರಗಳು ಗ್ರಾಮದ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿವೆ. ರಸ್ತೆ, ಕುಡಿಯುವ ನೀರು, ಜಲಸಂಪನ್ಮೂಲ, ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸೌಲಭ್ಯ ಮಾತ್ರವಲ್ಲ ಧಾರ್ಮಿಕ ಕ್ಷೇತ್ರಗಳು ಕೂಡ ಹೆಚ್ಚು ಅಭಿವೃದ್ದಿ ಪಥದತ್ತ ಮುನ್ನೆಡೆದಿವೆ.

NRI ಗಳು ಮಾಡಿದ ಹೂಡಿಕೆಗಳು ಮಾಧಪುರವನ್ನು ಹಣದ ಕೇಂದ್ರವನ್ನಾಗಿ ಮಾಡಿವೆ. ಅಷ್ಟೇ ಅಲ್ಲದೇ ಬೃಹತ್‌ ಹೂಡಿಕೆಗಳ ಜೊತೆಗೆ ದೇಶದ ಪ್ರಮುಖ ಬ್ಯಾಂಕುಗಳಾಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(SBI), ಎಚ್‌ಡಿಎಫ್‌ಸಿ (HDFC), ಐಸಿಐಸಿಐ (ICICI), ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (PNB) ಸೇರಿದಂತೆ 17 ಪ್ರಮುಖ ಬ್ಯಾಂಕುಗಳು ಈ ಗ್ರಾಮದಲ್ಲಿ ಶಾಖೆಗಳನ್ನು ಹೊಂದಿವೆ.

Rs 70000000000 money in bank! this is Asia’s richest village Madhapar, a village in the Kutch district of Gujarat Kannada News

Also Read : ಗೃಹಲಕ್ಷ್ಮೀ ಫಲಾನುಭವಿಗಳಿಗೆ ಗುಡ್‌ನ್ಯೂಸ್‌ : ಖಾತೆಗೆ ಜಮೆ ಆಗಲಿದೆ 4000 ರೂ..

ಮಾಧಾಪುರ ಗ್ರಾಮದಲ್ಲಿನ ಗ್ರಾಮಸ್ಥರು ವಿಶ್ವದಾದ್ಯಂತ ನೆಲೆಸಿದ್ದಾರೆ. ವಿದೇಶದಲ್ಲಿ ಸಂಪಾದಿಸುವ ಸಂಪಾದನೆಯ ಒಂದಿಷ್ಟು ಹಣವನ್ನು ತಮ್ಮ ಗ್ರಾಮದ ಅಭಿವೃದ್ದಿಗೆ ವಿನಿಯೋಗ ಮಾಡುತ್ತಿದ್ದಾರೆ. ಇದೇ ಕಾರಣದಿಂದಲೇ ಮಾಧಾಪುರ ಇಂದು ಅಭಿವೃದ್ದಿಯನ್ನು ಕಂಡಿರುವ ಗ್ರಾಮಗಳ ಪೈಕಿ ಮುಂಚೂಣಿಯಲ್ಲಿದೆ. ಅಷ್ಟೇ ಅಲ್ಲಾ ಭಾರತ ಮಾತ್ರವಲ್ಲ ಏಷ್ಯಾದಲ್ಲಿಯೇ ಅತ್ಯಂತ ಶ್ರೀಮಂತ ಗ್ರಾಮ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

Rs 70000000000 money in bank! this is Asia’s richest village Madhapar, a village in the Kutch district of Gujarat Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories