ಸೋಮವಾರ, ಏಪ್ರಿಲ್ 28, 2025
Homekarnatakaವಾಹನ ಸವಾರರಿಗೆ ಮತ್ತೊಂದು ಶಾಕ್ : ಬೆಂಗಳೂರು ಏರ್ ಪೋರ್ಟ್ ರಸ್ತೆ ಟೋಲ್ ದರ ಹೆಚ್ಚಳ

ವಾಹನ ಸವಾರರಿಗೆ ಮತ್ತೊಂದು ಶಾಕ್ : ಬೆಂಗಳೂರು ಏರ್ ಪೋರ್ಟ್ ರಸ್ತೆ ಟೋಲ್ ದರ ಹೆಚ್ಚಳ

- Advertisement -

ಬೆಂಗಳೂರು : (Airport Road TollRate Increase) ನಿನ್ನೆಯಷ್ಟೇ ಬೆಂಗಳೂರು- ಮೈಸೂರು ನೂತನ ಹೆದ್ದಾರಿಯಲ್ಲಿ ಟೋಲ್‌ ದರ ಹೆಚ್ಚಿಸಿದ ಪ್ರಾಧಿಕಾರ ಇನ್ನೊಂದೆಡೆ ಬೆಂಗಳೂರಿನಿಂದ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯ ಟೋಲ್‌ ದರ ಕೂಡ ಹೆಚ್ಚಿಸಿದೆ. ಮಧ್ಯರಾತ್ರಿಯಿಂದಲೇ ಟೋಲ್‌ ದರ ಹೆಚ್ಚಳವಾಗಿದ್ದು, ಪ್ರಯಾಣಿಕರಿಗೆ ಇನ್ನಷ್ಟು ಹೊಡೆತ ಬಿದ್ದಿದೆ.

ಅಥಾಂಗ್‌ ಟೋಲ್‌ ವೇ ಪ್ರೈವೆಟ್‌ ಲಿಮಿಟೆಡ್‌ ಏರ್ಪೋರ್ಟ್‌ ರಸ್ತೆಯ ನಿರ್ವಹಣೆಯನ್ನು ಹೊತ್ತುಕೊಂಡಿದ್ದು, ಮಧ್ಯರಾತ್ರಿಯಿಂದಲೇ ಟೋಲ್‌ ದರ ಹೆಚ್ಚಳ ಮಾಡಿ ಪ್ರಯಾಣಿಕರಿಗೆ ಶಾಕ್‌ ನೀಡಿದೆ. ನಿನ್ನೆ ಬೆಂಗಳೂರು-ಮೈಸೂರು ಹೆದ್ದಾರಿಯ ಟೋಲ್‌ ದರ ಹೆಚ್ಚಳ ಮಾಡಿ ಏಪ್ರಿಲ್‌ 1 ರಿಂದಲೇ ಜಾರಿಗೆ ಬರುವಂತೆ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ದೇವನಹಳ್ಳಿ ಟೋಲ್‌ ದರ ಕೂಡ ಏರಿಕೆಯಾಗಿದೆ. ದೇವನಹಳ್ಳಿ ಪರಿಷ್ಕೃತ ಟೋಲ್‌ ದರ ಹೀಗಿದೆ.

ಕಾರು, ಜೀಪು, ವ್ಯಾನ್‌, ಲಘು ಮೋಟಾರು ವಾಹನಗಳ ಏಕಮುಖ ಸಂಚಾರಕ್ಕೆ 111 ರೂ (5 ರೂ ಹೆಚ್ಚಳ ),ದ್ವಿಮುಖ ಸಂಚಾರಕ್ಕೆ 170 ರೂ (5 ರೂ ಹೆಚ್ಚಳ) ಮಾಡಲಾಗಿದೆ. ಮಾಸಿಕ ಪಾಸ್‌ ಶುಲ್ಕ 3555 ರಿಂದ 3755 ರೂ ಗೆ ಏರಿಕೆಯಾಗಿದೆ.
ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ, ಮಿನಿ ಬಸ್‌ ಗಳ ಏಕಮುಖ ಸಂಚಾರಕ್ಕೆ 170 ರೂ, ದ್ವಿಮುಖ ಸಂಚಾರಕ್ಕೆ 260 ರೂ ಏರಿಕೆಯಾಗಿದ್ದು, ಮಾಸಿಕ ಪಾಸ್‌ ದರ 5465 ರಿಂದ 5745 ರೂ ಗೆ ಏರಿಸಲಾಗಿದೆ.
ಟ್ರಕ್‌ ಬಸ್‌, 2 ಆಕ್ಸೆಲ್‌ ವಾಹನಗಳಿಗೆ ಏಕಮುಖ ಸಂಚಾರಕ್ಕೆ 345 ರೂ. ದ್ವಿಮುಖ ಸಂಚಾರಕ್ಕೆ 570 ರೂ ಏರಿಕೆಯಾಗಿದ್ದು, ಮಾಸಿಕ ದರ 10,990 ರಿಂದ 11,550 ರೂ ಗೆ ಏರಿಕೆ ಮಾಡಲಾಗಿದೆ.
ಭಾರಿ ವಾಹನಗಳು, 3-6 ಆಕ್ಸೆಲ್‌ ವಾಹನಗಳ ಏಕಮುಖ ಸಂಚಾರಕ್ಕೆ 525 ರೂ, ದ್ವಿಮುಖ ಸಂಚಾರಕ್ಕೆ 790 ರೂ ಏರಿಕೆಯಾಗಿದ್ದು, ಮಾಸಿಕ ದರ 16,680 ರಿಂದ 17,525 ರೂ ಏರಿಕೆಯಾಗಿದೆ.
ಭಾರೀ ಗಾತ್ರದ ವಾಹನಗಳ ಏಕಮುಖ ಸಂಚಾರಕ್ಕೆ 685 ರೂ ಏರಿಕೆಯಾಗಿದ್ದು, ದ್ವಿಮುಖ ಸಂಚಾರಕ್ಕೆ 1025 ರೂ ಏರಿಕೆಯಾಗಿದೆ. ಇನ್ನೂ ಮಾಸಿಕ ದರ 21,730 ರಿಂದ 22,830 ರೂ ಗೆ ಏರಿಕೆಯಾಗಿದೆ.
ಸ್ಥಳೀಯ ಮಾಸಿಕ ಪಾಸ್‌ ದರ 315 ರಿಂದ 330 ರೂ ಏರಿಕೆಯಾಗಿದೆ .

ಇದನ್ನೂ ಓದಿ : E-highway toll rate hike : ಬೆಂಗಳೂರು – ಮೈಸೂರು ಪ್ರಯಾಣಿಕರಿಗೆ ಶಾಕ್ : ಟೋಲ್ ದರದಲ್ಲಿ ಮತ್ತೆ ಏರಿಕೆ

Airport Road TollRate Increase: Another shock for motorists: Bangalore Airport Road Toll Rate Increase

RELATED ARTICLES

Most Popular