ಪ್ರಯಾಣಿಕರಿಗೆ ಬಿಗ್‌ ರಿಲೀಫ್‌ : ಟೋಲ್‌ ದರ ಹೆಚ್ಚಳ ಆದೇಶ ವಾಪಾಸ್‌

ರಾಮನಗರ : (Tollrate hike order withdrawn) ಟೋಲ್‌ ಸಂಗ್ರಹ ಪ್ರಾರಂಭವಾದ ಕೆಲವೇ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್‌ ದರ ಹೆಚ್ಚಳ ಮಾಡಿತ್ತು. ಟೋಲ್‌ ದರ ಹೆಚ್ಚಳಕ್ಕೆ ಸಾರ್ವಜನಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು, ವಿರೋಧಗಳು ವ್ಯಕ್ತವಾದ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು- ಮೈಸೂರು ಹೆದ್ದಾರಿ ಟೋಲ್‌ ದರ ಹೆಚ್ಚಳ ಆದೇಶ ಹಿಂಪಡೆದಿದೆ. ಈಗಿರುವ ಟೋಲ್‌ ದರಕ್ಕಿಂತ ಶೇ 22 ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಸಾರ್ವಜನಿಕರ ಆಕ್ರೋಶದ ಹಿನ್ನಲೆಯಲ್ಲಿ ಆದೇಶ ಹಿಂಪಡೆಯಲಾಗಿದೆ.

ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಟೋಲ್‌ ಸಂಗ್ರಹ ಆರಂಭವಾದ 17 ದಿನಕ್ಕೆ ಎನ್‌ ಎಚ್‌ ಎ ಐ ಟೋಲ್‌ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಈಗಿರುವ ಟೋಲ್ ದರಕ್ಕಿಂದ ಶೇ 22 ರಷ್ಟು ದರ ಹೆಚ್ಚಳ ಮಾಡಲಾಗಿದ್ದು, ಇಂದಿನಿಂದಲೇ ಅಂದರೆ ಏಪ್ರಿಲ್‌ 1 ರಿಂದಲೇ ಜಾರಿಗೆ ಬರುವಂತೆ ತಿಳಿಸಲಾಗಿತ್ತು. ಆದರೆ ಸಾರ್ವಜನಿಕರು ಹಾಗೂ ಪ್ರಯಾಣಿಕರು ಈ ಟೋಲ್‌ ದರ ಹೆಚ್ಚಳದ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹಿಂಪಡೆದಿದೆ.

ಬೆಂಗಳೂರು ಮೈಸೂರು ಹೆದ್ದಾರಿ ಲೋಕಾರ್ಪಣೆಗೆ ಸಿದ್ದವಾಗುತ್ತಿದ್ದಂತೆ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಹಲವು ವಿರೋಧಗಳು, ಪ್ರತಿಭಟನೆಗಳ ನಡುವೆಯೂ ಹೆದ್ದಾರಿ ಲೋಕಾರ್ಪಣೆಗೊಂಡಿದೆ. ಲೋಕಾರ್ಪಣೆಗೊಂಡ ಕೆಲವೇ ದಿನಗಳಲ್ಲಿ ಟೋಲ್‌ ಕೂಡ ಪ್ರಾರಂಭವಾಗಿದೆ. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಮಾರ್ಚ್‌ 14 ರಿಂದಲೇ ಟೋಲ್‌ ಸಂಗ್ರಹ ಪ್ರಾರಂಭವಾಗಿತ್ತು. ಈಗಿರುವ ಟೋಲ್​ ದರ ಹೆಚ್ಚಾಗಿದೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿರುವ ಮಧ್ಯೆಯೇ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ / NHAI) ಮತ್ತೆ ಶೇಕಡಾ 22ರಷ್ಟು ಟೋಲ್​ ದರ ಹೆಚ್ಚಿಸಿತ್ತು. ಆದರೆ ಇದೀಗ ತನ್ನ ಆದೇಶವನ್ನು ಪ್ರಾಧಿಕಾರ ಹಿಂಪಡೆದಿದೆ.

ಇನ್ನೊಂದೆಡೆ ಬೆಂಗಳೂರಿನಿಂದ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯ ಟೋಲ್‌ ದರ ಕೂಡ ಹೆಚ್ಚಿಸಿದೆ. ಮಧ್ಯರಾತ್ರಿಯಿಂದಲೇ ಟೋಲ್‌ ದರ ಹೆಚ್ಚಳವಾಗಿದ್ದು, ಪ್ರಯಾಣಿಕರಿಗೆ ಇನ್ನಷ್ಟು ಹೊಡೆತ ಬಿದ್ದಿದೆ. ಅಥಾಂಗ್‌ ಟೋಲ್‌ ವೇ ಪ್ರೈವೆಟ್‌ ಲಿಮಿಟೆಡ್‌ ಏರ್ಪೋರ್ಟ್‌ ರಸ್ತೆಯ ನಿರ್ವಹಣೆಯನ್ನು ಹೊತ್ತುಕೊಂಡಿದ್ದು, ಮಧ್ಯರಾತ್ರಿಯಿಂದಲೇ ಟೋಲ್‌ ದರ ಹೆಚ್ಚಳ ಮಾಡಿ ಪ್ರಯಾಣಿಕರಿಗೆ ಶಾಕ್‌ ನೀಡಿದೆ. ನಿನ್ನೆ ಬೆಂಗಳೂರು-ಮೈಸೂರು ಹೆದ್ದಾರಿಯ ಟೋಲ್‌ ದರ ಹೆಚ್ಚಳ ಮಾಡಿ ಏಪ್ರಿಲ್‌ 1 ರಿಂದಲೇ ಜಾರಿಗೆ ಬರುವಂತೆ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ದೇವನಹಳ್ಳಿ ಟೋಲ್‌ ದರ ಕೂಡ ಏರಿಕೆಯಾಗಿದೆ.

ಇದನ್ನೂ ಓದಿ : ವಾಹನ ಸವಾರರಿಗೆ ಮತ್ತೊಂದು ಶಾಕ್ : ಬೆಂಗಳೂರು ಏರ್ ಪೋರ್ಟ್ ರಸ್ತೆ ಟೋಲ್ ದರ ಹೆಚ್ಚಳ

ಇದನ್ನೂ ಓದಿ : E-highway toll rate hike : ಬೆಂಗಳೂರು – ಮೈಸೂರು ಪ್ರಯಾಣಿಕರಿಗೆ ಶಾಕ್ : ಟೋಲ್ ದರದಲ್ಲಿ ಮತ್ತೆ ಏರಿಕೆ

ಇದನ್ನೂ ಓದಿ : B.S Yediyurappa : ಸಿದ್ದರಾಮಯ್ಯ ವಿರುದ್ದ ವಿಜಯೇಂದ್ರ : ಹರಕೆ ಕುರಿ ಪ್ಲ್ಯಾನ್ ನಿಂದ ಮಗನನ್ನು ಬಚಾವ್ ಮಾಡಿದ ಬಿ.ಎಸ್.ಯಡಿಯೂರಪ್ಪ

Toll rate hike order withdrawn: Big relief for passengers: Toll rate hike order withdrawn

Comments are closed.