ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಸಾಕಷ್ಟು ಸಿನಿಮಾಗಳು ಯುವ ಪೀಳಿಗೆಗೆ ಮಾದರಿ ಆಗಿದೆ. ನಟ ಪುನೀತ್ ನಮ್ಮನ್ನೆಲ್ಲ ಅಗಲಿ ಒಂದೂವರೆ ವರ್ಷ ಕಳೆಯುತ್ತಾ ಬಂದರೂ ಅವರಿಲ್ಲದ ನೋವು ಯಾರಲ್ಲೂ ಮಾಸಿಲ್ಲ. ಅಷ್ಟೇ ಅಲ್ಲದೇ ಅವರು ಇಂದಿಗೂ ನಮ್ಮೊಂದಿಗೆ ದೈಹಿಕವಾಗಿ ಇಲ್ಲದಿದ್ದರೂ, ಮಾನಸಿಕವಾಗಿ ನಮ್ಮ ಜೊತೆ ಇದ್ದಾರೆ ಎನ್ನುವುದಕ್ಕೆ ಅವರ ಸಾಮಜಕ ಕಾರ್ಯಗಳು ಹಾಗೂ ಅವರ ಸಿನಿಮಾಗಳು ಸಾಕ್ಷಿಯಾಗಿದೆ. ಅದರಲ್ಲೂ ಸಂತೋಷ್ ಆನಂದ್ ರಾಮ್ ನಿರ್ದೇಶನದ “ಯುವರತ್ನ” ಸಿನಿಮಾ ತೆರೆಕಂಡು ಇಂದಿಗೆ (ಏಪ್ರಿಲ್ 1) ಎರಡು ವರ್ಷ (Puneeth Rajkumar – Yuvaratna Movie) ಕಳೆದಿರುತ್ತದೆ. ಈ ಖುಷಿಯ ವಿಚಾರವನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನಿರ್ದೇಶಕ ಸಂತೋಷ್ ಆನಂದ್ ರಾಮ್ ತಮ್ಮ ಟ್ವಿಟರ್‌ನಲ್ಲಿ, ” ಯುವರತ್ನನಿಗೆ 2 ವರ್ಷದ ಸಂಭ್ರಮ. ಯುವಪೀಳಿಗೆಗೆ ನೀವು ಮಾದರಿ” ಎಂದು ಸಿನಿಮಾದ ಅಪ್ಪುವಿನ ಒಂದಷ್ಟು ಪೋಟೋಸ್‌ಗಳನ್ನು ಹಂಚಿಕೊಂಡಿದ್ದಾರೆ. ಈ ಟ್ವೀಟ್‌ಗೆ ಅನೇಕ ಅಪ್ಪು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಉತ್ತಮ ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಭಾಂದವ್ಯದ ಮೇಲೆ ಕಥೆ ನಿಂತಿದ್ದು, ಹೆಚ್ಚಿನ ಸಿನಿಪ್ರೇಕ್ಷಕರಿಗೆ ತಮ್ಮ ಕಾಲೇಜು ಜೀವನ ನೆನಪಿಸಿದಂತೆ ಆಗಿದೆ. ಹೀಗಾಗಿ ಹೆಚ್ಚಿನ ವಿದ್ಯಾರ್ಥಿಗಳು ತಮ್ಮಗೆ ಕಲಿಸಿದ ಗುರುಗಳು ಮನಪೂರ್ವಕವಾಗಿ ನೆನಪಿಸಿಕೊಂಡು ಗೌರವಿಸಿದ್ದಾರೆ.
ಯುವರತ್ನನಿಗೆ 2 ವರ್ಷದ ಸಂಭ್ರಮ ❤️ಯುವಪೀಳಿಗೆಗೆ ನೀವು ಮಾದರಿ👏 @PuneethRajkumar @hombalefilms @MusicThaman @sayyeshaa @Dhananjayaka @Karthik1423 @yogigraj @prakashraaj #appusirliveson pic.twitter.com/wafxWYhara
— Santhosh Ananddram (@SanthoshAnand15) April 1, 2023
ಇದನ್ನೂ ಓದಿ : ಆತ್ಮೀಯ ಗೆಳತಿ ರಕ್ಷಿತಾಗೆ ಬರ್ತಡೆ ವಿಶ್ ಮಾಡಿದ ಚಾಲೆಂಚಿಂಗ್ ಸ್ಟಾರ್ : ಪೋಸ್ಟ್ ಆಯ್ತು ಸಖತ್ ವೈರಲ್
ಇದನ್ನೂ ಓದಿ : Sandalwood is producer K Manju: ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ಸ್ಯಾಂಡಲ್ ವುಡ್ ನಿರ್ಮಾಪಕ
2021 ರ ಯುವರತ್ನ ಆಕ್ಷನ್ ಡ್ರಾಮಾ ಸಿನಿಮಾವಾಗಿದ್ದು , ಸಂತೋಷ್ ಆನಂದ್ ರಾಮ್ ಬರೆದು ನಿರ್ದೇಶಿಸಿದ್ದಾರೆ. ಈ ಸಿನಿಮಾಕ್ಕೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಇದರಲ್ಲಿ ಪುನೀತ್ ರಾಜಕುಮಾರ್, ಸಯೀಶಾ, ಧನಂಜಯ್, ಪ್ರಕಾಶ್ ರಾಜ್, ದಿಗಂತ್ ಮತ್ತು ಸಾಯಿ ಕುಮಾರ್ ನಟಿಸಿದ್ದಾರೆ. ಈ ಸಿನಿಮಾಕ್ಕೆ ಸಂಗೀತವನ್ನು ಎಸ್. ತಮನ್ ಸಂಯೋಜಿಸಿದ್ದಾರೆ. ಛಾಯಾಗ್ರಹಣವನ್ನು ವೆಂಕಟೇಶ್ ಅಂಗುರಾಜ್ ಮತ್ತು ಕ್ರಮವಾಗಿ ಜ್ಞಾನೇಶ್ ಬಿ ಮಠದ್ ಸಂಕಲನ ಮಾಡಿದ್ದಾರೆ. ಸಿನಿಮಾವು 1 ಏಪ್ರಿಲ್ 2021 ರಂದು ಬಿಡುಗಡೆಯಾಗಿದೆ.
Puneeth Rajkumar – Yuvaratna Movie : 2 year celebration of actor Puneeth Rajkumar starrer “Yuvaratna”.