ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಣೆ, ಮಧ್ಯ ಮಾರಾಟ ನಿಷೇಧ

ಬೆಂಗಳೂರು : (Karnataka Election-Alcohol ban) ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದ್ದು, ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಈ ಹಿನ್ನಲೆಯಲ್ಲಿ ಮತದಾನ ನಡೆಯುವ ದಿನ ಹಾಗೂ ಮತ ಎಣಿಕೆ ದಿನ ರಾಜ್ಯಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಅದಲ್ಲದೇ ಇತರೆ ಕಾರ್ಮಿಕರು, ಖಾಸಗಿ ಸಂಸ್ಥೆಗಳ ಸಿಬ್ಬಂದಿಗಳಿಗೆ ವೇತನ ಸಹಿತ ರಜೆಯನ್ನು ಘೋಷಣೆ ಮಾಡಲಾಗಿದೆ.

ರಾಜ್ಯದಲ್ಲಿ ಚುನಾವಣೆಗೆ ಸಿದ್ದತೆಗಳು ಭರದಿಂದ ಸಾಗುತ್ತಿವೆ. ಈ ಮಧ್ಯೆ ಚುನಾವಣಾ ಆಯೋಗವು ಚುನಾವಣೆಯ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಹಿನ್ನಲೆಯಲ್ಲಿ ಮತದಾನ ನಡೆಯುವ ದಿನ (ಏಪ್ರಿಲ್‌ 10 ) ಮತ್ತು ಮತ ಎಣಿಕೆಯ ದಿನ(ಏಪ್ರಿಲ್‌ 13 ) ರಂದು ರಾಜ್ಯಾದ್ಯಂತ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಹೋಟೆಲ್‌, ರೆಸ್ಟೋರೆಂಟ್‌, ಮದ್ಯದಂಗಡಿ, ಪಂಚತಾರಾ ಹೊಟೇಲ್‌, ಸಗಟು ವ್ಯಾಪಾರ ಸೇರಿದಂತೆ ಎಲ್ಲಿಯೂ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಇದಲ್ಲದೇ ಮತದಾನದ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಂಡು ಯಶಸ್ವಿಗೊಳಿಸವಬೇಕೆಂಬ ಉದ್ದೇಶಕ್ಕೆ ಮೇ 10 ರಂದು ಮತದಾನದ ಪ್ರಯುಕ್ತ ವೇತನ ಸಹಿತ ರಜೆ ಘೋಷಣೆ ಮಾಡಲಾಗಿದೆ. ಮತದಾನದ ದಿನ ತುರ್ತು ಸೇವೆ ಹಾಗೂ ಚುನಾವಣಾ ಕಾರ್ಯಕ್ಕಾಗಿ ನಿಯೋಜಿಸಲ್ಪಿಟ್ಟಿರುವ ಸಿಬ್ಬಂದಿಗಳನ್ನು ಹೊರತುಪಡಿಸಿ ಇತರೆ ಕಾರ್ಮಿಕರು, ಖಾಸಗಿ ಸಂಸ್ಥೆಗಳ ಸಿಬ್ಬಂದಿಗೆ ವೇತನ ಸಹಿತ ರಜೆಯನ್ನು ಘೋಷಣೆ ಮಾಡಲಾಗಿದೆ. ಇದಲ್ಲದೇ ಮತ ಎಣಿಕೆಯ ದಿನ ಎಣಿಕೆ ಕಾರ್ಯವನ್ನು ಬೆಳಿಗ್ಗೆ ೮ ಗಂಟೆಗೆ ಆರಂಭಿಸಬೇಕು. ಇದಕ್ಕಾಗಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗಳು ಸಿದ್ದವಾಗಿರಬೇಕು ಎಂದು ಚುನಾವಣಾ ಆಯೋಗ ಸೂಚಿಸಿದೆ.

ಇದಲ್ಲದೇ ಸೇನೆಯಲ್ಲಿ ಕೆಲಸ ಮಾಡುವವರು, ಅನಿವಾಸಿ ಭಾರತೀಯರು ಎಲೆಕ್ಟ್ರಾನಿಕಲಿ ಟ್ರಾನ್ಸ್‌ ಮಿಟೆಡ್‌ ಪೋಸ್ಟಲ್‌ ಬ್ಯಾಲೆಟ್‌ ಪೇಪರ್‌ ವ್ಯವಸ್ಥೆ ಮೂಲಕ ತಮ್ಮ ಹಕ್ಕನ್ನು ಚಲಾಯಿಸುತ್ತಾರೆ. ಇವುಗಳ ಮತ ಎಣಿಕೆ ಪ್ರಾರಂಭದ ವೇಳೆ ರಿಟರ್ನಿಂಗ್‌ ಅಧಿಕಾರಿಗಳು ಮತ್ತು ಸಹಾಯಕ ರಿಟರ್ನಿಂಗ್‌ ಅಧಿಕಾರಿಗಳು ಮೊಬೈಲ್‌ ಅನ್ನು ಪಾಸ್‌ ವರ್ಡ್‌ ಗಾಗಿ ಮಾತ್ರ ಬಳಕೆ ಮಾಡಬೇಕು. ಪಾಸ್‌ ವರ್ಡ್‌ ಪ್ರಕ್ರಿಯೆ ಮುಗಿದ ನಂತರ ಮೊಬೈಲ್‌ ಅನ್ನು ಮತ ಎಣಿಕೆ ಕೇಂದ್ರದ ಹಿರಿಯ ಅಧಿಕಾರಿಗಳಿಗೆ ಹಸ್ತಾಂತರಿಸಬೇಕು ಎಂದು ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಇದನ್ನೂ ಓದಿ : ಮತದಾರರು ನೋಟಾ ವೋಟ್‌ ಹಾಕಿದ್ರೆ ಏನಾಗುತ್ತೆ : ವಿವರಣೆ ಕೊಟ್ಟ ನಟ ಉಪೇಂದ್ರ

ಇದನ್ನೂ ಓದಿ : B.S Yediyurappa : ಸಿದ್ದರಾಮಯ್ಯ ವಿರುದ್ದ ವಿಜಯೇಂದ್ರ : ಹರಕೆ ಕುರಿ ಪ್ಲ್ಯಾನ್ ನಿಂದ ಮಗನನ್ನು ಬಚಾವ್ ಮಾಡಿದ ಬಿ.ಎಸ್.ಯಡಿಯೂರಪ್ಪ

Karnataka Election-Alcohol ban: Announcement of paid leave for workers, ban on mid-sale

Comments are closed.