ಭಾನುವಾರ, ಮೇ 11, 2025
HomeSportsCricketShreyas Iyer surgery success : ಶ್ರೇಯಸ್ ಅಯ್ಯರ್‌ಗೆ ಲಂಡನ್‌ನಲ್ಲಿ ಸಕ್ಸಸ್‌ಫುಲ್ ಸರ್ಜರಿ, ಮುಂಬೈಕರ್ ಕಂಬ್ಯಾಕ್...

Shreyas Iyer surgery success : ಶ್ರೇಯಸ್ ಅಯ್ಯರ್‌ಗೆ ಲಂಡನ್‌ನಲ್ಲಿ ಸಕ್ಸಸ್‌ಫುಲ್ ಸರ್ಜರಿ, ಮುಂಬೈಕರ್ ಕಂಬ್ಯಾಕ್ ಯಾವಾಗ ಗೊತ್ತಾ?

- Advertisement -

ಲಂಡನ್ : ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ಶ್ರೇಯಸ್ ಅಯ್ಯರ್ (Shreyas Iyer), ತಮ್ಮ ಬೆನ್ನು ನೋವಿನ ಸಮಸ್ಯೆಗೆ ಲಂಡನ್’ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆಗೊಳಲಾಗಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕತ್ವ ವಹಿಸಬೇಕಿದ್ದ 28 ವರ್ಷದ ಶ್ರೇಯಸ್ ಅಯ್ಯರ್, ಬೆನ್ನು ನೋವಿನ ಕಾರಣ ಐಪಿಎಲ್ ಟೂರ್ನಿಯಿಂದ (Shreyas Iyer surgery success) ಹೊರಗುಳಿದಿದ್ದರು. ಬೆನ್ನು ನೋವಿನ ಸಮಸ್ಯೆ ಗಂಭೀರ ಸ್ವರೂಪದ್ದಾಗಿರುವ ಕಾರಣ ಲಂಡನ್’ನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗುವಂತೆ ಶ್ರೇಯಸ್ ಅಯ್ಯರ್’ಗೆ ಬಿಸಿಸಿಐ ಸೂಚನೆ ನೀಡಿತ್ತು. ಅದರಂತೆ ಅಯ್ಯರ್, ಲಂಡನ್’ನ ಖ್ಯಾತ ಆಸ್ಪತ್ರೆಯಲ್ಲಿ ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ.

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ವೇಳೆ ಬೆನ್ನು ನೋವು ಉಲ್ಬಣಗೊಂಡಿದ್ದ ಕಾರಣ ಶ್ರೇಯಸ್ ಅಯ್ಯರ್ ಸರಣಿಯ ಮಧ್ಯದಲ್ಲೇ ಟೀಮ್ ಇಂಡಿಯಾ ಕ್ಯಾಂಪ್ ತೊರೆದಿದ್ದರು. ಆಯುರ್ವೇದಿಕ್ ಔಷಧಿಯಿಂದಲೇ ಗಾಯದ ಸಮಸ್ಯೆಯಿಂದ ಹೊರ ಬರುವ ಅಯ್ಯರ್ ಪ್ರಯತ್ನಕ್ಕೆ ಫಲ ಸಿಕ್ಕಿರಲಿಲ್ಲ. ಶಸ್ತ್ರಚಿಕಿತ್ಸೆ ನಡೆಸಿಕೊಳ್ಳಲೇಬೇಕು ಎಂದು ಬಿಸಿಸಿಐ ಅಯ್ಯರ್’ಗೆ ಕಟ್ಟು ನಿಟ್ಟಿನ ಸೂಚನೆ ನೀಡಿತ್ತು. ಶ್ರೇಯಸ್ ಅಯ್ಯರ್ ಚೇತರಿಕೆಗೆ ಕನಿಷ್ಠ 4 ತಿಂಗಳು ಹಿಡಿಯಲಿದ್ದು, ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ 3 ವಾರಗಳ ಕಾಲ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಹೀಗಾಗಿ ಐಪಿಎಲ್ ಮುಗಿದ ಬೆನ್ನಲ್ಲೇ ಲಂಡನ್’ನ ಓವಲ್ ಮೈದಾನದಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್’ಗೆ (ICC World Test Championship 2023 Final – WTC final) ಶ್ರೇಯಸ್ ಅಯ್ಯರ್ ಅಲಭ್ಯರಾಗಲಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಮಧ್ಯೆ ನಡೆಯಲಿರುವ WTC ಫೈನಲ್ ಪಂದ್ಯ ಓವಲ್ ಮೈದಾನದಲ್ಲಿ ಜೂನ್ 7ರಂದು ಆರಂಭವಾಗಲಿದೆ. ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಮುಂಬೈನ ಅನುಭವಿ ಬ್ಯಾಟ್ಸ್’ಮನ್ ಅಜಿಂಕ್ಯ ರಹಾನೆ WTC ಫೈನಲ್’ಗೆ ಭಾರತ ತಂಡ ಸೇರಿಕೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ : Virat Kohli New Record : ಐಪಿಎಲ್‌ನಲ್ಲಿ ಯಾರೂ ಮಾಡಲಾಗದ ದಾಖಲೆ ಬರೆದ “ಕಿಂಗ್” ವಿರಾಟ್ ಕೊಹ್ಲಿ

ಇದನ್ನೂ ಓದಿ : MS Dhoni – Ravichandran Ashwin : “ಟ್ರ್ಯಾಕ್ಟರ್” ಓಡಿಸುತ್ತಿದ್ದ ಧೋನಿ ಸಿಕ್ಸರ್ ಬಾರಿಸುತ್ತಿರುವುದನ್ನು ನೋಡಿ ದಂಗಾದ ಅಶ್ವಿನ್

ಭಾರತ ಏಕದಿನ ತಂಡದ ಪ್ರಮುಖ ಆಟಗಾರನಾಗಿರುವ ಶ್ರೇಯಸ್ ಅಯ್ಯರ್, ಇದೇ ವರ್ಷ ಭಾರತದಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಲಭ್ಯರಾಗಲಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ನಡೆಯಲಿದ್ದು, ಇಡೀ ಟೂರ್ನಿಗೆ ಇದೇ ಮೊದಲ ಬಾರಿ ಭಾರತ ಆತಿಥ್ಯ ವಹಿಸಲಿದೆ. ಐಪಿಎಲ್’ಗೆ ಶ್ರೇಯಸ್ ಅಯ್ಯರ್ ಅಲಭ್ಯರಾಗಿರುವ ಕಾರಣ, ದೆಹಲಿಯ ಮಧ್ಯಮ ಕ್ರಮಾಂಕದ ಎಡಗೈ ಬ್ಯಾಟ್ಸ್’ಮನ್ ನಿತೀಶ್ ರಾಣಾ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

Shreyas Iyer surgery success : Shreyas Iyer had a successful surgery in London, do you know when the Mumbaikar comeback?

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular