Twitter Blue tick : 657 ರೂ.ಗಾಗಿ ಟ್ವಿಟರ್ ಬ್ಲೂ ಟಿಕ್ ಕಳೆದುಕೊಂಡ ಕೊಹ್ಲಿ, ಧೋನಿ, ರೋಹಿತ್, ರಾಹುಲ್

ಬೆಂಗಳೂರು : ಸೆಲೆಬ್ರಿಟಿಗಳು ತಮ್ಮ ಅಕೌಂಟ್’ನಲ್ಲಿ ಬ್ಲೂ ಟಿಕ್ ಹೊಂದಿರುವುದು ಸಾಮಾನ್ಯ. ಸೆಲೆಬ್ರಿಟಿಗಳ ಅಧಿಕೃತ ಟ್ವಿಟರ್ ಖಾತೆ ಎಂಬುದಕ್ಕೆ ಪುರಾವೆಯೇ (Twitter Blue tick) ಈ ಬ್ಲೂ ಟಿಕ್. ಟೀಮ್ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli), ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni), ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma), ಲಕ್ನೋ ಸೂಪರ್ ಜೈಂಟ್ಸ್ ಸಾರಥಿ ಕೆ.ಎಲ್ ರಾಹುಲ್ (KL Rahul) ಸಹಿತ ಪ್ರಮುಖ ಕ್ರಿಕೆಟ್ ತಾರೆಗಳು ತಮ್ಮ ಟ್ವಿಟರ್ ಖಾತೆಯಲ್ಲಿ ಬ್ಲೂ ಟಿಕ್ ಹೊಂದಿದ್ದರು.

ಆದರೆ ಇವರೆಲ್ಲರ ಟ್ವಿಟರ್’ನಲ್ಲಿ ಗುರುವಾರದಿಂದ ಬ್ಲೂ ಟಿಕ್ ಕಾಣುತ್ತಿಲ್ಲ. ಕೆಲ ಸೆಲೆಬ್ರಿಟಿಗಳ ಬ್ಲೂ ಟಿಕ್ ಅನ್ನು ಟ್ವಿಟರ್ ಸಂಸ್ಥೆ ತೆಗೆದು ಹಾಕಿದೆ. ಕಾರಣವೇನು ಗೊತ್ತಾ? ಟ್ವಿಟರ್ ಸಂಸ್ಥೆಯ ಸಿಇಒ ಎಲಾನ್ ಮಸ್ಕ್ ಜಾರಿಗೆ ತಂದಿರುವ ನಿಯಮ. ಖ್ಯಾತ ಉದ್ಯಮಿ ಎಲಾನ್ ಮಸ್ಕ್ ಕಳೆದ ವರ್ಷದ ಅಕ್ಟೋಬರ್’ನಲ್ಲಿ ಟ್ವಿಟರ್ ಸಂಸ್ಥೆಯನ್ನು 44 ಬಿಲಿಯನ್ ಯುಎಸ್ ಡಾಲರ್ (3,61,550 ರೂ.) ಮೊತ್ತಕ್ಕೆ ಖರೀದಿಸಿದ್ದರು. ಎಲನ್ ಮಸ್ಕ್ ಟ್ವಿಟರ್ ಸಂಸ್ಥೆಯ ಸಿಇಒ ಆದ ನಂತರ ಒಂದು ನಿಯಮವನ್ನು ಜಾರಿಗೆ ತಂದಿದ್ದಾರೆ. ಟ್ವಿಟರ್’ನಲ್ಲಿ ಯಾರೆಲ್ಲಾ ಬ್ಲೂ ಟಿಕ್ ಹೊಂದಿದ್ದಾರೋ ಅವರೆಲ್ಲಾ ಬ್ಲೂ ಟಿಕ್’ಗಾಗಿ ಹಣ ಟ್ವಿಟರ್ ಸಂಸ್ಥೆಗೆ ಹಣ ಪಾವತಿ ಮಾಡಬೇಕೆಂಬ ನಿಯಮವನ್ನು ಎಲನ್ ಮಸ್ಕ್ ಪರಿಚಯಿಸಿದ್ದರು.

ಬ್ಲೂ ಟಿಕ್ ಬೇಕು ಎಂದಾದಲ್ಲಿ ಪ್ರತಿಯೊಬ್ಬರು ಪ್ರತೀ ತಿಂಗಳು 8 ಡಾಲರ್ (657 ರೂ.) ಮೊತ್ತವನ್ನು ಟ್ವಿಟರ್ ಸಂಸ್ಥೆಗೆ ಪಾವತಿಸಬೇಕು. ಇದರಂತೆ ಕೆಲ ಸೆಲೆಬ್ರಿಟಿಗಳು ನಿರ್ದಿಷ್ಟ ಹಣ ಪಾವತಿ ಮಾಡಿ ಟ್ವಿಟರ್’ನಲ್ಲಿ ತಮ್ಮ ಬ್ಲೂ ಟಿಕ್ ಮಾರ್ಕ್ ಉಳಿಸಿಕೊಂಡಿದ್ದಾರೆ. ಆದರೆ ಹಣ ಪಾವತಿ ಮಾಡಲು ನಿರಾಕರಿಸಿದವರ ಬ್ಲೂ ಟಿಕ್ ಮಾರ್ಕ್ ಅನ್ನು ಟ್ವಿಟರ್ ತೆಗೆದು ಹಾಕಿದೆ.

https://twitter.com/imVkohli?s=20

https://twitter.com/ImRo45?s=20

https://twitter.com/klrahul?s=20

ಇದನ್ನೂ ಓದಿ : Shreyas Iyer surgery success : ಶ್ರೇಯಸ್ ಅಯ್ಯರ್‌ಗೆ ಲಂಡನ್‌ನಲ್ಲಿ ಸಕ್ಸಸ್‌ಫುಲ್ ಸರ್ಜರಿ, ಮುಂಬೈಕರ್ ಕಂಬ್ಯಾಕ್ ಯಾವಾಗ ಗೊತ್ತಾ?

ವಿರಾಟ್ ಕೊಹ್ಲಿ, ಎಂ.ಎಸ್ ಧೋನಿ, ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ ಸಹಿತ ಪ್ರಮುಖ ಕ್ರಿಕೆಟಿಗರು ಬ್ಲೂ ಟಿಕ್’ಗಾಗಿ ಟ್ವಿಟರ್’ಗೆ ಹಣ ಪಾವತಿ ಮಾಡಲು ನಿರಾಕರಿಸಿದ್ದಾರೆ. ಬ್ಲೂ ಟಿಕ್’ಗೆ ಹಣ ಪಾವತಿ ಮಾಡುವ ನಿಯಮ ಜಾರಿಗೆ ಬರುವ ಮುನ್ನ ಭಾರತದಲ್ಲಿ ಸುಮಾರು 30 ಲಕ್ಷ ಮಂದಿ ತಮ್ಮ ಟ್ವಿಟರ್ ಅಕೌಂಟ್’ಗೆ ಬ್ಲೂ ಟಿಕ್ ಮಾರ್ಕ್ ಹೊಂದಿದ್ದರು.

Twitter Blue tick: Kohli, Dhoni, Rohit, Rahul lose Twitter Blue tick for Rs 657

Comments are closed.