ಭಾನುವಾರ, ಏಪ್ರಿಲ್ 27, 2025
HomeCrimeಸಿಗರೇಟ್‌ ಸೇದುವುದನ್ನು ನೋಡಿದ್ದಕ್ಕೆ 12 ವರ್ಷದ ಬಾಲಕನ ಕೊಲೆಗೈದ ಸಹಪಾಠಿಗಳು !

ಸಿಗರೇಟ್‌ ಸೇದುವುದನ್ನು ನೋಡಿದ್ದಕ್ಕೆ 12 ವರ್ಷದ ಬಾಲಕನ ಕೊಲೆಗೈದ ಸಹಪಾಠಿಗಳು !

- Advertisement -

ನವದೆಹಲಿ: ಆತ ಶಾಲೆಯ ಆವರಣದಲ್ಲಿ ನಿಂತಿದ್ದ, ಈ ವೇಳೆಯಲ್ಲಿ ತನ್ನ ತರಗತಿಯ ವಿದ್ಯಾರ್ಥಿಗಳಿಬ್ಬರು ಸಿಗರೇಟ್‌ ಸೇದುತ್ತಿದ್ದರು. ಇದನ್ನು ನೋಡಿದ 12 ವರ್ಷದ ಬಾಲಕ ಪೋಷಕರಿಗೆ ಹಾಗೂ ಶಾಲಾ ಮುಖ್ಯಸ್ಥರಿಗೆ ದೂರು (Classmates killed boy) ನೀಡುವುದಾಗಿ ತಿಳಿಸಿದ್ದಾನೆ. ಇಷ್ಟಕ್ಕೆ ಕೋಪಗೊಂಡ ಸಹಪಾಠಿಗಳು ಬಾಲಕನನ್ನು ಕೊಲೆಗೈದು ಚರಂಡಿಯಲ್ಲಿ ಎಸೆದು ಪರಾರಿಯಾಗಿದ್ದಾರೆ.

ರಾತ್ರಿ 8.20 ರ ಸುಮಾರಿಗೆ ಶಾಲಾ ಮಗುವಿನ ಶವವು ದೆಹಲಿಯ ಬದರ್‌ಪುರದ ಸರ್ಕಾರಿ ಶಾಲೆಯೊಂದರ ಬಳಿ ಚರಂಡಿಯಲ್ಲಿ ಬಿದ್ದಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಬದರ್‌ಪುರ ಪೊಲೀಸರು ಶವವನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದರು. ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ವೇಳೆಯಲ್ಲಿ ಮಾರಕಾಸ್ತ್ರಗಳಿಂದ ಹೊಡೆದು ಸಾಯಿಸಿರುವುದು ಕಂಡು ಬಂದಿದೆ.

ಬಾಲಕ ಸ್ಥಳೀಯ ಶಾಲೆಯ ವಿದ್ಯಾರ್ಥಿ ಅನ್ನೋದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಬಾಲಕನ ತರಗತಿಯಲ್ಲಿ ಓದುತ್ತಿರುವ ಇಬ್ಬರು ಅಪ್ರಾಪ್ತರನ್ನು ಬಂಧಿಸಲಾಗಿದೆ. ತನಿಖೆಯ ಸಮಯದಲ್ಲಿ, ಈ ಇಬ್ಬರು ಅಪ್ರಾಪ್ತರು ಶಾಲಾ ಆವರಣದಲ್ಲಿ ಸಿಗರೇಟ್ ಸೇದುವುದನ್ನು ಬಾಲಕ ನೋಡಿದ ಮತ್ತು ಶಾಲೆಯ ಅಧಿಕಾರಿಗಳಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ. ನಂತರ ಆರೋಪಿಗಳು ಆಮಿಷ ಒಡ್ಡಿದರು. ಆತನನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಆತನ ಮೇಲೆ ಹಲ್ಲೆ ನಡೆಸಿದ್ದು, ಇದರ ಪರಿಣಾಮವಾಗಿ ಆತನ ತಲೆಗೆ ಹಲವಾರು ಗಾಯಗಳಾಗಿದ್ದು, ಅಂತಿಮವಾಗಿ ಮಾರಣಾಂತಿಕವಾಗಿ ಪರಿಣಮಿಸಿದೆ” ಎಂದು ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ರಾಜೇಶ್ ಡಿಯೋ ಹೇಳಿದ್ದಾರೆ.

ಇದನ್ನೂ ಓದಿ : ಇಂದು ಆಫ್ತಾಬ್ ಪೂನಾವಾಲಾ ವಿರುದ್ಧದ ಆರೋಪದ ಕುರಿತು ಮಹತ್ವದ ಆದೇಶ ನೀಡಲಿದೆ ದೆಹಲಿ ಕೋರ್ಟ್

ಇದನ್ನೂ ಓದಿ : Zia Khan Suicide Case : ಕುಮ್ಮಕ್ಕು ನೀಡಿದ ಆರೋಪದಿಂದ ಸೂರಜ್ ಪಾಂಚೋಲಿಗೆ ಖುಲಾಸೆಗೊಳಿಸಿದ ಸಿಬಿಐ ಕೋರ್ಟ್

ಇಬ್ಬರು ಬಾಲಕರು ಬಾಲಾಪರಾಧಿಗಳಾಗಿದ್ದು ಇಬ್ಬರನ್ನೂ ಬಾಲನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟಿನಲ್ಲಿ ಮಾಡದ ತಪ್ಪಿಗೆ ಬಾಲಕನೋರ್ವ ಬಾರದ ಲೋಕ ಸೇರಿದ್ದು ಮಾತ್ರ ದುರಂತ.

Classmates killed boy : 12-year-old boy was killed by his classmates for seeing him smoking a cigarette!

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular