ಮಂಗಳವಾರ, ಏಪ್ರಿಲ್ 29, 2025
HomeSportsCricketಕೆಎಲ್ ರಾಹುಲ್, ಜಯದೇವ್ ಉನದ್ಕತ್ ಗೆ ಗಾಯ : ಟೀಂ ಇಂಡಿಯಾಕ್ಕೆ ಹೊಸ ತಲೆನೋವು

ಕೆಎಲ್ ರಾಹುಲ್, ಜಯದೇವ್ ಉನದ್ಕತ್ ಗೆ ಗಾಯ : ಟೀಂ ಇಂಡಿಯಾಕ್ಕೆ ಹೊಸ ತಲೆನೋವು

- Advertisement -

ಲಕ್ನೋ: ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಮತ್ತು ಅನುಭವಿ ಎಡಗೈ ಸೀಮರ್ ಜಯದೇವ್ ಉನದ್ಕತ್ (KL Rahul – Jaydev Unadkat) ಅವರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಇಬ್ಬರೂ ಕೂಡ ಜೂನ್ 7-11 ರಿಂದ ಓವಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧದ ಉನ್ನತ ಮಟ್ಟದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ನಿಂದ ಹೊರ ಬೀಳುವ ಸಾಧ್ಯತೆಯಿದ್ದು, ಟೀಂ ಇಂಡಿಯಾಕ್ಕೆ ಹೊಸ ತಲೆನೋವು ಶುರುವಾಗಿದೆ.

ಸೋಮವಾರ ನಡೆದ ಐಪಿಎಲ್ 2023 ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಹಿರಿಯ ವಿಕೆಟ್ ಕೀಪರ್-ಬ್ಯಾಟರ್ ರಾಹುಲ್ ಅವರ ಬಲ ತೊಡೆಗೆ ಗಾಯವಾಗಿದೆ. ಎರಡನೇ ಓವರ್‌ನ ಕೊನೆಯ ಬಾಲ್‌ನಲ್ಲಿ ಫಾಫ್ ಡು ಪ್ಲೆಸಿಸ್ ಅವರು ಮಾರ್ಕಸ್ ಸ್ಟೊಯಿನಿಸ್ ಎಸೆತವನ್ನು ಎಕ್ಸ್‌ಟ್ರಾ ಕವರ್ ಪ್ರದೇಶದ ಮೂಲಕ ಪಂಚ್ ಮಾಡಿದರು ಮತ್ತು ರಾಹುಲ್ ಸನ್ನಿಹಿತವಾದ ಬೌಂಡರಿ ಉಳಿಸಲು ಚೆಂಡನ್ನು ಅಟ್ಟಿಕೊಂಡು ಹೋಗವ ವೇಳೆಯಲ್ಲಿ ಕೆ.ಎಲ್.ರಾಹುಲ್‌ ಗಾಯಗೊಂಡಿದ್ದಾರೆ. ಅವರನ್ನು ಕೂಡ ಫಿಸಿಯೋ ಮೈದಾನದಿಂದ ಹೊರಗೆ ಕರೆದೊಯ್ದಿದ್ದಾರೆ.

ಕೆ.ಎಲ್.ರಾಹುಲ್‌ ಅನುಪಸ್ಥಿತಿಯಲ್ಲಿ ತಂಡ ಉಪನಾಯಕ ಕೃನಾಲ್‌ ಪಾಂಡ್ಯ ಅವರ ಸೂಚನೆಯ ಮೇರೆಗೆ ಆಯುಷ್‌ ಬಡೋನಿ ಹಾಗೂ ಕೈಲ್‌ ಮೇಯರ್ಸ್‌ ಇನ್ನಿಂಗ್ಸ್‌ ಆರಂಭಿಸಿದ್ದರು. ರಾಹುಲ್ ಹಿಪ್ ಫ್ಲೆಕ್ಟರ್ ಸ್ನಾಯುವನ್ನು ಎಳೆದಿದ್ದಾರೆ. ಆದರೆ ರಾಹುಲ್‌ ಗೆ ಯಾವ ಸ್ವರೂಪದ ಗಾಯವಾಗಿದೆ ಅನ್ನೋದು ಇನ್ನೂ ತಿಳಿದುಬಂದಿಲ್ಲ. ಗಾಯಗೊಂಡಿದ್ದರೂ ಕೂಡ ರಾಹುಲ್ ಕೊನೆಯ ಆಟಗಾರನಾಗಿ ಬ್ಯಾಟಿಂಗ್‌ಗೆ ಬಂದಿದ್ದರು.

ಆದರೆ ರನ್‌ ಗಳಿಸಲು ಸಾಧ್ಯವಾಗಿರಲಿಲ್ಲ. ಇನ್ನು ಲಕ್ನೋ ತಂಡದ ಬೌಲರ್‌ ಉನಾದ್ಕತ್‌ ಅವರು ನೆಟ್ಸ್‌ನಲ್ಲಿ ಬೌಲಿಂಗ್‌ ಮಾಡುವ ವೇಳೆಯಲ್ಲಿ ಜಾರಿ ಬಿದ್ದು, ಎಡಭುಜ ಗಾಯಗೊಂಡಿದ್ದಾರೆ. ನೋವಿನಿಂದ ಬಳಲುತ್ತಿದ್ದ ಉನಾದ್ಕತ್‌ ಗೆ ತಂಡದ ಫಿಸಿಯೋ ಐಸ್‌ ಪ್ಯಾಕ್‌ ಹಾಕಿದ್ದಾರೆ. ಈ ಇಬ್ಬರು ಆಟಗಾರರು ಯಾವ ಸ್ವರೂಪದಲ್ಲಿ ಗಾಯಗೊಂಡಿದ್ದಾರೆ ಅನ್ನೋದನ್ನು ಟೀಂ ಮ್ಯಾನೇಜ್ಮೆಂಟ್‌ ಹೇಳಿಲ್ಲ.

ಬದಲಿ ಆಯ್ಕೆಗಳು: ಅರ್ಶ್ದೀಪ್, ಯಶಸ್ವಿ, ಕಿಶನ್
WTC ಫೈನಲ್‌ಗಾಗಿ ಭಾರತ ತಂಡ ಇನ್ನೂ ಆಡುವ ಬಳಗವನ್ನೂ ಇನ್ನೂ ಫೈನಲ್‌ ಮಾಡಿಲ್ಲ. ವೃಷಭ್‌ ಪಂತ್‌ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ವಿಕೆಟ್‌ ಕೀಪರ್‌ ಕೊರತೆಯನ್ನು ಎದುರಿಸುತ್ತಿದೆ. ಹೀಗಾಗಿ ಕೆ.ಎಲ್.ರಾಹುಲ್‌ ಕೀಪರ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಇನ್ನೊಂದೆಡೆಯಲ್ಲಿ ಕೆ.ಎಸ್.ಭರತ್‌ ಅವರನ್ನು ಪುಲ್‌ ಟೈಂ ಕೀಪರ್‌ ಆಗಿ ತಂಡದಲ್ಲಿ ಉಳಿಸಿಕೊಳ್ಳಲು ಟೀಂ ಇಂಡಿಯಾ ಕಸರತ್ತು ನಡೆಸುತ್ತಿದೆ.

ಇದನ್ನೂ ಓದಿ : Virat Kohli Vs Shubman Gill : ಮ್ಯಾಚ್, ರನ್, ಸರಾಸರಿ, ಸ್ಟ್ರೈಕ್‌ರೇಟ್ ಎಲ್ಲವೂ ಸೇಮ್ ಟು ಸೇಮ್, ಇದು ಕಿಂಗ್-ಪ್ರಿನ್ಸ್ ಮ್ಯಾಜಿಕ್

ಇನ್ನೊಂದೆಡೆಯಲ್ಲಿ ಇರಾನಿ ಕಪ್‌ನಲ್ಲಿ ದ್ವಿಶತಕ ಮತ್ತು ಐಪಿಎಲ್‌ ನಲ್ಲಿ ಶತಕ ಬಾರಿಸಿರುವ ಯಶಸ್ವಿ ಜೈಸ್ವಾಲ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ ತಂಡದ ಬ್ಯಾಟಿಂಗ್‌ ಬಲವನ್ನು ವೃದ್ದಿಸುವ ಸಾಧ್ಯತೆಯಿದೆ. ಉಳಿದಂತೆ ಅಭಿಮನ್ಯು ಈಶ್ವರನ್‌ ಹಾಗೂ ಇಶಾನ್‌ ಕಿಶಾನ್‌ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಒಂದೊಮ್ಮೆ ಉನಾದ್ಕತ್‌ ತಂಡದಿಂದ ಹೊರಬಿದ್ರೆ ಅರ್ಶದೀಪ್‌ ಸಿಂಗ್‌, ಮುಖೇಶ್ ಕುಮಾರ್, ನವದೀಪ್ ಸೈನಿ, ಉಮೇಶ್ ಯಾದವ್, ಶಾರ್ದೂಲ್ ಠಾಕೂರ್ ಕೂಡ ತಂಡ ಸೇರುವ ಸಾಧ್ಯತೆಯಿದೆ.

KL Rahul – Jaydev Unadkat: Injury to KL Rahul, Jaydev Unadkat: New headache for Team India

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular