ಸೋಮವಾರ, ಏಪ್ರಿಲ್ 28, 2025
HomeCinemaSarath Babu : ಅಮೃತವರ್ಷಿಣಿ ಖ್ಯಾತಿಯ ಹಿರಿಯ ನಟ ಶರತ್ ಬಾಬು ಇನ್ನಿಲ್ಲ

Sarath Babu : ಅಮೃತವರ್ಷಿಣಿ ಖ್ಯಾತಿಯ ಹಿರಿಯ ನಟ ಶರತ್ ಬಾಬು ಇನ್ನಿಲ್ಲ

- Advertisement -

ಬೆಂಗಳೂರು: ಅಮೃತವರ್ಷೀನಿ ಖ್ಯಾತಿಯ ಹಿರಿಯ ನಟ ಶರತ್ ಬಾಬು (Sarath Babu) ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶರತ್ ಬಾಬು ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ ಎಂದು ಸುದ್ದಿಯಾಗಿತ್ತು. ಆದ್ರೆ ಕುಟುಂಬಸ್ಥರು ಸಾವಿನ ಸುದ್ದಿಯನ್ನು ಅಲ್ಲಗಳೆದಿದ್ದಾರೆ.

ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶರತ್‌ ಬಾಬು ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆರೋಗ್ಯ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಹೈದರಾಬಾದ್ ಆಸ್ಪತ್ರೆ (Hyderbad Hospital) ಸ್ಥಳಾಂತರಿಸಲಾಗಿತ್ತು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಶರತ್‌ ಬಾಬು ಅವರು ಬಹು ಅಂಗಾಗ ವೈಫಲ್ಯವನ್ನು ಅನುಭವಿಸಿದ್ದರು.

ಮಲಯಾಲಂ, ತೆಲುಗು, ತಮಿಳು ಮಾತ್ರವಲ್ಲದೇ ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದ ದಕ್ಷಿಣ ಭಾರತದ ಹಿರಿಯ ನಟ ಶರತ್‌ ಬಾಬು ಹಲವು ಸದಬಿರುಚಿಯ ಸಿನಿಮಾಗಳನ್ನು ನೀಡಿದ್ದಾರೆ. ಕನ್ನಡದ ಸೂಪರ್‌ ಹಿಟ್‌ ಸಿನಿಮಾ ಅಮೃತವರ್ಷಿಣಿ ಸೇರಿದಂತೆ ಕನ್ನಡದಲ್ಲಿ ಸುಮಾರು 20ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಮೃತವರ್ಷಿಣಿ ಸಿನಿಮಾ ಶರತ್‌ ಬಾಬು ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿತ್ತು. ಕೊನೆಯದಾಗಿ ಅವರು ವಕೀಲ್‌ ಸಾಬ್‌ ಸಿನಿಮಾದಲ್ಲಿ ನಟಿಸಿದ್ದರು. ರಣಚಂಡಿ, ಶಕ್ತಿ, ಕಂಪನ, ಗಾಯ, ಹೃದಯ ಹೃದಯ, ನೀಲ, ನಮ್ಮೆಜಮಾಸ್ರು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಶರತ್ ಬಾಬು ಅವರು ರಮಾಪ್ರಭಾ ಮತ್ತು ಸ್ನೇಹಾ ನಂಬಿಯಾರ್ ಅವರನ್ನು ವಿವಾಹವಾಗಿದ್ದರು. ಆದರೆ ಇಬ್ಬರಿಗೂ ಕೂಡ ವಿಚ್ಚೇದನವನ್ನು ನೀಡಿದ್ದರು.

ಇದನ್ನೂ ಓದಿ : ನಟಿ ಮೇಘನಾರಾಜ್‌ ಸರ್ಜಾಗೆ ಹುಟ್ಟುಹಬ್ಬದ ಸಂಭ್ರಮ

ಇದನ್ನೂ ಓದಿ : ಮೊದಲ ವಾರದಲ್ಲೇ ಒಂದು ಕೋಟಿಯಷ್ಟು ಕಲೆಕ್ಷನ್‌ ಕಂಡ ರಾಘವೇಂದ್ರ ಸ್ಟೋರ್ಸ್‌ ಸಿನಿಮಾ

Actor sarath babu passe away at 71 in Hyderabad

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular