ಬೆಂಗಳೂರು : ವಿಶ್ವ ಅಥ್ಲೆಟಿಕ್ಸ್ ಗೋಲ್ಡ್ ಲೇಬಲ್ ಟಿಸಿಎಸ್ ವರ್ಲ್ಡ್ 10ಕೆ ಬೆಂಗಳೂರು (TCS World 10K Bengaluru) 15ನೇ ಆವೃತ್ತಿಗೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿದೆ. ಮೇ 21ರಂದು ನಡೆಯಲಿರುವ ಮ್ಯಾರಾಥಾನ್‌ಗಾಗಿ ಈಗಾಗಲೇ 27,000 ಕ್ಕೂ ಹೆಚ್ಚು ಸ್ಪರ್ಧಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ವಿಶ್ವದ ನಾಲ್ಕನೇ ವೇಗದ ಮ್ಯಾರಥಾನ್ ಓಟಗಾರ ಇಥಿಯೋಪಿಯಾ ಬಿರ್ಹಾನು ಲೆಗೆಸ್ ಮತ್ತು ಮಹಿಳೆಯರ ಹಾಲಿ ಚಾಂಪಿಯನ್ ಕೀನ್ಯಾದ ಇರಿನ್ ಚೆಪ್ಟೈ ಈ ಬಾರಿಯ ಟಿಸಿಎಸ್ ವಲ್ಡ್ ೧೦ಕೆಯಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿ 210,000 ಅಮೆರಿಕ ಡಾಲರ್ ಬಹುಮಾನ ಮೊತ್ತದ ರೇಸ್ ನಲ್ಲಿ ವಿಶ್ವಶ್ರೇಷ್ಟ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಪ್ರೋಕ್ಯಾಂ ಸಂಸ್ಥೆ ಈ ಮ್ಯಾರಾಥಾನ್ ಆಯೋಜನೆ ಮಾಡುತ್ತಿದೆ. ಈ ಬಾರಿಯ ಮ್ಯಾರಾಥಾನ್ ನಲ್ಲಿ ಒಲಿಂಪಿಕ್ ಹಾಗೂ ವಿಶ್ವ 400 ಮೀಟರ್ ಓಟದಲ್ಲಿ ಚಿನ್ನದ ಪದಕ ವಿಜೇತೆ ಸನ್ಯಾ ರಿಚರ್ಡ್ಸ್ ರೋಸ್ ಭಾಗವಹಿಸಲಿದ್ದಾರೆ. ಟಿಸಿಎಸ್ ವರ್ಲ್ಡ್ 10ಕೆ ಟೀ ಶರ್ಟ್ ಅನ್ನು ಭಾರತೀಯ ಕ್ರಿಕೆಟಿಗ, ಎಸಿಕ್ಸ್ ಬ್ರಾಂಡ್ ಅಂಬಾಸಿಡರ್ ಪ್ರಸಿದ್ಧ್ ಕೃಷ್ಣ ಬಿಡುಗಡೆ ಮಾಡಿದ್ದಾರೆ.
ಜಪಾನಿನ ಕ್ರೀಡಾ ಕಾರ್ಯಕ್ಷಮತೆಯ ಬ್ರಾಂಡ್ ಎಸಿಕ್ಸ್ ಈ ಪ್ರೀಮಿಯರ್ ರೇಸ್ ಗೆ ಹಲವು ವರ್ಷಗಳಿಂದಲೂ ಕ್ರೀಡಾ ಸರಕುಗಳನ್ನು ವಿತರಣೆ ಮಾಡುತ್ತಿದೆ. ಬೆಂಗಳೂರು ವಲ್ಡ್ 10ಕೆ ಸ್ಪರ್ಧೆಯಲ್ಲಿ ವಿಶ್ವದಾದ್ಯಂತ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಮ್ಯಾರಾಥಾನ್ ಸಂಭ್ರಮ ಕಳೆಗುಂದಿತ್ತು. ಆದ್ರೆ ಈ ಬಾರಿ ಮತ್ತೆ ವಲ್ಡ್ 10 ಕೆ ಬೆಂಗಳೂರಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಇದನ್ನೂ ಓದಿ : wrestlers Protest : ಪದಕ, ಪ್ರಶಸ್ತಿ ಹಿಂದಿರುಗಿಸುವುದಾಗಿ ಕುಸ್ತಿಪಟುಗಳ ಎಚ್ಚರಿಕೆ
ಇದನ್ನೂ ಓದಿ : Rahul out of WTC final : ರಾಹುಲ್‌ಗೆ ಮತ್ತೊಮ್ಮೆ ಕೈ ಕೊಟ್ಟ ಅದೃಷ್ಟ, WTC ಫೈನಲ್‌ನಿಂದ ಔಟ್
ಇದನ್ನೂ ಓದಿ : India WTC final: ಭಾರತ ಈ ಬಾರಿಯೂ ಟೆಸ್ಟ್ ವಿಶ್ವಕಪ್ ಗೆಲ್ಲೋದು ಡೌಟ್.. ಕಾರಣ ಇಲ್ಲಿದೆ..!
TCS World 10K Bengaluru Record over 27,000 participants register for landmark 15th edition