Congress collusion SDPI : ಎಸ್‌ಡಿಪಿಐ ಜೊತೆಗೆ ಕಾಂಗ್ರೆಸ್‌ ಒಪ್ಪಂದ : ವಿಡಿಯೋ ರಿಲೀಸ್‌ ಮಾಡಿದ ಬಿಜೆಪಿ

ಬೆಂಗಳೂರು : ದೇಶದಲ್ಲಿ ನಿಷೇಧಕ್ಕೆ ಒಳಗಾಗಿರುವ ಪಿಎಫ್​ಐ (PFI) ಸಂಘಟನೆಯ ಜೊತೆಗೆ ನಂಟು ಹೊಂದಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ಜೊತೆಗೆ ಕಾಂಗ್ರೆಸ್‌ ಒಳ ಒಪ್ಪಂದ (Congress collusion SDPI) ಮಾಡಿಕೊಂಡಿದೆ ಎಂದು ಕಾಂಗ್ರೆಸ್‌ ಪಕ್ಷ ಆರೋಪಿಸಿದೆ. ಅಲ್ಲದೇ ಕೇರಳ ಕಾಂಗ್ರೆಸ್ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಎಸ್‌ಡಿಪಿಐ ನಾಯಕರ ಜೊತೆಗೆ ಮಾತನಾಡುವ ವಿಡಿಯೋವನ್ನು ಬಿಜೆಪಿ ರಾಜ್ಯ ಘಟಕ ಹಂಚಿಕೊಂಡಿದೆ.

ಎಸ್‌ಡಿಪಿಐ ಸ್ಪರ್ಧೆಯಿಂದ ಮತಗಳು ವಿಭಜನೆಯಾಗಿ ಬಿಜೆಪಿ ಪಕ್ಷಕ್ಕೆ ಲಾಭವಾಗಲಿದೆ ಎಂದು ಸಂಸದ ಉಣ್ಣಿತ್ತಾನ್‌ ಹೇಳುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕೇರಳ ಕಾಂಗ್ರೆಸ್ ಸಂಸದ ಉಣ್ಣಿತ್ತಾನ್ ಕರ್ನಾಟಕದಲ್ಲಿ ಮತಗಳ ವಿಭಜನೆಗೆ ತಂತ್ರ ರೂಪಿಸಿದ್ದಾರೆ. ಒಂದು ಸಮುದಾಯದ ಮತಗಳಿಗಾಗಿ ಅವರು ಹತಾಶೆಗೊಂಡಿರುವುದು ಬಹಿರಂಗವಾಗಿದೆ. ಮತಗಳನ್ನು ವಿಭಜಿಸದಂತೆ ಎಸ್​ಡಿಪಿಐಗೆ ಒತ್ತಾಯಿಸಿದ್ದು, ಆ ಮೂಲಕ ಬಜರಂಗದಳವನ್ನು ಗುರಿಯಾಗಿಸುವ ಅವರ ಬಲವಾದ ಉದ್ದೇಶವನ್ನು ಹೊಂದಿದ್ದಾರೆ. ಇದು ಅಪಾಯಕಾರಿಯಾಗಿದ್ದು, ಮತಗಳ ವಿಭಜನೆಯ ಈ ಕಾರ್ಯಕ್ಕೆ ಕೋಮುವಾದಿ ಕಾಂಗ್ರೆಸ್‌ ಎಂದು ಹೇಳುವುದಕ್ಕೆ ಮತ್ತೊಂದು ಉದಾಹರಣೆಯಾಗಿದೆ ಎಂದು ಬಿಜೆಪಿ ಟ್ವೀಟ್‌ನಲ್ಲಿ ಹೇಳಿದೆ.

ಇನ್ನು ಬಿಜೆಪಿ ಹಂಚಿಕೊಂಡಿರುವ ವಿಡಿಯೋದಲ್ಲಿ ನಾವೆಲ್ಲರೂ ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯ ವಿರುದ್ದ ಹೋರಾಡುತ್ತಿದ್ದೇವೆ. ಚುಆವಣೆಯ ಸಂದರ್ಭದಲ್ಲಿ ತಮ್ಮ ತಮ್ಮಲ್ಲಿ ಜಗಳವಾಡದೆ ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸಬೇಕು. ಯಾವುದೇ ಕಾರಣಕ್ಕೂ ಬಿಜೆಪಿಯನ್ನು ಗೆಲ್ಲಿಸಬಾರದು ಎಂದು ಉನ್ನಿಥಾನ್‌ ವಿಡಿಯೋದಲ್ಲಿ ಹೇಳಿದ್ದಾರೆ ಎನ್ನಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ (Congress collusion SDPI)ಬಿಜೆಪಿ ಹಂಚಿಕೊಂಡಿರುವ ವಿಡಿಯೋವನ್ನು ಹಲವರು ಶೇರ್‌ ಮಾಡಿದ್ದಾರೆ. ಅಲ್ಲದೇ ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್‌ ಹಾಗೂ ಎಸ್‌ಡಿಪಿಐ ಬೆಂಬಲದ ವಿಡಿಯೋ ಕುರಿತು ಕಿಡಿಕಾರಿದ್ದಾರೆ. ಎಸ್‌ಡಿಪಿಐ ಹಲವು ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಮಾಡುತ್ತಿದ್ದು, ಕಾಂಗ್ರೆಸ್‌ ಮತಗಳನ್ನು ಸೆಳೆಯುವ ಕಾರ್ಯವನ್ನು ಮಾಡುತ್ತಿದೆ.

ಇದನ್ನೂ ಓದಿ : ಬಸವನಗುಡಿಯಲ್ಲಿ ಬಿಜೆಪಿ Vs ಜೆಡಿಎಸ್‌ ಬಿಗ್‌ ಫೈಟ್‌ : ಕಾಂಗ್ರೆಸ್‌ ಆಟಕುಂಟು ಲೆಕ್ಕಕ್ಕಿಲ್ಲ

ಇದನ್ನೂ ಓದಿ : ಮಣಿಪುರದಲ್ಲಿ ಹಿಂಸಾಚಾರ : ಅಮಿತ್‌ ಶಾ ಕರ್ನಾಟಕ ಕಾರ್ಯಕ್ರಮ ರದ್ದು

ಇದನ್ನೂ ಓದಿ : ಮಗನನ್ನು ಲಾಯರ್ ಮಾಡ್ತಿರೋದ್ಯಾಕೆ ಡಿಕೆ ಶಿವಕುಮಾರ್ ? ಇಲ್ಲಿದೆ Exclusive Story

ಇದನ್ನೂ ಓದಿ : ಬಜರಂಗದಳ ನಿಷೇಧದಿಂದ ಹಿಂದುತ್ವಕ್ಕೆ ಧಕ್ಕೆ, ಕಾಂಗ್ರೆಸ್‌ಗೆ ಪ್ರಣಾಳಿಕೆ ತಂತು ಪ್ರಾಣಸಂಕಟ

Comments are closed.