ದೊಡ್ಮನೆ ಕುಡಿ ಡಾ. ರಾಜ್‌ಕುಮಾರ್ ಅವರ ಮೊಮ್ಮಗ ವಿನಯ್ ರಾಜ್‌ಕುಮಾರ್ ಅವರಿಗೆ 34ನೇ ವರ್ಷದ ಹುಟ್ಟುಹಬ್ಬ (Vinay Rajkumar’s birthday) ಸಂಭ್ರಮ. ನಟ ವಿನಯ್ ರಾಜ್‌ಕುಮಾರ್ ಚಲನಚಿತ್ರ ನಿರ್ಮಾಪಕ ಮತ್ತು ಹಿರಿಯ ನಟ ರಾಘವೇಂದ್ರ ಅವರ ಹಿರಿಯ ಪುತ್ರ, ಅವರು 2014 ರಲ್ಲಿ ಸಿದ್ಧಾರ್ಥ ಸಿನಿಮಾದ ಮೂಲಕ ನಾಯಕ ನಟರಾಗಿ ಪಾದಾರ್ಪಣೆ ಮಾಡಿದರು. ಇನ್ನೂ ನಟ ವಿನಯ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬಕ್ಕೆ ಕುಟುಂಬಸ್ಥರು, ಸೇಹ್ನಿತರು, ಸಿನಿತಾರೆಯರು ಶುಭ ಹಾರೈಸಿದ್ದಾರೆ. ವಿಶೇಷವಾಗಿ ನಟ ವಿನಯ್ ಅವರಿಗೆ ಒಂದು ಪ್ರೇಮ ಸರಳ ಪ್ರೇಮಕಥೆ ಸಿನಮಾ ನಿರ್ದೇಶಕ ಸಿಂಪಲ್ ಸುನಿ ಅವರು ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದ್ದಾರೆ.
ನಿರ್ದೇಶಕ ಸಿಂಪಲ್ ಸುನಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ, “ಹುಟ್ಟುಹಬ್ಬದ ಶುಭಾಶಯಗಳು ವಿನಯ್ ರಾಜ್‌ಕುಮಾರ್ ಈ ಸಂಭ್ರಮದ ಪ್ರಯುಕ್ತ ಸಂಜೆ 4 ಗಂಟೆಗೆ ಸಿನಿಮಾದ ತುಣುಕನ್ನು ಬಿಡುಗಡೆಗೊಳಿಸಲಾಗುವುದು. ನೋಡಿ.. ಹಂಚಿ..ಹರಸಿ..” ಎಂದು ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭ ಹಾರೈಸಿದ್ದಾರೆ.
ಹುಟ್ಟುಹಬ್ಬದ ಶುಭಾಶಯಗಳು @vinayrajkumar
— ಸುನಿ/SuNi (@SimpleSuni) May 6, 2023
ಈ ಸಂಭ್ರಮದ ಪ್ರಯುಕ್ತ ಸಂಜೆ 4pm ಗೆ ಚಿತ್ರದ ತುಣುಕನ್ನು ಬಿಡುಗಡೆಗೊಳಿಸಲಾಗುವುದು…
ನೋಡಿ.. ಹಂಚಿ..ಹರಸಿ..#ಒಂದುಸರಳಪ್ರೇಮಕಥೆ#ospk pic.twitter.com/1tlDAFLEMz
ಇಬ್ಬರು ಚೆಲುವೆಯರೊಂದಿಗೆ ವಿನಯ್ ರಾಜ್‌ಕುಮಾರ್ ಅವರ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ರೆಡಿ ಆಗುತ್ತಿದೆ. ಸಿಂಪಲ್ ಸುನಿ ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ಜೊತೆ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಈ ಸಿನಿಮಾಕ್ಕೆ ಪ್ರಸನ್ನ ಅವರು ಕಥೆ ಬರೆದಿದ್ದಾರೆ. ಇನ್ನು ಬೆಂಗಳೂರು, ಚಿಕ್ಕಪೇಟೆಯಲ್ಲಿ ಮೊದಲ ಹಂತದ ಶೂಟಿಂಗ್ ಮುಗಿದಿದ್ದು, ಮೈಸೂರಿನಲ್ಲಿ ಕೊನೆಯ ಹಂತದ ಶೂಟಿಂಗ್ ನಡೆಯುತ್ತಿದೆ. ಇನ್ನೂ ಅರ್ಧರಷ್ಟು ಶೂಟಿಂಗ್ ಬಾಕಿ ಇರುತ್ತದೆ ಎಂದು ಸಿನಿತಂಡ ತಿಳಿಸಿದೆ.
ಈ ಸಿನಿಮಾದಲ್ಲಿ ಸ್ವಾತಿಷ್ಠ ಕೃಷ್ಣನ್, ರಾಧಾ ಕೃಷ್ಣ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ಇಬ್ಬರೂ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಮಲ್ಲಿಕಾ ಸಿಂಗ್ ಅವರಿಗೆ ಇದು ಮೊದಲ ಕನ್ನಡ ಸಿನಿಮಾವಾಗಿದೆ. ಸಾಧುಕೋಕಿಲ, ರಾಜೇಶ್ ನಟರಂಗ, ಅರುಣ ಬಾಲರಾಜ್ ಒಳಗೊಂಡ ಕಲಾವಿದರು ಒಂದು ಸರಳ ಪ್ರೇಮ ಕಥೆ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಕಾರ್ತಿಕ್ ಛಾಯಾಗ್ರಹಣ, ಆದಿ ಸಂಕಲನ, ವೀರ್ ಸಮರ್ಥ್ ಸಂಗೀತ ನಿರ್ದೇಶನ ಸಿನಿಮಾಕ್ಕಿದೆ.
ವಿನಯ್ ರಾಜ್‌ಕುಮಾರ್ ಅವರು ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್ ಮತ್ತು ಮಂಗಳಾ ಮೊದಲ ಮಗುವಾಗಿ ಜನಿಸಿದರು. ನಟ ವಿನಯ್ ರಾಜ್‌ಕುಮಾರ್‌ಗೆ ಯುವ ರಾಜ್‌ಕುಮಾರ್ ಎಂಬ ಕಿರಿಯ ಸಹೋದರನಿದ್ದಾನೆ. ನಟರಾದ ಶಿವರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಚಿಕ್ಕಪ್ಪಂದಿರಾಗಿದ್ದಾರೆ. ವಿನಯ್ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್‌ನಿಂದ ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ವಿನಯ್ ಅವರ ಅಜ್ಜ, ರಾಜಕುಮಾರ್ ಅವರನ್ನು ಮೊದಲ ಬಾರಿಗೆ ನಾಲ್ಕನೇ ವಯಸ್ಸಿನಲ್ಲಿ ಆಕಸ್ಮಿಕ (1993) ಸಿನಿಮಾದಲ್ಲಿ ತೆರೆಯ ಮೇಲೆ ಕರೆತಂದರು. ನಂತರ ವಿನಯ್ ಒಡಹುಟ್ಟಿದವರು (1994), ಅವರ ತಂದೆಯ ಸಿನಿಮಾವಾದ ಅನುರಾಗದ ಅಲೆಗಳು (1993) ಮತ್ತು ನಾವಿಬ್ಬರು ನಮಗಿಬ್ಬರು (1993), ಮತ್ತು ಚಿಕ್ಕಪ್ಪ ಶಿವನ ಓಂ (1995) ಮತ್ತು ಹೃದಯ ಹೃದಯ (1999) ನಲ್ಲಿ ಕಾಣಿಸಿಕೊಂಡರು.
ಇದನ್ನೂ ಓದಿ : ನಟ ಶಿವರಾಜ್‌ಕುಮಾರ್ ಪ್ರಚಾರಕ್ಕೆ ವ್ಯಂಗ್ಯವಾಡಿದ ಪ್ರಶಾಂತ್ ಸಂಬರ್ಗಿ
ನಟ ವಿನಯ್ “ತರಬೇತಿ… ರಂಗಭೂಮಿಯಲ್ಲಿ” ಮೊದಲು “ಒಂದೆರಡು ಜನರೊಂದಿಗೆ ನಟನಾ ಕಾರ್ಯಾಗಾರಗಳಲ್ಲಿ” ನಟನಾಗಿ ಅಧ್ಯಯನ ಮತ್ತು ತರಬೇತಿ ಪಡೆದರು. ನಂತರ ಅವರು ತಮ್ಮ ಚಿಕ್ಕಪ್ಪನ ಸಿನಿಮಾಗಳ ತರಬೇತುದಾರರಿಂದ ನೃತ್ಯ ಮತ್ತು ಸಮರ ಕಲೆಗಳಲ್ಲಿ ತರಬೇತಿ ಪಡೆದರು. 2012 ರಲ್ಲಿ ದಿ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ , ಅವರು ಪುನೀತ್ ರಾಜ್‌ಕುಮಾರ್ ಅಭಿನಯದ ಯಾರೇ ಕೂಗಾಡಲಿ ” ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು. ಅಷ್ಟೇ ಅಲ್ಲದೇ ಸಿನಿಮಾ ಅಣ್ಣಾ ಬಾಂಡ್ (2012) ಚಿತ್ರೀಕರಣದಲ್ಲಿ ಕೆಲಸ ಮಾಡಿದ್ದಾರೆ.
Vinay Rajkumar’s birthday: Happy birthday to Vinay Rajkumar: ondu sarala premakatte with special wishes