ಕರ್ನಾಟಕ ವಿಧಾನಸಭಾ ಚುನಾವಣೆ : ಮೇ 9, 10ರಂದು ಬಿಎಮ್‌ಟಿಸಿ, ಕೆಎಸ್‌ಆರ್‌ಟಿಸಿ ಬಸ್ ಸಂಚಾರ ವ್ಯತ್ಯಯ

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election) ದಿನಗಣನೆ ಶುರುವಾಗಿದ್ದು, ಆಯಾ ಪಕ್ಷದವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತ ಭರ್ಜರಿಯಾಗಿ ಮತ ಭೇಟೆ ಕೂಡ ಮಾಡುತ್ತಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ದಿನದಂದು ಮತದಾರರು ಮತದಾನ ಮಾಡುವ ಕಾರಣದಿಂದಾಗಿ ನಗರದಲ್ಲಿ ಪೊಲೀಸ್‌ ಸಿಬ್ಬಂದಿ, ಮತಗಟ್ಟೆ ಅಧಿಕಾರಿಗಳನ್ನು ಮತದಾನ ಕೇಂದ್ರಕ್ಕೆ ಕರೆದೊಯ್ಯಲು ಬಿಎಂಟಿಸಿ ಬಸ್‌ಗಳನ್ನು ಬಳಸಿಕೊಳ್ಳಲಾಗುತ್ತದೆ. ಈ ಕಾರಣದಿಂದ ಮೇ 9, 10ರಂದು ಸಿಲಿಕಾನ್‌ ಸಿಟಿಯಲ್ಲಿ ಬಿಎಂಟಿಸಿ ಬಸ್‌ ( BMTC Bus Service) ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಪತ್ರಿಕಾ ಪ್ರಕಟಣೆಯಲ್ಲಿ ಬಿಎಂಟಿಸಿ ಮಾಹಿತಿ ನೀಡಿದ್ದು, ರಾಜ್ಯ ವಿಧಾನಸಭಾ ಚುನಾವಣೆಗೆ ಬಿಎಂಟಿಸಿ ಬಸ್‌ಗಳನ್ನು ಮೇ 9, 10ರಂದು ಬಳಸಿಕೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಪ್ರಯಾಣಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಇನ್ನು ಮೇ.10ರಂದು ಮತದಾನಕ್ಕೆ ಮೊದಲ ದಿನ ಹಾಗೂ ಮತದಾನ ದಿನದಂದು ಜಿಲ್ಲಾಡಳಿತ, ಪೊಲೀಸ್‌ ಇಲಾಖೆಯಿಂದ ಬಿಎಂಟಿಸಿ ಬಸ್‌ಗಳನ್ನು ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿತಗೊಂಡ ಅಧಿಕಾರಿಗಳನ್ನು ಕರೆದೊಯ್ಯಲು ಬಳಸಿಕೊಳ್ಳಲಾಗುತ್ತದೆ. ಹೀಗಾಗಿ ಬೆಂಗಳೂರು ನಗರದಲ್ಲಿ ಈ ದಿನದಂದು ಬಸ್‌ ಸಂಚಾರ ಸಂಪೂರ್ಣವಾಗಿ ಇರುವುದಿಲ್ಲ. ಸದ್ಯ ಬೆಂಗಳೂರಿನಲ್ಲಿ 4,500 ಬಿಎಂಟಿಸಿ ಬಸ್ ಗಳು ಸಂಚಾರ ನಡೆಸುತ್ತಿವೆ. ಮೇ 9, 10ರಂದು ಚುನಾವಣಾ ಕರ್ತವ್ಯಕ್ಕೆ ಅರ್ಧಕ್ಕಿಂತ ಹೆಚ್ಚಿನ ಬಸ್ ಗಳು ನಿಯೋಜನೆಗೊಳ್ಳುತ್ತಿವೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮೇ.9ರ ಮಂಗಳವಾರ ಹಾಗೂ ಮೇ.10ರ ಬುಧವಾರ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಗಳ ಓಡಾಟ ವಿರಳವಾಗಿರಲಿದೆ.

ಮೇ 9, 10ರಂದು ಕೆಎಸ್ಆರ್‌ಟಿಸಿ ಬಸ್’ ಸಂಚಾರದಲ್ಲಿ ವ್ಯತ್ಯಯ

ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ, ಚುನಾವಣಾ ಆಯೋಗದಿಂದ ಸುಗಮ ಮತದಾನಕ್ಕಾಗಿ ಪೊಲೀಸರು , ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳನ್ನು ಕರೆದೊಯ್ಯಲು ಸಾರಿಗೆ ಬಸ್ ಬಳಸಿಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಮೇ.9 ಮತ್ತು 10ರಂದು ಕೆಎಸ್‌ಆರ್‌ಟಿಸಿ (KSRTC Bus Service) ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

ಈ ಬಗ್ಗೆ ಇಂದು ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಮಾಹಿತಿ ನೀಡಲಾಗಿದೆ. ದಿನಾಂಕ ಮೇ 10, 2023ರಂದು ವಿಧಾನಸಭಾ ಚುನಾವಣೆಗೆ ಕೆಎಸ್ಆರ್‌ಟಿಸಿಯಿಂದ ಚುನಾವಣಾ ಕಾರ್ಯದ ಸಲುವಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳನ್ನು ಜಿಲ್ಲಾಡಳಿತಕ್ಕೆ ಮತ್ತು ಪೊಲೀಸ್ ಇಲಾಖೆಗೆ ನಿಯೋಜಿಸಲಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ : ಸಿಲಿಕಾನ್‌ ಸಿಟಿಯಲ್ಲಿ ನಮೋಗೆ ಹೂಮಳೆ : ಹೇಗಿತ್ತು ಬೆಂಗಳೂರಲ್ಲಿ ಮೋದಿ ರೋಡ್‌ ಶೋ

ಇದನ್ನೂ ಓದಿ : IT Raid Bangalore : ಫೈನಾನ್ಶಿಯರ್‌ಗಳ ಮನೆ ಮೇಲೆ ಐಟಿ ದಾಳಿ : 20 ಕೋಟಿ ರೂಪಾಯಿ ಜಪ್ತಿ

ಮತದಾನ ಕಾರ್ಯದ ಸುಗಮವಾಗಿ ನಡೆಯಲೆಂದು ಸಾರಿಗೆ ಬಸ್ ಗಳನ್ನು ಮತಗಟ್ಟೆ ಸಿಬ್ಬಂದಿ, ಪೊಲೀಸರನ್ನು ಕೊಂಡೊಯ್ಯಲು ಸಾರಿಗೆ ಬಸ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆ ಮಾಡಲಾಗುತ್ತಿದೆ. ಆದ್ದರಿಂದ ಮೇ 09,2023 ಮತ್ತು ಮತದಾನ ನಡೆಯು ಮೊದಲ ದಿನ ಮೇ 10, 2023ರಂದು ನಿಗಮದ ವಾಹನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗುತ್ತದೆ ಎಂದು ತಿಳಿಸಿದೆ. ಮತದಾನಕ್ಕೂ ಮೊದಲ ದಿನವಾದ ಮೇ.9 ಮತ್ತು ಮತದಾನದ ಮೇ.10ರಂದು KSRTC ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕ ಪ್ರಯಾಣಿಕರು ಸಹಕರಿಸುವಂತೆ, ಪರ್ಯಾಯ ವ್ಯವಸ್ಥೆಯೊಂದಿಗೆ ಸಂಚರಿಸಲು ವಿನಂತಿಸಿದೆ.

BMTC Bus Service: Karnataka Assembly Elections: BMTC, KSRTC Bus Service Variation on May 9, 10

Comments are closed.