ಮಂಗಳವಾರ, ಏಪ್ರಿಲ್ 29, 2025
HomeElectionಕುಂದಾಪುರ ನಗರದಲ್ಲಿ ಬಿಜೆಪಿ ಬೃಹತ್ ರೋಡ್ ಶೋ : ಕಿರಣ್ ಕೊಡ್ಗಿ ಪರ ಕಾರ್ಯಕರ್ತರಿಂದ ಮತಯಾಚನೆ

ಕುಂದಾಪುರ ನಗರದಲ್ಲಿ ಬಿಜೆಪಿ ಬೃಹತ್ ರೋಡ್ ಶೋ : ಕಿರಣ್ ಕೊಡ್ಗಿ ಪರ ಕಾರ್ಯಕರ್ತರಿಂದ ಮತಯಾಚನೆ

- Advertisement -

ಕುಂದಾಪುರ : ಕರ್ನಾಟಕದ ಕರಾವಳಿಯಲ್ಲಿ ಈ ಬಾರಿ ಕುಂದಾಪುರ ವಿಧಾನಸಭಾ ಕ್ಷೇತ್ರ ಚುನಾವಣೆ ವಿಶೇಷವಾಗಿ ರಾಜ್ಯದ ಗಮನ ಸೆಳೆದಿದೆ. ಹಾಲಿ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದು, ಬಿಜೆಪಿಯ ಭೀಷ್ಮ ಎ.ಜಿ.ಕೊಡ್ಗಿ ಅವರ ಪುತ್ರ ಕಿರಣ್‌ ಕೊಡ್ಗಿ (Kiran kodgi) ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಇನ್ನು ಮತ ಭೇಟೆ ಸಲುವಾಗಿ ನಿನ್ನೆ (ಮೇ 6) ಕಿರಣ್‌ ಕೊಡ್ಗಿ ಅವರ ಪರವಾಗಿ ಕುಂದಾಪುರದಲ್ಲಿ ಭರ್ಜರಿ ರೋಡ್‌ ಶೋ (Kundapur Assembly Road Show) ನಡೆದಿದೆ. ಇದರಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಿರುವುದು ವಿಶೇಷವಾಗಿ ಕಂಡಿದ್ದು, ಬಹುಮತದಿಂದ ಗೆಲುವಿ ಪತಾಕೆ ಹಾರಿಸುವ ಎಲ್ಲಾ ಸೂಚನೆ ನೀಡಿದಂತೆ ಆಗಿದೆ.

ಸಾವಿರಾರು ಕಾರ್ಯಕರ್ತರು ಬಿಜೆಪಿ ಹಾಗೂ ಕೇಸರಿ ಧ್ವಜ ಹಿಡಿದು ಬೃಹತ್‌ ರೋಡ್‌ ಶೋನಲ್ಲಿ ಹೆಜ್ಜೆ ಹಾಕಿದ್ದಾರೆ. ಕುಂದಾಪುರ ನೆಹರು ಮೈದಾನದಿಂದ ಆರಂಭಗೊಂಡ ರೋಡ್‌ ಶೋ ಹೊಸ ಬಸ್‌ ನಿಲ್ದಾಣದ ಮುಖಾಂತರ ತಿರುಗಿ ಶಾಸ್ತ್ರಿ ವೃತ್ತದಲ್ಲಿ ಸಮಾಪನಗೊಂಡಿತು. ಬಜರಂಗದಳ ನಿಷೇಧದ ವಿರುದ್ಧ ಸಂಘಟನೆಗಳ ವಿರೋಧದ ಕೂಗು ಮೆರವಣಿಗೆಯಲ್ಲಿ ಕೇಳಿ ಬಂದಿದೆ. ಕುಂದಾಪರ ಶಾಸಕರ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಸೇರಿದಂತೆ ವಿವಿಧ ಪದಾಧಿಕಾರಿಗಳು ಬೃಹತ್‌ ರೋಡ್‌ ಶೋನಲ್ಲಿ ಭಾಗಿಯಾಗಿದ್ದಾರೆ.

ಕಿರಣ್‌ ಕೊಡ್ಗಿ ಉಡುಪಿ ಜಿಲ್ಲೆಯ ಅಮವಾಸೆಬೈಲಿನವರು. ತಂದೆ ಎ.ಜೆ.ಕೊಡ್ಗಿ ಅವರ ರಾಜಕೀಯ ಗರಡಿಯಲ್ಲಿ ಪಳಗಿರುವ ಕಿರಣ್‌ ಕೊಡ್ಗಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿನ ಸಾವಿರಾರು ಕುಟುಂಬಗಳಿಗೆ ತಮ್ಮ ಕಾರ್ಖಾನೆಗಳಲ್ಲಿ ಉದ್ಯೋಗವನ್ನು ಒದಗಿಸಿದ್ದಾರೆ. ಕರಾವಳಿ ಭಾಗದಲ್ಲಿ ಬಿಜೆಪಿ ಪಕ್ಷವನ್ನು ಸಂಘಟಿಸುವಲ್ಲಿಯೂ ಕೊಡ್ಗಿ (kiran kodgi) ಮಹತ್ವದ ಪಾತ್ರವಹಿಸಿದ್ದಾರೆ. ಸುಮಾರು 40 ವರ್ಷಗಳಿಂದಲೂ ಬಿಜೆಪಿಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಕಿರಣ್‌ ಕೊಡ್ಗಿ (Kiran Kodgi ) ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪ್ರತೀ ಚುನಾವಣೆಯಲ್ಲಿಯೂ ಹೆಗಲಿಗೆ ಹೆಗಲುಕೊಟ್ಟು ಕೆಲಸ ಮಾಡಿದ್ದಾರೆ.

ಇದನ್ನೂ ಓದಿ : ಸಿಲಿಕಾನ್‌ ಸಿಟಿಯಲ್ಲಿ ನಮೋಗೆ ಹೂಮಳೆ : ಹೇಗಿತ್ತು ಬೆಂಗಳೂರಲ್ಲಿ ಮೋದಿ ರೋಡ್‌ ಶೋ

ಇದನ್ನೂ ಓದಿ : ಕರ್ನಾಟಕದಲ್ಲಿಂದು ಪ್ರಧಾನಿ ಮೋದಿ, ಅಮಿತಾ ಶಾ, ಯೋಗಿ ಆದಿತ್ಯನಾಥ್‌ ಆರ್ಭಟ

ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ 1983ರಿಂದ ಸತತ 4 ಬಾರಿಗೆ ಪ್ರತಾಪ್‌ಚಂದ್ರ ಶೆಟ್ಟಿ ಶಾಸಕರಾಗಿ ಆಯ್ಕೆಯಾಗಿದ್ದರು. ಪ್ರತಾಪ್‌ಚಂದ್ರ ಶೆಟ್ಟಿ ಅವರ ನಂತರದಲ್ಲಿ ಕಾಂಗ್ರೆಸ್‌ ಗೆಲುವನ್ನು ಕಂಡಿದ್ದೇ ಇಲ್ಲ. ಕಳೆದ ನಾಲ್ಕು ಸಾರ್ವತ್ರಿಕ ಚುನಾವಣೆ ಎದುರಾದಾಗಲೂ ಹೊಸ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸುತ್ತಾ ಬಂದಿದೆ. ಅಶೋಕ್‌ ಕುಮಾರ್ ಶೆಟ್ಟಿ, ಕೆ.ಜಯಪ್ರಕಾಶ್‌ ಹೆಗ್ಡೆ, ಮಲ್ಯಾಡಿ ಶಿವರಾಮ ಶೆಟ್ಟಿ, ರಾಕೇಶ್‌ ಮಲ್ಲಿ ಅವರನ್ನು ಕಣಕ್ಕೆ ಇಳಿಸಿದ್ದರೂ ಕೂಡ ಕಾಂಗ್ರೆಸ್‌ ಪಕ್ಷಕ್ಕೆ ಗೆಲುವು ಸಿಕ್ಕಿರುವುದಿಲ್ಲ.

Kundapur Assembly Road Show: BJP Big Road Show in Kundapur City: Pro-Kiran Kodgi Activists Call for Votes

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular