ಮೋಚಾ ಚಂಡಮಾರುತದ ಎಫೆಕ್ಟ್ : ಮೇ 14ರ ವರೆಗೂ ಭಾರೀ ಮಳೆ ಸಾಧ್ಯತೆ

ಬೆಂಗಳೂರು : ಕಳೆದೆರಡು ತಿಂಗಳು ಸೂರ್ಯನ ತಾಪಮಾನದಿಂದಾಗಿ ಸೆಕೆಯ ಬೇಗೆಯಲ್ಲಿ ಜನರು ಬಳಲಿದ್ದಾರೆ. ಇನ್ನೂ ಮೇ ತಿಂಗಳ ಪ್ರಾರಂಭದಲ್ಲೇ ವರುಣನ ಆಗಮನದಿಂದ ಸ್ವಲ್ಪ ಭೂಮಿಗೆ ತಂಪು ಎರೆದಂತೆ ಆಗಿದೆ. ಅದರಲ್ಲೂ ಬಂಗಾಳಕೊಲ್ಲಿಯಲ್ಲಿ ಮೋಚಾ ಚಂಡಮಾರುತದ (Mocha Cyclone Effect) ಅಲೆ ಎದ್ದಿದ್ದು, ಪರಿಣಾಮ ರಾಜ್ಯದ ಹಲವೆಡೆ ಸೈಕ್ಲೋನ್‌ ಭೀತಿಯೂ ಕೂಡ ಕಾಡುತ್ತಿದೆ. ಅಲ್ಲದೆ ಮುಂದಿನ ಮೇ 14ರವರೆಗೂ ಭಾರಿ ಮಳೆ ಆಗುವ ಸಾಧ್ಯೆತೆಯಿದೆ ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.

ಈಗಾಗಲೇ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಬೆಳಗ್ಗಯಿಂದ ಮಳೆ ಶುರುವಾಗಿ ರಾತ್ರಿವರೆಗೂ ಮಳೆ ಸುರಿದಿದೆ. ಹೀಗಾಗಿ ಸಿಲಿಕಾನ್‌ ಸಿಟಿಯಲ್ಲಿ ಇಂದು ಕೂಡ ಮೋಡ ಕವಿದ ವಾತಾವರಣ ಇದೆ. ಆದ್ದರಿಂದ ಇಂದು ಮತ್ತೆ ಮಳೆರಾಯ ಆರ್ಭಟಗೊಳ್ಳುವ ಎಲ್ಲಾ ಸಾಧ್ಯತೆ ಇದೆ. ಇನ್ನು ದಕ್ಷಿಣ ಒಳನಾಡು, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಮೇ 7ರಂದು ರಾಯಚೂರು ಜಿಲ್ಲೆ, ಕೊಡಗು ಹಾಗೂ ಹಾಸನದ ದಕ್ಷಿಣ ಭಾಗಗಳಲ್ಲಿ ಮಳೆರಾಯ ಆಗಮನ ಆಗಲಿದೆ,

ಇನ್ನು ಮೇ 8 ಹಾಗೂ 9ರಂದು ಮಂಡ್ಯ, ದೊಡ್ಡಬಳ್ಳಾಪುರ, ಮೈಸೂರು, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಬಾಗಲಕೋಟೆ, ಹಾವೇರಿ, ಉಡುಪಿ, ಬೆಂಗಳೂರು ನಗರ, ಕಲಬುರಗಿ, ರಾಯಚೂರು, ವಿಜಯಪುರ, ಬೆಳಗಾವಿ, ಹುಬ್ಬಳ್ಳಿ, ವಿಜಯನಗರ, ಬಳ್ಳಾರಿ, ಉತ್ತರ ಕನ್ನಡ, ರಾಯಚೂರು, ಚಿತ್ರದುರ್ಗ, ಕೊಪ್ಪಳ, ಗದಗ, ಚಿತ್ರದುರ್ಗ, ತುಮಕೂರು, ಕೋಲಾರದಲ್ಲಿ ಅತೀ ಹೆಚ್ಚು ಮಳೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ : ಕುಂದಾಪುರ ನಗರದಲ್ಲಿ ಬಿಜೆಪಿ ಬೃಹತ್ ರೋಡ್ ಶೋ : ಕಿರಣ್ ಕೊಡ್ಗಿ ಪರ ಕಾರ್ಯಕರ್ತರಿಂದ ಮತಯಾಚನೆ

ಇದನ್ನೂ ಓದಿ : ಕರ್ನಾಟಕ ವಿಧಾನಸಭಾ ಚುನಾವಣೆ : ಮೇ 9, 10ರಂದು ಬಿಎಮ್‌ಟಿಸಿ, ಕೆಎಸ್‌ಆರ್‌ಟಿಸಿ ಬಸ್ ಸಂಚಾರ ವ್ಯತ್ಯಯ

ಮೇ 10ರಂದು ಬೆಣ್ಣೆನಗರಿ ದಾವಣಗೆರೆ, ಮಂಜಿನ ನಗರಿ ಕೊಡಗು ಜಿಲ್ಲೆಗಳಲ್ಲಿ ಮಾತ್ರ ಭಾರಿ ಮಳೆ ಆಗಲಿದ್ದು, ಮೇ 12, 13ರಂದು ಹಾಸನ, ಬಾಗಲಕೋಟೆ ದಕ್ಷಿಣ, ಮಂಡ್ಯ ದಕ್ಷಿಣ, ತುಮಕೂರು ದಕ್ಷಿಣ, ಮಂಡ್ಯ, ಚಾಮರಾಜನಗರದ ದಕ್ಷಿಣ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ, ಕೊಡಗು, ಮೈಸೂರು ಪಶ್ಚಿಮ ಭಾಗ ಹಾಗೂ ಬೆಳಗಾವಿ ದಕ್ಷಿಣ, ಹಾವೇರಿಯಲ್ಲಿ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗೆಯೆ ಮೇ 14ರಂದು ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿಯ ದಕ್ಷಿಣ, ಕೊಡಗು, ಹಾವೇರಿ, ತುಮಕೂರು, ಚಿತ್ರದುರ್ಗ, ಮೈಸೂರು, ಮಂಡ್ಯ, ಹಾಸನ, ಸೇರಿದಂತೆ ಹಲವೆಡೆ ಧಾರಕಾರ ಮಳೆಯಾಗಲಿದೆ ಎನ್ನುವ ಮಾಹಿತಿಯನ್ನು ನೀಡಿದೆ.

Mocha Cyclone Effect : Heavy rain likely till May 14

Comments are closed.