ಸೋಮವಾರ, ಏಪ್ರಿಲ್ 28, 2025
HomeCinemaಮತ್ತೋರ್ವ ಬಾಲಿವುಡ್‌ ಸ್ಟಾರ್‌ಗೆ ನಾಯಕಿಯಾದ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ

ಮತ್ತೋರ್ವ ಬಾಲಿವುಡ್‌ ಸ್ಟಾರ್‌ಗೆ ನಾಯಕಿಯಾದ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ

- Advertisement -

ನ್ಯಾಷನಲ್‌ ಕ್ರಶ್‌, ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ (National crush Rashmika Mandanna) ಒಂದಾಲ್ಲೊಂದು ವಿಷಯಕ್ಕೆ ಸದಾ ಟ್ರೋಲ್‌ ಆಗುತ್ತಾ ಬಂದಿದ್ದಾರೆ. ಆದರೆ ನಟಿ ರಶ್ಮಿಕಾ ಅದಕ್ಕೆಲ್ಲಾ ಜಾಸ್ತಿ ತಲೆ ಕೆಡಿಸಿಕೊಳ್ಳದೇ ತಮ್ಮ ಕೆಲಸದ ಮೂಲಕ ಅವರಿಗೆಲ್ಲಾ ಉತ್ತರ ನೀಡುತ್ತಿದ್ದಾರೆ. ನಟಿ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಎಷ್ಟೇ ಟ್ರೋಲ್‌ ಆಗಿದ್ದರೂ, ಅವರನ್ನು ಅರಸಿಕೊಂಡು ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದು, ಅನೇಕರು ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ. ಸದ್ಯ ನಟಿ ರಶ್ಮಿಕಾ ಬಾಲಿವುಡ್‌ ಮತ್ತೋರ್ವ ಸ್ಟಾರ್‌ ನಟನಿಗೆ ನಾಯಕಿ ಅಭಿನಯಿಸಲಿದ್ದಾರೆ ಎನ್ನಲಾಗಿದೆ.

ನಟಿ ರಶ್ಮಿಕಾ ಮಂದಣ್ಣ ಕನ್ನಡದ ಕಿರಿಕ್‌ ಪಾರ್ಟಿ ಸಿನಿಮಾ ಮೂಲಕ ಬಣ್ಣದಲೋಕಕ್ಕೆ ಕಾಲಿಟ್ಟಿದ್ದು, ನಂತರ ದಿನಗಳಲ್ಲಿ ಪರಭಾಷೆಗಳಲ್ಲಿ ಅವಕಾಶಗಳು ಇವರನ್ನು ಕೈ ಬಿಸಿ ಕರೆದಿರುತ್ತದೆ. ಟಾಲಿವುಡ್‌ನಲ್ಲಿ ಸಿಕ್ಕಂತ ಅವಕಾಶಗಳನ್ನು ನಟಿ ರಶ್ಮಿಕಾ ಸದುಪಯೋಗಪಡಿಸಿಕೊಂಡಿದ್ದು, ಫೇಮಸ್‌ ಆಗಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್‌ನಲ್ಲಿ ಫೇಮಸ್‌ ಆಗುತ್ತಿದ್ದಂತೆ ಹಿಂದಿ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈಗಾಗಲೇ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್‌ನ ಸೂಪರ್‌ಸ್ಟಾರ್‌ ಅಮಿತಾಭ್‌ ಬಚ್ಚನ್‌ ಸಿದ್ದಾರ್ಥ್‌ ಮಲ್ಹೋತ್ರಾ ಜೊತೆ ಅಭಿನಯಿಸಿದ್ದಾರೆ. ಇನ್ನು ರಣಬೀರ್‌ ಕಪೂರ್‌ ಜೊತೆ ಅನಿಮಲ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ವಿಕ್ಕಿ ಕೌಶಲ್‌ ಜೊತೆ ಕೂಡ ಸಿನಿಮಾ ಮಾಡುತ್ತಿದ್ದಾರೆ. ಅಕ್ಷಯ್‌ ಕುಮಾರ್‌ ಅಭಿನಯದ ಛತ್ರಪತಿ ಶಿವಾಜಿ ಸಿನಿಮಾದಲ್ಲಿ ಸೊಸೆ ಪಾತ್ರದಲ್ಲಿ ನಟಿ ರಶ್ಮಿಕಾ ನಟಿಸಲಿದ್ದಾರೆ ಎನ್ನಲಾಗಿದೆ. ಸದ್ಯ ನಟಿ ರಶ್ಮಿಕಾ ಮತ್ತೊಂದು ಸಿನಿಮಾ ಮಾತುಕತೆಯಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ ಎಂದು ವರದಿ ತಿಳಿಸಿದೆ.

ಶಾಹಿದ್‌ ಕಪೂರ್‌ ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಸಿನಿಮಾದ ತಾಂತ್ರಿಕ ವರ್ದ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿಯಬೇಕಿದೆ. ಹಾಗಾಗಿ ಈ ಸಿನಿಮಾಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಶಾಹಿದ್‌ ಕಪೂರ್‌ ಅವರ ನಟನೆಯ ಫರ್ಜಿ ವೆಬ್‌ ಸೀರಿಸ್‌ ರಿಲೀಸ್‌ ಆಗಿ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದಿದೆ. ಈ ಸೀರಿಸ್‌ನಿಂದಾಗಿ ನಟ ಶಾಹಿದ್‌ ಜನಪ್ರಿಯತೆ ಕೂಡ ಹೆಚ್ಚಿದೆ.ಸದ್ಯ ನಟಿ ರಶ್ಮಿಕಾ ಮಂದಣ್ಣ ಪುಷ್ಪ 2, ರೇನ್‌ ಬೋ, ಅನಿಮಲ್‌ ಹಾಗೂ ನಿತಿನ್‌ ಅವರೊಂದಿಗೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವುಗಳ ಜೊತೆ ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ : ವಿವಾದದ ನಡುವೆ ಬಾಕ್ಸಾಫೀಸ್ ನಲ್ಲಿ ಭರ್ಜರಿ ಕಲೆಕ್ಷನ್‌ ಕಂಡ ದಿ ಕೇರಳ ಸ್ಟೋರಿ

ಹೀಗಾಗಿ ನಟಿ ರಶ್ಮಿಕಾ ಬೆಳವಣಿಗೆ ಆಶ್ಚರ್ಯ ಮೂಡಿಸಿದೆ. ಅಷ್ಟೇ ಅಲ್ಲದೇ ನಟಿ ರಶ್ಮಿಕಾ ಈ ವರ್ಷದ ಆರಂಭದಲ್ಲೇ ಒಂದರ ಹಿಂದೆ ಮತ್ತೊಂದು ಎನ್ನುವಂತೆ ಬಿಡುಗಡೆಗೊಂಡ ಸಿನಿಮಾಗಳಿಂದ ಗೆಲುವು ದೊರಕಿದೆ. ನಟಿ ರಶ್ಮಿಕಾ ಅಭಿನಯದ ತಮಿಳಿನ ವಾರಿಸು ಸಿನಿಮಾ ಕೂಡ ಗೆದ್ದಿದೆ. ಇನ್ನು ಓಟಿಟಿಯಲ್ಲಿ ರಿಲೀಸ್‌ ಆದ ಮಿಷನ್‌ ಮಜ್ನು ಸಿನಿಮಾದಲ್ಲಿ ರಶ್ಮಿಕಾ ನಟನೆ ಬಗ್ಗೆ ಕೂಡ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ರಣಬೀರ್‌ ಕಪೂರ್‌ ಹಾಗೂ ರಶ್ಮಿಕಾ ಭಿನಯದ ಅನಿಮಲ್‌ ಸಿನಿಮಾಕೂಡ ಈ ವರಷವೇ ತೆರೆ ಕಾಣಲಿದೆ.

National crush Rashmika Mandanna is the heroine of another Bollywood star.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular