ಸೋಮವಾರ, ಮೇ 12, 2025
Homekarnatakaಬೆಂಗಳೂರು - ಚಿಕ್ಕಮಗಳೂರಿಗೆ ಕೆಎಸ್‌ಆರ್‌ಟಿಸಿ ಇಲೆಕ್ಟ್ರಿಕ್‌ ಬಸ್‌ ಸಂಚಾರ : ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು – ಚಿಕ್ಕಮಗಳೂರಿಗೆ ಕೆಎಸ್‌ಆರ್‌ಟಿಸಿ ಇಲೆಕ್ಟ್ರಿಕ್‌ ಬಸ್‌ ಸಂಚಾರ : ಇಲ್ಲಿದೆ ಸಂಪೂರ್ಣ ಮಾಹಿತಿ

- Advertisement -

ಚಿಕ್ಕಮಗಳೂರು : ಬೆಂಗಳೂರು ಸಾರಿಗೆ ವ್ಯವಸ್ಥೆಗೆ ಸೀಮಿತವಾಗಿದ್ದ ಇಲೆಕ್ಟ್ರಿಕ್‌ ಬಸ್‌ಗಳು ಸದ್ಯ ಕಾಫಿನಾಡದ ಚಿಕ್ಕಮಗಳೂರಿಗೂ ಲಗ್ಗೆ ಇಟ್ಟಿದೆ. ಕಳೆದ ಮೇ 19 ರಿಂದ ಬೆಂಗಳೂರಿನಿಂದ ಚಿಕ್ಕಮಗಳೂರು ನಗರಗಳ ನಡುವೆ ಕೆಎಸ್‌ಆರ್‌ಟಿಸಿ ಸಂಸ್ಥೆಯ ಆರು ಇಲೆಕ್ಟ್ರಿಕ್‌ ಬಸ್‌ಗಳ (Bangalore – Chikmagalur KSRTC Electric Bus) ಸೇವೆ ಸದ್ದಿಲ್ಲದೇ ಆರಂಭವಾಗಿದೆ. ಸರಕಾರಿ ಸಾರಿಗೆ ವ್ಯವಸ್ಥೆಯಲ್ಲಿ ಬೆಂಗಳೂರಿಗೆ ಸೀಮಿತವಾಗಿ ಇಲೆಕ್ಟ್ರಿಕ್‌ ಬಸ್‌ಗಳನ್ನು ರಾಜ್ಯ ಸರಕಾರ ಈಗಾಗಲೇ ಪರಿಚಯಿಸಿದೆ. ಪ್ರಸುತ್ತ ರಾಜ್ಯ ಅಂತರ್‌ ಜಿಲ್ಲೆಗಳ ನಡುವೆಯೂ ಇಲೆಕ್ಟ್ರಿಕ್‌ ಬಸ್‌ಗಳ ಸಂಚಾರಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದ್ದು, ಬೆಂಗಳೂರಿನಿಂದ ಚಿಕ್ಕಮಗಳೂರು ನಗರಗಳ ನಡುವೆ ಆರು ಇಲೆಕ್ಟ್ರಿಕ್‌ ಸಾರಿಗೆ ಬಸ್‌ಗಳು ಸಂಚಾರ ಆರಂಭಗೊಂಡಿದ್ದು, ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಈ ಹಿಂದೆ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಆರು ವೋಲ್ಟೋ ಬಸ್‌ಗಳು ಸಂಚಾರ ನಡೆಸುತ್ತಿದ್ದವು. ವೋಲ್ಟೋ ಬಸ್‌ಗಳ ಬದಲಾಗಿ ಸದ್ಯ “ಇವಿ ಪವರ್‌ ಪ್ಲೇಸ್‌” ಎಂಬ ಪರಿಸರ ಸ್ನೇಹಿ ಇಲೆಕ್ಟ್ರಿಕ್‌ ಬಸ್‌ಗಳು ಸಂಚಾರ ಆರಂಭವಿಸಿದೆ. ಚಿಕ್ಕಮಗಳೂರಿನಿಂದ ಬೆಂಗಳೂರು ಪ್ರಯಾಣಿಕರೊಂದಿಗೆ ಈ ಬಸ್‌ ಗಳು ಹಾಸನದಿಂದ ಬೇಲೂರು ಪ್ರಯಾಣಿಕರಿಗೂ ಸೇವೆ ಒದಗಿಸುತ್ತಿವೆ. ವೋಲ್ಟೋ ಬಸ್‌ನಂತೆ ಅತ್ಯಾಕರ್ಷಕ ವಿನ್ಯಾಸವನ್ನು ಹೊಂದಿರುವ ಈ ಸರಕಾರಿ ಇಲೆಕ್ಟ್ರಿಕ್‌ ಬಸ್‌ಗಳು ಪ್ರಯಾಣಿಕರ ಸುಖಕರ ಪ್ರಯಾಣಕ್ಕೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಹೊಂದಿವೆ. ಬೆಂಗಳೂರಿನಿಂದ ನಿತ್ಯ ಬೆಳಗ್ಗೆ 5 ರಿಂದ ಸಂಚಾಋ ಆರಂಭಿಸುವ ಆರು ಇಲೆಕ್ಟ್ರಿಕ್‌ ಬಸ್‌ಗಳು ರಾತ್ರಿ 12ಗಂಟೆಯವರೆಗೂ ಪ್ರಯಾಣಿಕರಿಗೆ ಸೇವೆ ನೀಡಲಿದೆ. ಬೆಂಗಳೂರಿನಿಂದ ಚಿಕ್ಕಮಗಳೂರು ನಡುವೆ ಸಂಚಾರ ಸೇವೆ ನೀಡುತ್ತಿರುವ ಈ ಬಸ್‌ಗಳ ಬ್ಯಾಟರಿ ಚಾರ್ಜರ್‌ಗಾಗಿ ನಗರದ ಮೂಡಿಗೆರೆ ರಸ್ತೆಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ ಡಿಪೋದ ಆವರಣದಲ್ಲಿ ಎರಡು ಚಾರ್ಜರ್‌ ಘಟಕಗಳನ್ನು ಸ್ಥಾಪಿಸಲಾಗಿದೆ.

ಏಕಕಾಲದಲ್ಲಿ ಎರಡು ಬಸ್‌ಗಳ ಬ್ಯಾಟರಿಯನ್ನು ಈ ಘಟಕಗಳು ಚಾರ್ಜ್‌ ಮಾಡಬಹುದಾಗಿದೆ. ಒಮ್ಮೆ ಬ್ಯಾಟರಿ ಚಾರ್ಜ್‌ ಮಾಡಲು ಎರಡು ಗಂಟೆಗಳ ಕಾಲಾವಕಾಶ ಬೇಕಾಗಿದ್ದು, ಒಮ್ಮೆ ಚಾರ್ಜ್‌ ಮಾಡಿದರೆ 300 ಕಿ.ಮೀ. ಸಾಗುವ ಸಾಮರ್ಥ್ಯವನ್ನು ಈ ಇಲೆಕ್ಟ್ರಿಕ್‌ ಬಸ್‌ಗಳು ಹೊಂದಿವೆ. ಹಾಗೆಯೇ ಹಾಸನ ಡಿಪೋದಲ್ಲೂ ಚಾರ್ಜರ್‌ ಯೂನಿಟ್‌ಗಳನ್ನು ತೆರೆದಲ್ಲಿ ಮತ್ತಷ್ಟು ಅನುಕೂಲವಾಗಲಿದೆ ಎನ್ನುವುದು ಕೆಎಸ್ಆರ್ಟಿಸಿ ಸಿಬ್ಬಂದಿ ಅನಿಸಿಕೆಯಾಗಿದೆ. ಪ್ರಯಾಣಿಕರ ಸುಖಕರ ಪ್ರಯಾಣಕ್ಕೆ ಅನುಕೂಲವಾಗುವಂತೆ ಈ ಬಸ್‌ಗಳಲ್ಲಿ ಎಸಿ, ಪುಶ್‌ಬ್ಯಾಕ್‌ ಸೀಟ್‌ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬಸ್‌ನ ಒಳಬದಿ ಮತ್ತು ಹಿಂಬದಿಯಲ್ಲಿ ಸಿಸಿ ಕ್ಯಾಮರಾವನ್ನು ಅಳವಡಿಸಲಾಗಿದೆ. ಬಸ್‌ನಲ್ಲಿ ಎರಡು ಟಿವಿ ಸೇರಿದಂತೆ ಮೊಬೈಲ್‌ ಚಾರ್ಜರ್‌ ವ್ಯವಸ್ಥೆಯನ್ನು ಪ್ರತೀ ಆಸನದಲ್ಲಿ ಕಲ್ಪಿಸಲಾಗಿದೆ. ಶಬ್ದರಹಿತವಾಗಿರುವ ಈ ಬಸ್‌ಗಳು ನಾನ್‌ಸ್ಟಾಪ್‌ ಪ್ರಯಾಣಕ್ಕೆ ಹೇಳಿ ಮಾಡಿಸಿದ ಬಸ್‌ ಆಗಿದೆ. ಪ್ರತೀ ಬಸ್‌ ತಲಾ 43 ಸೀಟ್‌ಗಳ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ : ಮಂಗಳೂರು ಶಾಸಕ ಯು.ಟಿ.ಖಾದರ್ ನೂತನ ಸ್ಪೀಕರ್

ಒಟ್ಟಾರೆ ವೋಲ್ಟೋ ಬಸ್‌ಗೆ ಯಾವುದೇ ಸೌಲಭ್ಯ ಕಡಿಮೆ ಇಲ್ಲದಂತೆ ಇಲೆಕ್ಟ್ರಿಕ್‌ ಬಸ್‌ಗಳನ್ನು ವಿನ್ಯಾಸಗೊಳಿಸಲಾಗಿದ್ದು, ಪ್ರಯಾಣಿಕರ ಹಾಗೂ ಸಾರ್ವಜನಿಕರು ಆಕರ್ಷಣೆಯಾಗುತ್ತಿದೆ. ಚಿಕ್ಕಮಗಳೂರಿನಿಂದ ಬೆಂಗಲೂರಿಗೆ ಇಲೆಕ್ಟ್ರಿಕ್‌ ಬಸ್‌ ವ್ಯವಸ್ಥೆಯನ್ನು ಕಲ್ಪಿಸಿರುವುದು ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಮತ್ತು ಸಾರ್ವಜನಿಕರಲ್ಲಿ ಸಂತೋಷವನ್ನುಂಟು ಮಾಡಿದೆ.

Bangalore – Chikmagalur KSRTC Electric Bus Traffic: Here is the complete information

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular