7th Pay Commission : ವೇತನ ಆಯೋಗ, ಮೇ 27ರಂದು ಮಹತ್ಚದ ಸಭೆ

ಬೆಂಗಳೂರು : ರಾಜ್ಯ ಸರಕಾರಿ ನೌಕರರು (Karnataka 7th Pay Commission) ತಮ್ಮ ವೇತನ ಹಾಗೂ ಡಿಎ ಏರಿಕೆಗಾಗಿ ಕಾಯುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಸರಕಾರಿ ನೌಕರರಿಗೆ ಸಿಹಿ ಸುದ್ದಿಯೊಂದು ಇದೆ. ಹೌದು ಕರ್ನಾಟಕ ಸರಕಾರ ರಾಜ್ಯ ಸರಕಾರಿ ನೌಕರರ ವೇತನ ಶ್ರೇಣಿ ಪರಿಷ್ಕರಿಸಲು ಮತ್ತು ವೇರತನ ರಚನೆ ಸೇರಿದಮಥೆ ಇತ್ಯಾದಿಗಳನ್ನು ರೂಪಿಸುವ ಸಲುವಾಗಿ ರಾಜ್ಯ 7ನೇ ವೇತನ ಆಯೋಗ ರಚನೆ ಮಾಡಿದೆ. ಇದೇ ಮೇ 26 ರಂದು ವೇತನ ಆಯೋಗದ ಮಹತ್ವದ ಸಭೆಯನ್ನು ಕರೆದಿದೆ.

ಸದ್ಯ ರಾಜ್ಯ 7ನೇ ವೇತನ ಆಯೋಗದ ಕಾರ್ಯದರ್ಶಿಯಾದ ಹೆಪ್ಸಿಬಾ ರಾಣಿ ಕೊರ್ಲಪಾಟಿ ಈ ಕುರಿತಂತೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಪತ್ರವನ್ನು ಬರೆದಿದ್ದಾರೆ. ಇಲಾಖೆ ಮುಖ್ಯಸ್ಥರೊಂದಿಗೆ ಇಲಾಖೆಗಳ ಪ್ರತಿಕ್ರಿಯೆ ಅಥವಾ ಬೇಡಿಕೆಗಳ ಕುರಿತು ಸಭೆ ಎನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಪತ್ರ ಒಳಗೊಂಡಿದೆ. ರಾಜ್ಯ 7ನೇ ವೇತನ ಆಯೋಗ ರಚನೆಯ ಆದೇಶ ನವೆಂಬರ್‌ 19,2022ರ, ಅಧಿಕೃತ ಜ್ಞಾಪನಾ ಸಂಖ್ಯೆ ಜನವರಿ17,202 ಮತ್ತು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರ ಪತ್ರ ಫೆಬ್ರವರಿ 10, 2023ಉಲ್ಲೇಖ ಮಾಡಿ ಈ ಪತ್ರವನ್ನು ಬರೆಯಲಾಗಿದೆ.

ಇನ್ನು ಈ ಪತ್ರದಲ್ಲಿ ರಾಜ್ಯ 7ನೇ ವೇತನ ಆಯೋಗದ ಕಾರ್ಯದರ್ಶಿಗಳು, ರಾಜ್ಯ ಸರಕಾರವು ಸರಕಾರಿ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳ ನೌಕರರು ಹಾಗೂ ವಿಶ್ವವಿದ್ಯಾಲಯಗಳ ಭೋಧಕೇತರ ಸಿಬ್ಬಂದಿಗಳ ವೇತನ, ತುಟ್ಟಿಭತ್ಯೆ ಹಾಗೂ ಇತರ ಸೌಲಭ್ಯಗಳ ಬಗ್ಗೆ ಪರಿಶೀಲಿಸಿ, ಪರಿಷ್ಕರಿಸಿ ಸರಕಾರಕ್ಕೆ ವರದಿ ನೀಡಲು ನವೆಂಬರ್‌ 19, 2022ರಲ್ಲಿ ಸುಧಾಕರ್‌ ರಾವ್‌ ಅಧ್ಯಕ್ಷತೆಯಲ್ಲಿ ರಾಜ್ಯ 7ನೇ ವೇತನ ಆಯೋಗವನ್ನು ರಚಿಸುವ ಬಗ್ಗೆ ನೆನಪಿಸಲು ಇಚ್ಛಿಸುತ್ತೇನೆ ಎಂದು ಹೇಳಿದ್ದಾರೆ.

ಆಯೋಗಕ್ಕೆ ವಹಿಸಲಾಗಿರುವ ಪರಿಶೀಲನಾರ್ಹ ಅಂಶಗಳ ಕುರಿತು ಸಾರ್ವಜನಿಕರು, ಸೇವಾ ಸಂಘಗಳು ಹಾಗೂ ಸರಕರಿ ನೌಕರರು, ಸಂಘ ಸಂಸ್ಥೆಗಳಿಂದ ಮುಕ್ತ ಸಲಹೆ, ಅನಿಸಿಕೆ ಅಲ್ಲದೇ ಇಲಾಖೆಗಳಿಂದ ಮಾಹಿತಿ ಹಾಗೂ ಮುಕ್ತ ಸಲಹೆ ಪಡೆಯುವ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಆಯೋಗವು ಜ್ಞಾಪನದಲ್ಲಿ ವಿವಿಧ ಪ್ರಶ್ನಾವಳಿಗಳನ್ನು ರಚಿಸಿ ಕರ್ನಾಟಕ ರಾಜ್ಯಪತ್ರವ್ನು ದಿನಾಂಕ ಜನವರಿ 17, 2023ರಂದು ಪ್ರಕಟಿಸಿರುತ್ತದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ : ಅಂಗಡಿಗಳಲ್ಲಿ 2000ರೂ ನೋಟು ನಿರಾಕರಿಸುವಂತಿಲ್ಲ : RBI ಗವರ್ನರ್ ಸ್ಪಷ್ಟನೆ

ಇದನ್ನೂ ಓದಿ : SBI ನಲ್ಲಿ ಆನ್‌ಲೈನ್‌ ಮೂಲಕ ಪಿಪಿಎಫ್‌ ಖಾತೆ ತೆರೆಯುವುದು ಹೇಗೆ ? ಇಲ್ಲಿದೆ ಸಂಪೂರ್ಣ ಮಾಹಿತಿ

ಸದರಿ ಪ್ರಶ್ನಾವಳಿಗಳಿಗೆ ತಮ್ಮ ಸಂಘದ ವತಿಯಿಂದ ಪ್ರತಿಕ್ರಿಯೆಗಳು ಅಥವಾ ಉತ್ತರಗಳು ಅಥವಾ ಬೇಡಿಕೆಗಳು ಆಯೋಗದಲಲಿ ಸ್ವೀಕೃತಗೊಂಡಿರುತ್ತದೆ. ಈ ಹಿನ್ನಲೆಯಲ್ಲಿ, ಆಯೋಗವು ತಮ್ಮ ಸಂಘದ ಬೇಡಿಕೆಗಳು ಅಥವಾ ವಿನಂತಿಗಳು ಅಥವಾ ಅಭಿಪ್ರಾಯಗಳ ಕುರಿತು ಚರ್ಚಿಸಲು ಇಚ್ಛಿಸುತ್ತದೆ. ಈ ಹಿನ್ನೆಲೆಯಲ್ಲಿ ದಿನಾಂಕ ಮೇ 26, 2023 ರಂದು ಸಭೆಯನ್ನು ಕರೆಯಲಾಗಿದೆ. ಈ ಸಭೆ ಸಭಾ ಕೊಠಡಿ, ರಾಜ್ಯ 7ನೇ ವೇತನ ಆಯೋಗವು ೩ನೇ ಮಹಡಿ, ಹಳೆಯ ಕಲ್ಲು ಕಟ್ಟಡ, ಔಷಧ ನಿಯಂತ್ರಣ ಸಂಕೀರ್ಣ, ಅರಮನೆ ರಸ್ತೆ, ಬೆಂಗಳೂರು ಇಲ್ಲಿ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ ಎಂದು ವರದಿ ಆಗಿದೆ.

Karnataka 7th Pay Commission : Pay commission, big meeting on 27th May

Comments are closed.