ಸೋಮವಾರ, ಏಪ್ರಿಲ್ 28, 2025
HomeCinemaAbhishek Ambarish : ತಂದೆಯ ಹುಟ್ಟುಹಬ್ಬಕ್ಕೆ ಭಾವಿ ಪತ್ನಿಯ ಜೊತೆ ವಿಶೇಷ ವಿಡಿಯೋ ಹಂಚಿಕೊಂಡ ಅಭಿಷೇಕ್‌...

Abhishek Ambarish : ತಂದೆಯ ಹುಟ್ಟುಹಬ್ಬಕ್ಕೆ ಭಾವಿ ಪತ್ನಿಯ ಜೊತೆ ವಿಶೇಷ ವಿಡಿಯೋ ಹಂಚಿಕೊಂಡ ಅಭಿಷೇಕ್‌ ಅಂಬರೀಷ್‌

- Advertisement -

ಕನ್ನಡ ಸಿನಿರಂಗದ ಹಿರಿಯ ನಟ ಅಂಬರೀಶ್‌ ಅವರ 71ನೇ ಜನ್ಮದಿನವಾಗಿದೆ. ಈ ವಿಶೇಷ ದಿನದಂದು ಅವರ ಪ್ರೀತಿಯ ಮಗ ಅಭಿಷೇಕ್‌ ಅಂಬರೀಶ್‌ (Abhishek Ambarish) ತಮ್ಮ ಭಾವಿ ಪತ್ನಿ ಅವಿವಾ ಬಿಡಪ್ಪ ಅವರೊಂದಿಗಿನವಿಶೇಷ ವಿಡಿಯೋದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ರೆಟ್ರೋ ಹಾಡಿಗೆ ನಟ ಅಭಿಷೇಕ್‌ ಅಂಬರೀಶ್‌ ಹಾಗೂ ಅವಿವಾ ಹೆಜ್ಜೆ ಹಾಕಿರುವ ವಿಡಿಯೋ ಸಖತ್‌ ವೈರಲ್‌ ಆಗಿದೆ. ಇನ್ನು ಶೀಘ್ರದಲ್ಲೇ ಈ ಜೋಡಿಗಳು ಹಸೆಮಣೆ ಏರಲಿದ್ದಾರೆ.

ನಟ ಅಭಿಷೇಕ್‌ ಅಂಬರೀಶ್‌, “ಸ್ಯಾಂಡಲ್ ವುಡ್ ನ ರೆಬೆಲ್ ಸ್ಟಾರ್, ನಮ್ಮೆಲ್ಲರ ಪ್ರೀತಿಯ ಡಾ.ಅಂಬರೀಷ್ ರವರ ಹುಟ್ಟುಹಬ್ಬದ ಸ್ಮರಣೆಯಲ್ಲಿ ಒಂದು ವಿಶೇಷವಾದ tribute.ಅಭಿಷೇಕ್ ಅಂಬರೀಶ್ ಹಾಗೂ ಅವಿವ ಬಿಡಪ್ಪ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು” ಎಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನಟ ಅಭಿಷೇಕ್‌ ಅಂಬರೀಶ್‌ ತಮ್ಮ ಭಾವಿ ಪತ್ನಿ ಅವಿವಾ ಜೊತೆ ತಂದೆಯ ಹಿಟ್‌ ಸಿನಿಮಾಗಳಾದ, ಒಲವಿನ ಉಡುಗೊರೆ, ಚಕ್ರವ್ಯೂಹ ಸೇರಿದಂತೆ ಇನ್ನಿತರ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಟ ಅಭಿಷೇಕ್‌ ಅಂಬರೀಶ್‌ ವೈಟ್‌ ಅಂಡ್‌ ವೈಟ್‌ ಡ್ರೆಸ್‌ನಲ್ಲಿ ಕಾಣಿಸಿಕೊಂಡರೆ, ಇನ್ನು ಅವಿವಾ ತೆಳು ಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ.

ಇದನ್ನೂ ಓದಿ : Actor Ambareesh’s birthday : ಅಂಬಿ ಅಪ್ಪಾಜಿ ಪ್ರೀತಿ ಆದರ್ಶ ಇಂದಿನ ಪೀಳಿಗೆಗೆ ಮಾದರಿ ಎಂದ ನಟ ದರ್ಶನ್‌

ಇದೇ ಬರುವ ಜೂನ್‌ 5 ರಂದು ಅಭಿಷೇಕ್‌ ಅಂಬರೀಶ್‌ ಹಾಗೂ ಅವಿವಾ ಬಿಡಪ್ಪ ಹಸೆಮಣೆ ಏರಲಿದ್ದು, ಇವರ ಅದ್ದೂರಿ ಆರತಕ್ಷತೆ ಜೂನ್‌ 7ರಂದು ಬೆಂಗಳೂರಿನ ಪ್ಯಾಲೇಸ್‌ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿ ನಡೆಯಲಿದೆ. ಇನ್ನು ಸಿನಿಮಾ ಜೀವನಕ್ಕೆ ಬಂದರೆ ಬ್ಯಾಡ್‌ ಮ್ಯಾನರ್ಸ್‌ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಅಭಿಷೇಕ್‌ಗೆ ಜೊತೆಯಾಗಿ ರಚಿತಾ ರಾಮ್‌ ಹಾಗೂ ಪ್ರಿಯಾಂಕಾ ಅಭಿನಯಿಸಲಿದ್ದಾರೆ. ಈ ಸಿನಿಮಾವನ್ನು ದುನಿಯಾ ಸೂರಿ ನಿರ್ದೇಶಿಸಿದ್ದಾರೆ.

Abhishek Ambarish: Abhishek Ambarish shared a special video with his future wife for his father’s birthday

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular