Education Minister Madhubangarappa : ಬಿಜೆಪಿ ಕಾಂಗ್ರೆಸ್ ಜಗಳಕ್ಕೆ ಬಡವಾದ ಮಕ್ಕಳು : ಶಾಲಾರಂಭದ ಹೊತ್ತಲ್ಲೇ ಪಠ್ಯ ಬದಲಾವಣೆ ಶಾಕ್

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ತೀವ್ರ ಕೋಲಾಹಲ‌ ಸೃಷ್ಟಿಸಿದ್ದು ಶಿಕ್ಷಣ ಕ್ಷೇತ್ರ. ಹಿಜಾಬ್ ಸೇರಿದಂತೆ ಹಲವು ಕಾರಣಕ್ಕೆ ರಾಜ್ಯ ದೇಶದ ಗಮನ ಸೆಳೆದಿತ್ತು. ಈಗ ಸರಕಾರ (Education Minister Madhubangarappa) ಬದಲಾಗಿದ್ದರೂ ಮತ್ತೊಮ್ಮೆ ಶೈಕ್ಷಣಿಕ ಕ್ಷೇತ್ರ ವಿವಾದಕ್ಕೆ ಗುರಿಯಾಗೋ ಮುನ್ಸೂಚನೆ ಸಿಕ್ಕಿದೆ. ನೂತನ ಶಿಕ್ಷಣ ಸಚಿವರೂ ಪಠ್ಯಕ್ರಮ ಬದಲಿಸುವ ಮಾತನಾಡಿ ಗಮನ ಸೆಳೆದಿದ್ದಾರೆ.

ಇದೀಗ ರಾಜ್ಯದಲ್ಲಿ ಸರಕಾರ ಬದಲಾಗಿದೆ. ಶಿಕ್ಷಣ ಸಚಿವರೂ ಬದಲಾಗಿದ್ದಾರೆ. ಹೀಗಾಗಿ ಮತ್ತೆ ಪಠ್ಯ ಬದಲಾವಣೆಯ ಸಂಗತಿ ಮುನ್ನಲೆಗೆ ಬಂದಿದೆ. ನೂತನವಾಗಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಮಧು ಬಂಗಾರಪ್ಪ ಮಾಧ್ಯಮಗಳ ಜೊತೆ ಮಾತನಾಡಿದ್ದು ಈ ವೇಳೆ ಪಠ್ಯ ಬದಲಾವಣೆಯ ಮುನ್ಸೂಚನೆ ನೀಡಿದ್ದಾರೆ. ನಮ್ಮ ಪ್ರಣಾಳಿಕೆಯ ಮುಖ್ಯ ಅಂಶವೇ ಸರ್ವ ಜನಾಂಗದ ಶಾಂತಿಯ ತೋಟ ಅನ್ನೋದು ಹೀಗಾಗಿ ಇನ್ಮುಂದೇ ಎಲ್ಲವೂ ಇರುತ್ತೆ. ಆದರೆ ಎಲ್ಲವೂ ಒಪ್ಪುವಂತೆ ಇರುತ್ತೆ. ಪ್ರತಿಯೊಂದು ಮಗುವಿಗೂ ಪೂರಕವಾದ ಕಲಿಕಾ ವಾತಾವರಣ ಮಾಡಲಾಗುವುದು ಎಂದಿದ್ದಾರೆ.

ಅಲ್ಲದೇ ಜೂನ್ 31 ರಂದು ಶಾಲೆ ಆರಂಭವಾಗಲಿದೆ. ರಾಜ್ಯದಾದ್ಯಂತ ನಾನು ಕೂಡ ಶಾಲೆಗಳಿಗೆ ಭೇಟಿ ನೀಡಲಿದ್ದೇನೆ. ಈಗಾಗಲೇ ಶಾಲಾರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಜಡ್ಡುಗಟ್ಟಿದ ಅಧಿಕಾರಿ ವರ್ಗಕ್ಕೂ ಈಗಾಗಲೇ ಸೂಚನೆ ನೀಡಿದ್ದೇನೆ. ಈಗಾಗಲೇ ಪ್ರಾಥಮಿಕ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ್ದೇನೆ‌‌. ಉನ್ನತ ಮಟ್ಟದ ಸಭೆ ನಡೆಸುತ್ತೇನೆ ಎಂದಿದ್ದಾರೆ. ಬಿಜೆಪಿ ಆಡಳಿತದಲ್ಲಿದ್ದಾಗ ಪಠ್ಯಗಳಲ್ಲಿ ಸೇರಿಸಲಾದ ವೀರ ಸಾರ್ವಕರ್ ಬದುಕು ಸೇರಿದಂತೆ ಹಲವು ಪಾಠಗಳಿಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.

ಕೇವಲ ಪಠ್ಯಕ್ರಮ ಮಾತ್ರವಲ್ಲದೇ ಶಾಲೆಗಳಲ್ಲಿ ಯೋಗ ಕಲಿಸುವುದಕ್ಕೂ ಕಾಂಗ್ರೆಸ್ ಅಡ್ಡಗಾಲಾಕಿತ್ತು‌. ಹೀಗಾಗಿ ಈಗ ಕಾಂಗ್ರೆಸ್ ಸರಕಾರವೇ ಆಡಳಿತದಲ್ಲಿರೋದರಿಂದ ಬಹುತೇಕ ಪಠ್ಯ ಪುಸ್ತಕಗಳ ಪರಿಷ್ಕರಣೆ ನಡೆಯಲಿದೆ ಎಂದು ನೀರಿಕ್ಷಿಸಲಾಗುತ್ತಿದೆ. ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಎಡಪಂಥೀಯ ಚಿಂತಕರು ಹಾಗೂ ಶಿಕ್ಷಣ ತಜ್ಞರು ಈಗಾಗಲೇ ಸಿದ್ಧರಾಮಯ್ಯನವರನ್ನು ಭೇಟಿ ಮಾಡಿ ಪಠ್ಯ ಬದಲಾವಣೆಗೆ ಅವಕಾಶ ಕೊಡುವಂತೆ ಮನವಿ ಮಾಡಿದ್ದರು.

ಇದನ್ನೂ ಓದಿ : Congress Guarantee Card : ಗ್ಯಾರಂಟಿ ಜಾರಿಗೆ ಸರ್ಕಸ್ ಆರಂಭ, ಬ್ಯಾಕ್ ಟೂ ಬ್ಯಾಕ್ ಸಭೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ ಡಿಕೆಶಿ

ಇದರ ಬೆನ್ನಲ್ಲೇ ಈಗ ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಿಸಿದ ಪಠ್ಯಗಳಿಗೆ ಕಾಂಗ್ರೆಸ್ ಪಕ್ಷ ಕೊಕ್ ನೀಡಿ ಹೊಸಪಠ್ಯಗಳನ್ನು ಅಳವಡಿಸುವ ಸಾಧ್ಯತೆ ಇದೆ. ಸದ್ಯದಲ್ಲೇ ಈ ಬಗ್ಗೆ ಸಮಿತಿ ರಚನೆಯಾಗಲಿದ್ದು, ಈ ಬಗ್ಗೆ ಮಧುಬಂಗಾರಪ್ಪ ಅಧಿಕೃತ ಘೋಷಣೆಯೊಂದೇ ಬಾಕಿ ಎಂಬಂತಾಗಿದೆ.

Education Minister Madhubangarappa : Poor children due to BJP-Congress tussle: Shock of curriculum change at the start of school

Comments are closed.