ಚಾಮರಾಜನಗರ : ರಾಜ್ಯದ ಅತ್ಯಂತ ಶ್ರೀಮಂತ ದೇಗುಲಗಳಲ್ಲಿ ಒಂದಾಗಿರುವ ಮಲೆ ಮಹದೇಶ್ವರ ದೇವಸ್ಥಾನ (Male Mahadeshwara Temple) ಇದೀಗ ಮತ್ತೆ ಸುದ್ದಿಯಲ್ಲಿದೆ. ರಾಜ್ಯದ ಬಹುತೇಕ ದೇಗುಲಗಳಲ್ಲಿ ಆನೆಯನ್ನು ಸಾಕಲಾಗುತ್ತದೆ. ಆದ್ರೀಗ ಮಹದೇಶ್ವರಸ್ವಾಮಿ ದೇವಲಾಯದ ಆನೆ ಉಮಾ ಮಹೇಶ್ವರಿಗೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಆರೋಗ್ಯ ವಿಮೆ ಮಾಡಿಸುವ ಮೂಲಕ ಸುದ್ದಿಯಲ್ಲಿದೆ. ದೇವಳದ ಆನೆಗೆ ಬರೋಬ್ಬರಿ 5 ಲಕ್ಷ ರೂ. ಮೌಲ್ಯದ ವಿಮೆ ಮಾಡಿಸಲಾಗಿದ್ದು, ವರ್ಷಕ್ಕೆ 11 ಸಾವಿರ ರೂಪಾಯಿ ಪ್ರೀಮಿಯಂನ್ನು ಆನೆಗಾಗಿ ಉಮಾ ಮಹೇಶ್ವರಿ ದೇವಸ್ಥಾನದ ಪ್ರಾಧಿಕಾರವು ಪಾವತಿ ಮಾಡಿರುತ್ತದೆ.
ಮಲೆಮಹೇಶ್ವರದ ದೇವಸ್ಥಾನ ಅಭಿವೃದ್ದಿ ಪ್ರಾಧಿಕಾರವು ವಿಮೆ ಮಾಡಿಸುವ ಸಲುವಾಗಿ 48 ವರ್ಷದ ಹೆಣ್ಣಾನೆ ಉಮಾ ಮಹೇಶ್ವರಿಯ ಆರೋಗ್ಯ ತಪಾಸಣೆ ಮಾಡಿಸಲಾಗಿದೆ. ಆನೆಯ ಆರೋಗ್ಯ ತಪಾಸಣೆಗೆ ಪಶು ವೈದ್ಯರು ಬಂದಿದ್ದು, ತಪಾಸಣೆ ಮಾಡಿದ ಅವರು ಆನೆ ಆರೋಗ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : Special Engagement : ವಿವಾಹಕ್ಕೂ ಕರಾರು ಪತ್ರ, ಯಲ್ಲಾಪುರದಲ್ಲೊಂದು ವಿಭಿನ್ನ ನಿಶ್ಚಿತಾರ್ಥ – Viral News
ಇನ್ನು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಆಗಿರುವ ಎಸ್. ಕಾತ್ಯಾಯಿನಿದೇವಿ ಪ್ರಕಾರ, ಅರಣ್ಯ ಇಲಾಖೆಯ ನಿಯಮದಂತೆ ಸಾಕಾನೆಗೆ ವಿಮೆ ಮಾಡಿಸಬೇಕು. ಎರಡೂವರೆ ವರ್ಷಗಳಿಂದ ವಿಮೆ ಮಾಡಿರಲಿಲ್ಲ. ಈಗ ಆರೋಗ್ಯ ತಪಾಸಣೆ ಮಾಡಿಸಿ, ವಿಮೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
5 lakhs Health insurance for Umamaheswari, the elephant of Male Mahadeshwara Temple