Monsoon Rain : ಜೂನ್ 4ರಂದು ಕೇರಳಕ್ಕೆ ಮಾನ್ಸೂನ್ ಪ್ರವೇಶ : ಹವಾಮಾನ ಇಲಾಖೆ ಮಾಹಿತಿ

ನವದೆಹಲಿ : ಕೇರಳದಲ್ಲಿ ವಾಡಿಕೆಯಂತೆ ಮಾನ್ಸೂನ್‌ ಜೂನ್ 4 ರಂದು (Monsoon Rain) ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಕರ್ನಾಟಕದಲ್ಲಿ ವಾಡಿಕೆಯಂತೆ ಕೇರಳದಲ್ಲಿ ಮಾನ್ಸೂನ್‌ ಮಾರುತದಿಂದ ಮಳೆಯಾದ ಎರಡನೇ ವಾರದಲ್ಲಿ ಸುರಿಯುತ್ತದೆ. ಅದರಂತೆ ರಾಜ್ಯದಲ್ಲಿ ಜೂನ್‌ನಲ್ಲಿ ಆರಂಭದಲ್ಲೇ ಮಳೆ ಆಗಮನವಾಗುತ್ತದೆ. ಪ್ರತಿ ವರ್ಷ ಜೂನ್‌ 1 ರ ಹೊತ್ತಿಗೆ ಆಗಮಿಸುವ ಮುಂಗಾರು ಮಳೆ ಈ ಬಾರೀ ಜೂನ್‌ 4ರಂದು ಬರುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಹೇಳಿದೆ.

ವರ್ಷಂಪ್ರತಿ ಮುಂಗಾರು ಮಳೆ ಜೂನ್‌ 1 ರಂದು ಕೇರಳ ಪ್ರವೇಶಿಸುತ್ತದೆ. ಅಲ್ಲಿ ಮಳೆ ಸುರಿದ ಮೂರು ಅಥವಾ ನಾಲ್ಕು ದಿನಗಳಲ್ಲಿ ಕರ್ನಾಟಕದಲ್ಲಿ ಮಳೆಯಾಗುತ್ತದೆ. ಈ ಸಲ ಮಳೆ ವಿಳಂಬದಿಂದ ರೈತರಿಗೆ ತೊಡಕಾಗಬಹುದು. ಇನ್ನೇನು ಮುಂದಿನ ವರ್ಷದ ಭತ್ತದ ಬೆಳೆಗೆ ಬಿತ್ತನೆ ಕೆಲಸ ಶುರು ಮಾಡಲಿದ್ದು, ವರುಣನ ಆಗಮನಕ್ಕಾಗಿ ಮುಗಿಲು ನೋಡುತ್ತಿದ್ದಾರೆ. ಇನ್ನುಳಿದಂತೆ ರೈತರು ಅದಕ್ಕಾಗಿಯೇ ಸಕಲ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದಾರೆ.

ಮಾನ್ಸೂನ್‌ ಮಾರುತದ ವಿಳಂಬವಾಗುವ ನಿರೀಕ್ಷೆ ಇರುವುದರಿಂದ ಜೂನ್‌ 4ರಂದು ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ನೈಋತ್ಯ ಮುಂಗಾರು ಸಾಮಾನ್ಯವಾಗಿ ಜೂನ್‌ 1 ರಂದು ಕೇರಳ ಪ್ರವೇಶಿಸುತ್ತದೆ ಮತ್ತು ಸುಮಾರು ಒಂದು ವಾರ ಏರುಪೇರು ಆಗುವ ಸಾಧ್ಯತೆ ಕೂಡ ಇರುತ್ತದೆ. ಅದರಲ್ಲೂ ನಮ್ಮ ದೇಶ ಕೃಷಿ ಆಧರಿತವಾಗಿದ್ದು, ಭಾರತದ ಆರ್ಥಿಕತೆಯು ಮಳೆಯನ್ನು ಅವಲಂಬಿಸಿದೆ. ದೇಶದ ಒಟ್ಟಾರೆ ವಾರ್ಷಿಕ ಮಳೆ ಪ್ರಮಾಣದಲ್ಲಿ ಶೇ.75ರಷ್ಟು ಮುಂಗಾರು ಮಳೆ ಒಳಗೊಂಡಿದೆ. ಹೀಗಾಗಿ ಈ ಮಳೆಯೇ ಸಕಾಲದಲ್ಲಿ ಬರದೇ ಇದ್ದಲ್ಲಿ ಕೃಷಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾದ್ಯತೆ ಇದೆ ಎಂದು ಮೂಲಗಳು ವರದಿ ಮಾಡಿದೆ.

ಕಳೆದ ತಿಂಗಳು, ಭಾರತೀಯ ಹವಾಮಾನ ಇಲಾಖೆ ಈ ವರ್ಷ ಸಾಮಾನ್ಯ ಮುಂಗಾರು ಮುನ್ಸೂಚನೆ ನೀಡಿದ್ದು, ಲಕ್ಷಾಂತರ ರೈತರಿಗೆ ಭರವಸೆಯನ್ನು ನೀಡಿದೆ. 2023ರಲ್ಲಿ ಸಾಮಾನ್ಯವಾಗಿ ಕಡಿಮೆ ಮಾನ್ಸೂನ್ ಮಳೆಯ ಮುನ್ಸೂಚನೆಯು ಆಗಲಿದ್ದು, ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ರೈತರಿಗೆ ಆರ್ಥಿಕ ಬೆಳವಣಿಗೆಗೆ ಅಪಾಯವನ್ನುಂಟುಮಾಡಿದೆ. ಮಳೆಯ ವಿಳಂಬದ ಹಿಂದೆ ಪ್ರಾಥಮಿಕವಾಗಿ ಎರಡು ಕಾರಣಗಳಿವೆ. ಮೊದಲನೆಯದು, ಅರಬ್ಬೀ ಸಮುದ್ರದಲ್ಲಿ ಮುಂದುವರಿದ ಆಂಟಿಸೈಕ್ಲೋನ್ ಮಾನ್ಸೂನ್ ಮಾರುತಗಳು ಸರಿಯಾದ ಸಮಯಕ್ಕೆ ಕೇರಳ ಕರಾವಳಿಯನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಎರಡನೆಯದು ಅರಬ್ಬಿ ಸಮುದ್ರದ ಮೇಲಿನ ಚಂಡಮಾರುತ, ‘ಫೇಬಿಯಾನ್’, ಇದು ಮಾನ್ಸೂನ್ ಪ್ರವಾಹಗಳಿಂದ ತೊಂದರೆ ಉಂಟಾಗಬಹುದು ಎನ್ನಲಾಗಿದೆ.

Monsoon Rain : ಜೂನ್‌ ಎರಡನೇ ವಾರ ಮಳೆ ಸಾಧ್ಯತೆ

ಇನ್ನು ನೈಋತ್ಯ ಮಾನ್ಸೂನ್ ಜೂನ್ 7 ರ ವೇಳೆಗೆ ಕೇರಳದ ಮೇಲೆ ಪ್ರಾರಂಭವಾದ ನಂತರ ಇಡೀ ರಾಷ್ಟ್ರದಲ್ಲಿ ನೈಋತ್ಯ ಮಾನ್ಸೂನ್‌ನಿಂದ ಮಳೆಯಾಗುವ ಸಾಧ್ಯತೆ ಇದೆ. ನಾಲ್ಕು ತಿಂಗಳ ಮಾನ್ಸೂನ್ ಋತುವಿನಲ್ಲಿ ಭಾರತವು ಸಾಮಾನ್ಯ ಮಳೆಯನ್ನು ಪಡೆಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಇದನ್ನೂ ಓದಿ : Gruha Jyothi Scheme : ಬಾಡಿಗೆದಾರರಿಗೂ ಸಿಗುತ್ತಾ 200ಯೂನಿಟ್‌ ವಿದ್ಯುತ್‌ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ?

ಭಾರತೀಯ ಹವಾಮಾನ ಇಲಾಖೆ ವರದಿಗಳ ಪ್ರಕಾರ, ಸರಾಸರಿಯಾಗಿ ಶೇ. 96 ರಿಂದ ಶೇ. 104 ರ ನಡುವೆ ಸರಾಸರಿ 88 ಸೆಂಟಿಮೀಟರ್‌ಗಳ ಮಳೆ ಆಗಲಿದೆ ಎನ್ನಲಾಗಿದೆ. ಕಳೆದ ವರ್ಷ, ಮಾನ್ಸೂನ್ ಮಳೆ ಸರಾಸರಿ ಶೇ. 106ರಷ್ಟು ಮಳೆ ಆಗಿದ್ದು, ಇದ್ದರಿಂದಾಗಿ 2022-23 ರಲ್ಲಿ ಆಹಾರ ಧಾನ್ಯ ಉತ್ಪಾದನೆಯನ್ನು ಹೆಚ್ಚಿಸಿತು.

Monsoon Rain : Monsoon enters Kerala on June 4: Meteorological Department information

Comments are closed.