ಮಂಗಳವಾರ, ಏಪ್ರಿಲ್ 29, 2025
HomeCinemaBhavana Menan Birthday : ಬಹುಭಾಷಾ ನಟಿ ಭಾವನಾಗೆ ಹುಟ್ಟುಹಬ್ಬದ ಸಂಭ್ರಮ

Bhavana Menan Birthday : ಬಹುಭಾಷಾ ನಟಿ ಭಾವನಾಗೆ ಹುಟ್ಟುಹಬ್ಬದ ಸಂಭ್ರಮ

- Advertisement -

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಜಾಕಿ ಸಿನಿಮಾ ನಾಯಕಿ ಭಾವನಾ ಮೆನನ್‌ (Bhavana Menan Birthday) ಅವರಿಗೆ 37 ನೇ ವರ್ಷದ ಹುಟ್ಟುಹಬ್ಬ ಸಂಭ್ರಮ. ದಕ್ಷಿಣ ಸಿನಿರಂಗದಲ್ಲಿ ಸಕ್ರಿಯವಾಗಿರುವ ಇವರು ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ನಟಿ ಭಾವನಾ ಹುಟ್ಟುಹಬ್ಬಕ್ಕೆ ಸಿನಿಗಣ್ಯರು ಕೂಡ ಶುಭ ಹಾರೈಸಿದ್ದಾರೆ.

ಬಣ್ಣದಲೋಕದಲ್ಲಿ ಭಾವನಾ ಎಂದೇ ಪ್ರಖ್ಯಾತಿ ಪಡೆದಿರುವ ಇವರ ಮೂಲ ಹೆಸರು ಕಾರ್ತಿಕಾ ಮೆನನ್‌ ಆಗಿರುತ್ತದೆ. ನಟಿ ಭಾವನಾ ಅವರು ಕನ್ನಡ, ತೆಲಗು, ತಮಿಳು ಮತ್ತು ಮಲಯಾಳಂ ಸಿನಿರಂಗದಲ್ಲಿ ಛಾಪು ಮೂಡಿಸಿರುವ ಇವರು 1986 ಜೂನ್‌ 6ರಂದು ಕೇರಳದಲ್ಲಿ ಜನಿಸಿದ್ದಾರೆ. ನಟಿ ಭಾವನಾ ತಾಯಿ ಪುಷ್ಪ ಗೃಹಿಣಿಯಾದರೆ, ತಂದೆ ಅಸಿಸ್ಟಂಟ್‌ ಸಿನಿಮ್ಯಾಟೋಗ್ರಾಫರ್‌ ಜಿ. ಬಾಲಚಂದ್ರನ್‌ ಆಗಿದ್ದರು.

ಇದನ್ನೂ ಓದಿ : Gujarati movie : ಕನ್ನಡದಲ್ಲಿ ಗುಜರಾತಿ ಸಿನಿಮಾ ಜುಲೈ 7ಕ್ಕೆ ‘ರಾಯರು ಬಂದರು ಮಾವನ ಮನೆಗೆ’ ರಿಲೀಸ್‌

ಇನ್ನು ನಟಿ ಭಾವನಾ ತಮ್ಮ 16ನೇ ವಯಸ್ಸಿನಲ್ಲಿ ನಮ್ಮಾಳ್‌ ಎಂಬ ಮಲಯಾಳಂ ಸಿನಿಮಾದ ಮೂಲಕ ಬಣ್ಣಲೋಕಕ್ಕೆ ಕಾಲಿಟ್ಟಿದ್ದರು. 2010ರಲ್ಲಿ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಜಾಕಿ ಸಿನಿಮಾದ ಮೂಲಕ ಕನ್ನಡ ಸಿನಿರಂಗಕ್ಕೆ ಪಾದಾಪರ್ಣೆ ಮಾಡಿದ್ದಾರೆ. ನಂತರದ ದಿನಗಳಲ್ಲಿ ಕಿಚ್ಚ ಸುದೀಪ್‌ ಅಭಿನಯದ ವಿಷ್ಣುವರ್ಧನ ಹಾಗೂ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ರೋಮಿಯೋ ಮುಂತಾದ ಸಿನಿಗಳಲ್ಲಿ ಕೂಡ ನಟಿಸಿದ್ದಾರೆ. ಇನ್ನು ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಜೊತೆ ಕೂಡ ಅಭಿನಯಿಸಿದ್ದಾರೆ.

Bhavana Menan Birthday : Happy birthday to multi-lingual actress Bhavana

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular