Special gift for King Kohli in London : ವಿರಾಟ್ ಕೊಹ್ಲಿ ದಂಪತಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಕ್ಲಬ್

ಲಂಡನ್ : ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World test championship final 2023 – WTC final 2023) ಪಂದ್ಯಕ್ಕಾಗಿ ಭಾರತ ತಂಡದ ಜೊತೆ ಲಂಡನ್’ನಲ್ಲಿ (Special gift for King Kohli in London) ಬೀಡು ಬಿಟ್ಟಿದ್ದಾರೆ. 20221-23ನೇ ಸಾಲಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ (India Vs Australia WTC final 2023) ತಂಡಗಳ ನಡುವೆ ಬುಧವಾರ (ಜೂನ್ 7) ಲಂಡನ್’ನಲ್ಲಿರುವ ದಿ ಓವಲ್ ಮೈದಾನದಲ್ಲಿ ಆರಂಭವಾಗಲಿದೆ.

WTC ಫೈನಲ್ ಪಂದ್ಯಕ್ಕೂ ಮೊದಲು ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾಗೆ ಲಂಡನ್’ನಲ್ಲಿ ವಿಶೇಷ ಉಡುಗೊರೆ ಸಿಕ್ಕಿದೆ. ಎರಡು ದಿನಗಳ ಹಿಂದೆ ವಿರುಷ್ಕಾ ದಂಪತಿ ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಕ್ಲಬ್ ತಂಡದ ಪಂದ್ಯ ವೀಕ್ಷಿಸಲು ತೆರಳಿದ್ದರು. ಪಂದ್ಯದ ನಂತರ ಮ್ಯಾಂಚೆಸ್ಟರ್ ಸಿಟು ಫುಟ್ಬಾಲ್ ಕ್ಲಬ್ ಟೀಮ್ ಇಂಡಿಯಾದ ದಿಗ್ಗಜ ಕ್ರಿಕೆಟಿಗನಿಗೆ ಮತ್ತು ಅವರ ಪತ್ನಿಗೆ ಮ್ಯಾಂಚೆಸ್ಟರ್ ಫುಟ್ಬಾಲ್ ತಂಡದ ವಿಶೇಷ ಜರ್ಸಿ ನೀಡಿ ಗೌರವಿಸಿದೆ. ವಿರಾಟ್ ಕೊಹ್ಲಿ ಅವರ ಜರ್ಸಿ ನಂ.18ನ್ನು ಆ ಜರ್ಸಿಯಲ್ಲೂ ನಮೂದಿಸಿರುವುದು ವಿಶೇಷ.

ಪಂದ್ಯದ ನಂತರ ಮಾತನಾಡಿದ ಕಿಂಗ್ ಕೊಹ್ಲಿ, ‘’ನಾವು ಕ್ರೀಡಾಂಗಣಕ್ಕೆ 5 ನಿಮಿಷ ತಡವಾಗಿ ಬಂದೆವು. ಆಗಲೇ ಮ್ಯಾಂಚೆಸ್ಟರ್ ಸಿಟಿ ತಂಡ ಎಂದು ಗೋಲು ಬಾರಿಸಿತ್ತು. ಪಂದ್ಯವನ್ನು ವೀಕ್ಷಿಸಿದ್ದು ಅದ್ಭುತ ಅನುಭವ ಕೊಟ್ಟಿದೆ’’ ಎಂದಿದ್ದಾರೆ.

ಬುಧವಾರ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ WTC ಫೈನಲ್ ಪಂದ್ಯಕ್ಕಾಗಿ ಭಾರತ ತಂಡ ಕಠಿಣ ಅಭ್ಯಾಸ ನಡೆಸಿದೆ. ಟೀಮ್ ಇಂಡಿಯಾ ಆಟಗಾರರು ಮೇ 23ರಂದೇ ಲಂಡನ್’ಗೆ ಪ್ರಯಾಣ ಬೆಳೆಸಿದ್ದರು. ಕಳೆದ 10 ದಿನಗಳಿಂದ ರೋಹಿತ್ ಶರ್ಮಾ ಬಳಗ ದಿ ಓವಲ್ ಮೈದಾನದಲ್ಲಿ ಕಠಿಣ ಅಭ್ಯಾಸ ನಡೆಸಿದ್ದು, ಈ ಬಾರಿ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಳ್ಳುವ ವಿಶ್ವಾಸದಲ್ಲಿದೆ. 2021ರಲ್ಲಿ ಇಂಗ್ಲೆಂಡ್’ನ ಸೌಥಾಂಪ್ಟನ್ ಮೈದಾನದಲ್ಲಿ ನಡೆದಿದ್ದ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಾರಥ್ಯದ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. ಈ ಬಾರಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಫೈನಲ್ ತಲುಪಿದ್ದು, ಫೈನಲ್’ನಲ್ಲಿ ಕಾಂಗರೂಗಳ ಸವಾಲು ಎದುರಾಗಿದೆ.

WTC ಫೈನಲ್ ಪಂದ್ಯ ಬುಧವಾರ ಮಧ್ಯಾಹ್ನ 3 ಗಂಟೆಗೆ (ಭಾರತೀಯ ಕಾಲಮಾನ) ಆರಂಭವಾಗಲಿದೆ. ಆಲ್ರೌಂಡರ್ ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಇದೇ ಮೊದಲ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್’ನಲ್ಲಿ ಕಾಣಿಸಿಕೊಂಡಿದೆ.

ಇದನ್ನೂ ಓದಿ : ICC World test championship final: ಫೋಟೋ ಶೂಟ್’ನಲ್ಲಿ ಮಿಂಚಿದ ಟೀಮ್ ಇಂಡಿಯಾ ಆಟಗಾರರು

WTC 2023 ಫೈನಲ್ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI:

  • ರೋಹಿತ್ ಶರ್ಮಾ (ನಾಯಕ)
  • ಶುಭಮನ್ ಗಿಲ್
  • ಚೇತೇಶ್ವರ್ ಪೂಜಾರ
  • ವಿರಾಟ್ ಕೊಹ್ಲಿ
  • ಅಜಿಂಕ್ಯ ರಹಾನೆ
  • ರವೀಂದ್ರ ಜಡೇಜ
  • ಕೆ.ಎಸ್ ಭರತ್ (ವಿಕೆಟ್ ಕೀಪರ್)
  • ರವಿಚಂದ್ರನ್ ಅಶ್ವಿನ್
  • ಮೊಹಮ್ಮದ್ ಶಮಿ
  • ಮೊಹಮ್ಮದ್ ಸಿರಾಜ್
  • ಉಮೇಶ್ ಯಾದವ್

Special gift for King Kohli in London: Manchester City Football Club gave a special gift to Virat Kohli’s couple.

Comments are closed.