ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ (Chiranjeevi Sarja Death Anniversary) ನಮ್ಮನ್ನೆಲ್ಲ ಅಗಲಿ ಇಂದಿಗೆ ಮೂರು ವರ್ಷ ಕಳೆದಿದೆ. ನಟ ಚಿರಂಜೀವಿ ಸರ್ಜಾ ಸಡನ್ ಆಗಿ ಹೃದಯಘಾತದಿಂದ ನಮ್ಮನ್ನೆಲ್ಲ ಅಗಲಿದ್ದು, ಇಂದಿಗೂ ಅವರ ಸಾವಿನ ನೋವು ಯಾರಲ್ಲಿಯೂ ಮಾಸಿಲ್ಲ. ನಟ ಧ್ರುವ ಸರ್ಜಾ ಪುಣ್ಯಸ್ಮರಣೆಯಂದು ಅಣ್ಣನೊಂದಿಗಿನ ಸವಿನೆನಪುಗಳನ್ನು ಸಾಲುಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದಾರೆ.
ನಟ ಧ್ರುವ ಸರ್ಜಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ, “ನೀವು ಈ ಜಗತ್ತಿನಲ್ಲಿ ಅತ್ಯುತ್ತಮ ಸಹೋದರ. ಯಾವಾಗಲೂ ಮತ್ತು ಯಾವಾಗಲೂ ನನ್ನೊಂದಿಗೆ ನೀನು ಇರುತ್ತಿಯಾ. ಒಬ್ಬ ಸಹೋದರ ಹೃದಯಕ್ಕೆ ಉಡುಗೊರೆ, ಆತ್ಮಕ್ಕೆ ಸ್ನೇಹಿತ” ಎಂದು ಬರೆದುಕೊಂಡಿದ್ದಾರೆ. ಇವರಿಬ್ಬರ ಸಹೋದರರ ಪ್ರೀತಿಯೂ ಹಾಗೆ ಇದ್ದಿತ್ತು. ಯಾರ ದೃಷ್ಟಿ ತಾಕಿತು ಎನ್ನುವ ಹಾಗೆ ಅಣ್ಣ ತಮ್ಮ ಖುಷಿ ಖುಷಿಯಾಗಿ ಸಮಯವನ್ನು ಕಳೆಯುತ್ತಿರುವಾಗ, ಅಣ್ಣ ಚಿರಂಜೀವಿ ಅಗಲಿಕೆ ನೋವು ಸಹಿಸಲಾರದಷ್ಟು ಎನ್ನುವಂತೆ ಆಗಿತ್ತು.


ನಟ ಚಿರಂಜೀವಿ ಆಗ ತಾನೇ ಹೊಸದಾಗಿ ತಾನು ಪ್ರೀತಿಸಿ ಮದುವೆಯಾಗಿ ಪತನಿ ಮೇಘನಾ ಜೊತೆ ಸಂಸಾರ ಪ್ರಾರಂಭಿಸುತ್ತಿದ್ದರು. ಇವರಿಬ್ಬರ ಪ್ರೀತಿಯ ಸಂಕೇತವಾಗಿ ರಾಯನ್ ಸರ್ಜಾ ಹುಟ್ಟುವ ಮೊದಲೇ ಚಿರು ಬಾರದಲೋಕಕ್ಕೆ ಪಯಣ ಬೆಳೆಸಿದ್ದಾರೆ. ನಟಿ ಮೇಘನಾ ಇತ್ತ ಗಂಡನನ್ನು ಕಳೆದುಕೊಂಡ ದುಃಖವನ್ನು ನುಂಗಿಕೊಂಡು ಪತಿಯ ಹೋಲಿಕೆಯನ್ನೇ ಹೊತ್ತು ತಂದ ಮಗನಿಗೆ ಜನ್ಮ ನೀಡಿದ್ದಾರೆ. ನಂತರ ದಿನಗಳಲ್ಲಿ ನಟಿ ಮೇಘನಾ ಸರ್ಜಾ ಅವರು ಮಗನ ಲಾಲನೆ ಪಾಲನೆಯೊಂದಿಗೆ ಪತಿ ಚಿರು ಸಿಹಿ ನೆನಪಿನೊಂದಿಗೆ ಸಮಯವನ್ನು ಕಳೆಯುತ್ತಿದ್ದಾರೆ.
ಬದುಕಿನಲ್ಲಿ ಯಾವುದು ಶಾಶ್ವತವಲ್ಲ. ಖುಷಿಯಾಗಲಿ, ದುಃಖವಾಗಲಿ. ಅದನ್ನು ದಾಟಿ ಮುನ್ನಡೆಯಲೇ ಬೇಕು. ಈ ಮಾತಿಗೆ ಸಾಕ್ಷಿ ಎಂಬಂತೆ ನಟಿ ಮೇಘನಾ ರಾಜ್ ಕೂಡ ತಮ್ಮ ಬದುಕಿನ ಕಹಿ ದಿನಗಳನ್ನು ಕಳೆದು ಈಗ ತಮ್ಮ ಮುದ್ದಾದ ಮಗುವಿಗೆ ತಂದೆ ಹಾಗೂ ತಾಯಿ ಎರಡೂ ಸ್ಥಾನದಲ್ಲಿ ನಿಂತು ಪೊರೆಯುತ್ತಿದ್ದಾರೆ. ಮೊನ್ನೆ ಮೊನ್ನೆ ತಮ್ಮ ಪ್ರೆಂಡ್ಸ್ ಗ್ಯಾಂಗ್ ಜೊತೆ ಮಕ್ಕಳ ಸೈನ್ಯ ಒಗ್ಗೂಡಿಸಿಕೊಂಡು ಟ್ರಿಪ್ ಮಾಡಿ ಬಂದ ಮೇಘನಾ ರಾಜ್ ಈಗ ಮಗನ ಸ್ಕೂಲ್ ಮೊದಲ ದಿನದ ಪೋಟೋ ಹಂಚಿಕೊಂಡು ಪೋಷಕರ ಖುಷಿ ಹಾಗೂ ದುಗುಡದ ಕ್ಷಣ ಎಂಬ ಪೋಸ್ಟ್ ಶೇರ್ ಮಾಡಿದ್ದಾರೆ.
ಇದು ಶಿಕ್ಷಣ, ಜ್ಞಾನ ಹಾಗೂ ಬದುಕಿನ ಪಾಠಗಳನ್ನು ಕಲಿಯುವ ನಿಟ್ಟಿನಲ್ಲಿ ರಾಯನ್ ಮೊದಲ ಹೆಜ್ಜೆ ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ. ಅಷ್ಟೇ ಅಲ್ಲ ನನ್ನ ಮಗನ ಈ ಹೆಜ್ಜೆಗೆ ನಿಮ್ಮೆಲ್ಲರ ಹರಕೆ ಹಾಗೂ ಆಶೀರ್ವಾದವಿರಲಿ ಎಂದು ಮನವಿ ಮಾಡಿದ್ದಾರೆ. ಮೇಘನಾ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡ ಈ ಪೋಸ್ಟ್ ಗೆ ಒಂದು ಗಂಟೆಯಲ್ಲೇ ಸಾವಿರಾರು ಲೈಕ್ಸ್ ಹರಿದು ಬಂದಿದ್ದು, ಚಿತ್ರರಂಗದ ಮೇಘನಾ ಸ್ನೇಹಿತರು, ಬಂಧುಗಳು ಹಾಗೂ ಅಭಿಮಾನಿಗಳು ಶುಭಹಾರೈಸಿದ್ದಾರೆ. ಇನ್ನು ಮೇಘನಾ ತಮ್ಮ ಮಗನನ್ನು ಸ್ಕೂಲ್ ಗೆ ಕರೆದೊಯ್ಯುವ ಮುನ್ನ ಚಿರು ಪೋಟೋದ ಎದುರು ನಿಂತು ಪೋಸ್ ಕೊಟ್ಟಿದ್ದು, ಈ ಪೋಟೋ ನೋಡಿದ ಅಭಿಮಾನಿಗಳು ಕಣ್ಣೀರಾಗಿದ್ದಾರೆ.
ಇದನ್ನೂ ಓದಿ : Aadipurush Movie : ಇಂದು ತಿರುಪತಿಯಲ್ಲಿ ನಡೆಯಲಿದೆ ಆದಿಪುರುಷ ಅದ್ದೂರಿ ಪ್ರೀ ರಿಲೀಸ್ ಇವೆಂಟ್
ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ನಟಿ ಮೇಘನಾ ಸರ್ಜಾ ಮಹಿಳಾ ಪ್ರಧಾನ ನಿಮಾದ ಮೂಲಕ ವಿಭಿನ್ನ ಕಥೆಯನ್ನು ತೆರೆಯ ಮೇಲೆ ಹೇಳಲು ಸಜ್ಜಾಗಿದ್ದಾರೆ. ತತ್ಸಮ ತದ್ಭವ ಸಿನಿಮಾಕ್ಕೆ ವಿಶಾಲ್ ಅಥ್ರೇಯಾ ಆಕ್ಷನ್ ಕಟ್ ಹೇಳಲಿದ್ದಾರೆ. ಪನ್ನಗ ಭರಣ ಈ ಸಿನಿಮಾದ ನಿರ್ಮಾಣ ಹೊಣೆಯನ್ನು ಹೊತ್ತಿದ್ದಾರೆ. ಈ ಸಿನಿಮಾವು ಶೋಷಣೆಗೆ ಒಳಗಾದ ಯುವತಿಯ ಕಥೆ ಹಂದರವನ್ನು ಒಳಗೊಂಡಿದೆ. ಮೇಘನಾ ರಾಜ್ ಜೊತೆ ಇದೀಗ ಕನ್ನಡದ ಹಿರಿಯ ನಟಿ ಶ್ರುತಿ ಕೃಷ್ಣ, ಗಿರಿಜಾ ಲೋಕೇಶ್, ನಾಗಾಭರಣ ಅವರು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಶ್ರುತಿ ಸುಮನಳಾಗಿ ಕಾಣಿಸಿಕೊಳ್ತಿದ್ದಾರೆ.
Chiranjeevi Sarja Death Anniversary : Chiranjeevi Sarja’s Third Year Commemoration : Dhruva Sarja Shares Memories With His Brother