MP GS Basavaraju retirement : ತುಮಕೂರು ಸಂಸದ ಜಿಎಸ್ ಬಸವರಾಜ್‌ ನಿವೃತ್ತಿ, ಲೋಕಸಭೆಗೆ ಸ್ಪರ್ಧಿಸ್ತಾರಾ ವಿ.ಸೋಮಣ್ಣ

ತುಮಕೂರು : Tumkur MP GS Basavaraju retirement: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯದಲ್ಲಿ ಮತ್ತೋರ್ವ ಬಿಜೆಪಿ ಸಂಸದ ರಾಜಕೀಯ ನಿವೃತ್ತಿ ಘೋಷಿಸಲು ಮುಂದಾಗಿದ್ದಾರೆ. ತುಮಕೂರು ಸಂಸದ ಜಿ.ಎಸ್.ಬಸವರಾಜ್‌ ಅವರು ಚುನಾವಣಾ ನಿವೃತ್ತಿಯ ಕುರಿತು ಮಾತನಾಡಿರುವ ಆಡಿಯೋ ಇದೀಗ ವೈರಲ್‌ ಆಗಿದೆ. ಇದರ ಬೆನ್ನಲ್ಲೇ ಮಾಜಿ ಸಚಿವ ವಿ.ಸೋಮಣ್ಣ ಚುನಾವಣೆಗೆ ಸ್ಪರ್ಧೆ ಮಾಡ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ಸೋಲಿನ ರುಚಿ ತೋರಿಸಿದ್ದ ತುಮಕೂರು ಸಂಸದ ಜಿ.ಎಸ್.ಬಸವರಾಜ್‌ ಇದೀಗ ರಾಜಕೀಯ ನಿವೃತ್ತಿಯ ಮಾತನ್ನಾಡಿದ್ದಾರೆ. ಲಿಂಗಾಯಿತ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ತನಗೆ ವಯಸ್ಸಾಗಿದೆ. ಈಗಾಗಲೇ 86 ವರ್ಷ ವಯಸ್ಸಾಗಿದ್ದು, ಜೀವನ ಪರ್ಯಂತ ನಾನೇ ಸಂಸದನಾಗಿ ಇರುವುದು ಬೇಡಾ. ಹೀಗಾಗಿ ಮತ್ತೋರ್ವರಿಗೆ ಅವಕಾಶ ನೀಡಿ. ಚುನಾವಣೆಯ ಸಂದರ್ಭದಲ್ಲಿ ಯಾರೇ ಅಭ್ಯರ್ಥಿಯಾದ್ರೂ ಕೂಡ ಕಾರ್ಯಕರ್ತರು, ಸಮಾಜ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ನಮ್ಮಲ್ಲಿ ಇಬ್ಬಗೆಯ ನೀತಿ ಇರಬಾರದು. ನಾನು ಈ ಹಿಂದೆ ದೆಹಲಿಗೆ ತೆರಳಿದ್ದ ವೇಳೆಯಲ್ಲಿಯೇ ಮತ್ತೋರ್ವರಿಗೆ ಅವಕಾಶ ಮಾಡಿಕೊಡಿ ಎಂದು ತಿಳಿಸಿದ್ದೇನೆ ಎಂದು ಸಂಸದ ಜಿಎಸ್‌ ಬಸವರಾಜ್‌ ಅವರು ಮಾತನಾಡಿದ್ದಾರೆ ಎನ್ನುವ ಆಡಿಯೋ ವೈರಲ್‌ ಆಗಿದೆ.

ಇನ್ನು ಸಂಸದ ಜಿಎಸ್‌ ಬಸವರಾಜ್‌ ಅವರು ತಮ್ಮ ಮಾತಿನಲ್ಲಿ ಪರೋಕ್ಷವಾಗಿ ವಿ.ಸೋಮಣ್ಣ ಸ್ಪರ್ಧೆಗೆ ಬಗ್ಗೆ ಸುಳಿವು ನೀಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಹಾಗೂ ಚಾಮರಾಜನಗರದಲ್ಲಿ ಸ್ಪರ್ಧೆ ಮಾಡಿ ಎರಡೂ ಕ್ಷೇತ್ರಗಳಲ್ಲಿ ಸೋಲು ಕಂಡಿರುವ ಸೋಮಣ್ಣ ಇದೀಗ ಲೋಕಸಭಾ ಕ್ಷೇತ್ರದ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇನ್ನೊಂದೆಡೆಯಲ್ಲಿ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಂಸದರಾಗಿದ್ದ ಮುದ್ದಹನುಮೇ ಗೌಡ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಬಿಜೆಪಿ ಸೇರ್ಪಡೆಯಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಆಕಾಂಕ್ಷಿಯಾಗಿದ್ದರು. ಆದ್ರೆ ಇದೀಗ ವಿ.ಸೋಮಣ್ಣ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವುದು ಮುದ್ದೇ ಹನುಮೇಗೌಡರಿಗೆ ಶಾಕ್‌ ಕೊಟ್ಟಿದೆ. ಜೊತೆಗೆ ಜಿಎಸ್‌ ಬಸವರಾಜ್‌ ಅವರು ಸೋಮಣ್ಣ ಅವರಿಗೆ ಅವಕಾಶ ಕಲ್ಪಿಸುವ ಸಲುವಾಗಿಯೇ ಅವರು ರಾಜಕೀಯ ನಿವೃತ್ತಿಯ ಮಾತನ್ನು ಆಡಿದ್ದಾರೆಯೇ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ.

MP GS Basavaraju : ಜಿಎಸ್‌ ಬಸವರಾಜ್‌ ರಾಜಕೀಯ ಜೀವನ :

ಗಂಗಸಂದ್ರ ಸಿದ್ದಪ್ಪ ಬಸವರಾಜ್‌ ಅವರು ಕಾಂಗ್ರೆಸ್‌ ಪಕ್ಷದಿಂದ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದರು. ನಂತರದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಅಲ್ಲದೇ ತುಮಕೂರು ಲೋಕಸಭಾ ಚುನಾವಣೆಯಿಂದ 1984 ರಲ್ಲಿ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದ ಬಿಜೆಪಿ ಪಕ್ಷದ ಅಭ್ಯರ್ಥಿ ಜಿಎಸ್‌ ಬಸವರಾಜ್‌ ಅವರು ಗೆಲುವು ಕಂಡಿದ್ದರು. ಅಲ್ಲದೇ 1989 ರಲ್ಲಿ ಮರು ಆಯ್ಕೆಯಾಗಿದ್ದರು. ಆದರೆ ನಂತರದ ಚುನಾವಣೆಗಳಲ್ಲಿ ಸೋಲು ಕಂಡಿದ್ದರೂ ಕೂಡ 1999 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು. ಮರು ಚುನಾವಣೆಯಲ್ಲಿ ಸೋಲು ಕಂಡಿದ್ದ ಬಸವರಾಜ್‌ 2009 ರಲ್ಲಿ ಮತ್ತೆ ಗೆದ್ದು ಸಂಸದರಾಗಿದ್ದರು. 2014 ರ ಚುನಾವಣೆಯಲ್ಲಿ ಮುದ್ದಹನುಮೇಗೌಡ ಅವರ ವಿರುದ್ದ ಸೋಲು ಕಂಡಿದ್ದ ಬಸವರಾಜ್‌ ಅವರು 2009 ರ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ವಿರುದ್ದ ಗೆದ್ದು ಸಂಸದರಾಗಿ ಆಯ್ಕೆಯಾಗಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಜಿಎಸ್‌ ಬಸವರಾಜ್‌ ಅವರು 5,96,127 ಮತಗಳನ್ನು ಪಡೆದುಕೊಂಡಿದ್ರೆ, ಜೆಡಿಎಸ್‌ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಎಚ್.ಡಿ.ದೇವೇಗೌಡ ಅವರು 5.86, 788 ಮತಗಳನ್ನು ಪಡೆಯುವ ಮೂಲಕ ಸೋಲನ್ನು ಕಂಡಿದ್ದರು.

ಇದನ್ನೂ ಓದಿ : Karnataka Grilahakshmi Yojana : ಕರ್ನಾಟಕ ಗೃಹಲಕ್ಷ್ಮಿ ಯೋಜನೆ : ಈ ಯೋಜನೆಗೆ ಬ್ಯಾಂಕ್‌ ಖಾತೆಗೆ ಆಧಾರ್ ಕಾರ್ಡ್ ಲಿಂಕ್‌ ಕಡ್ಡಾಯ

ಇದನ್ನೂ ಓದಿ : Heat wave Alert Karnataka : ನೆತ್ತಿ ಸುಡುವ ಬಿಸಿಲು, ಕುಡಿಯೋಕೆ ನೀರಿಲ್ಲ : ಶಾಲೆಗಳಲ್ಲಿ ಮಕ್ಕಳ ಗೋಳು ಕೇಳೋರ್ಯಾರು ?

Tumkur MP GS Basavaraju has announced his retirement Will V Somanna contest for Lok Sabha Election 2024

Comments are closed.