ನವದೆಹಲಿ : ಕೇಂದ್ರ ಸರಕಾರ ಮಂಡಿಸಿರೋ ಬಜೆಟ್ ನಲ್ಲಿ ತೆರಿಗೆದಾರರಿಗೆ ನಮೋ ಸರಕಾರ ಬಂಪರ್ ಆಫರ್ ನೀಡಿದೆ. ಅದರಲ್ಲೂ ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಬಿಗ್ ರಿಲೀಫ್ ನೀಡಿದೆ. 5 ಲಕ್ಷದವರೆಗೆ ಆದಾಯ ಹೊಂದಿರುವವರು ಇನ್ಮುಂದೆ ತೆರಿಗೆಯನ್ನು ಪಾವತಿ ಮಾಡಬೇಕಾಗಿಲ್ಲ. ಮಾತ್ರವಲ್ಲ 5 ಲಕ್ಷದಿಂದ 7.50 ಲಕ್ಷದ ವರೆಗೆ ಶೇ.10ರಷ್ಟು ತೆರಿಗೆ, 7.50 ಲಕ್ಷದಿಂದ 10 ಲಕ್ಷದವರೆಗೆ ಶೇಕಡಾ 15, 10 ಲಕ್ಷದಿಂದ 12.50 ಲಕ್ಷದ ವರೆಗೆ ಶೇಕಡಾ 20, 12.50 ಲಕ್ಷದಿಂದ 15 ಲಕ್ಷದ ವರೆಗೆ ಶೇಕಡಾ 25 ಹಾಗೂ 15 ಲಕ್ಷದಿಂದ ಹೆಚ್ಚು ಆದಾಯ ಹೊಂದಿರುವವರು ಶೇ.30 ರಷ್ಟು ತೆರಿಗೆಯನ್ನು ಪಾವತಿ ಮಾಡಬೇಕಾಗಿದೆ.
ಇದುವರೆಗೆ 2.50 ಲಕ್ಷ ಆದಾಯದವರೆಗೆ ತೆರಿಗೆ ಪಾವತಿ ಮಾಡಬೇಕಾಗಿರಲಿಲ್ಲ. ಆದರೆ 2.5 ಲಕ್ಷದಿಂದ 5 ಲಕ್ಷ ಆದಾಯ ಹೊಂದಿರುವವರು ಶೇಕಡಾ 5 ರಷ್ಟು ತೆರಿಗೆ ಪಾವತಿಸಬೇಕಾಗಿತ್ತು. 5ಲಕ್ಷದಿಂದ 7.5 ಲಕ್ಷದ ವರೆಗೆ ಶೇ.20 ಹಾಗೂ 10 ಲಕ್ಷದಿಂದ 12.5 ಲಕ್ಷ ಆದಾಯವನ್ನು ಹೊಂದಿರುವವರು ಶೇ.30 ರಷ್ಟು ತೆರಿಗೆಯನ್ನು ಪಾವತಿಸಬೇಕಾಗಿತ್ತು. ಆದ್ರೀಗ ನಿರ್ಮಲಾ ಸೀತಾರಾಮನ್ ಮಂಡಿಸಿರೋ ಬಜೆಟ್ ನಲ್ಲಿ ತೆರಿಗೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಕೇವಲ ವೈಯಕ್ತಿಕ ತೆರಿಗೆ ಮಾತ್ರವಲ್ಲದೇ ಕಾರ್ಪೋರೇಟ್ ತೆರಿಗೆ ವಿಭಾಗದಲ್ಲಿಯೂ ತೆರಿಗೆದಾರರಿಗೆ ಅನುಕೂಲಗಳನ್ನು ಕಲ್ಪಿಸಿದೆ. ಶೇಕಡಾ 22ರಷ್ಟಿದ್ದ ಕಾರ್ಪೋರೇಟ್ ತೆರಿಗೆಯನ್ನು ಮೋದಿ ಸರಕಾರ ಶೇಕಡಾ 15ಕ್ಕೆ ಇಳಿಕೆ ಮಾಡಿರುವುದರಿಂದಾಗಿ ಹೊಸ ಕಂಪೆನಿಗಳನ್ನು ಆರಂಭಿಸುವವರಿಗೆ ಹೆಚ್ಚು ಅನುಕೂಲವಾಗಲಿದೆ. 2021ರಲ್ಲಿ ಶೇ.10 ರಷ್ಟು ಜಿಡಿಪಿ ಬೆಳವಣಿಗೆಯ ಗುರಿಯನ್ನು ಹೊಂದಿದ್ದು, 2020-21ರಲ್ಲಿ ಶೇ.3.5 ರಷ್ಟು ವಿತ್ತೀಯ ಕೊರತೆಯನ್ನು ಅಂದಾಜು ಮಾಡಲಾಗಿದೆ.
ತೆರಿಗೆದಾರರಿಗೆ ಬಂಪರ್ ಆಫ್ ಕೊಟ್ಟ ಮೋದಿ, ಇನ್ಮುಂದೆ 5 ಲಕ್ಷದವರೆಗೆ ಕಟ್ಟಬೇಕಿಲ್ಲ ಟ್ಯಾಕ್ಸ್
- Advertisement -