ಕೇಂದ್ರ ಬಜೆಟ್ 2020 : ಕೃಷಿಕರಿಗೆ ಬಂಪರ್ ಯೋಜನೆ ಘೋಷಣೆ

0

ನವದೆಹಲಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರೋ ಬಜೆಟ್ ನಲ್ಲಿ ಕೃಷಿಕರಿಗೆ ಬಂಪರ್ ಯೋಜನೆಯನ್ನು ಘೋಷಣೆ ಮಾಡಿದೆ. ಬರೋಬ್ಬರಿ 15 ಲಕ್ಷ ಕೋಟಿ ರೂಪಾಯಿ ಕೃಷಿ ಸಾಲ ವಿತರಣೆ ಮುಂದಾಗಿದೆ. ಮಾತ್ರವಲ್ಲದೇ ಕಿಸಾನ್ ರೈಲು, ಕೃಷಿ ಉಡಾನ್ ಯೋಜನೆಯನ್ನು ಘೋಷಣೆ ಮಾಡಿದೆ.
ಕೇಂದ್ರ ಸರಕಾರ ಕಿಸಾನ್ ರೈಲು ಯೋಜನೆಯನ್ನು ಘೋಷಣೆ ಮಾಡಿದ್ದು, ಬೇಗ ಹಾಳಾಗುವ ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಕೋಲ್ಡ್ ಸಪ್ಲೈ ಚೇನ್ ಆಗಿ ಬಳಕೆ ಮಾಡಲು ಭಾರತೀಯ ರೈಲ್ವೆ ಪಿಪಿಪಿ (ಪಬ್ಲಿಕ್​-ಪ್ರೈವೇಟ್​ ಪಾರ್ಟ್​ನರ್​ಷಿಪ್​) ಮಾದರಿಯಲ್ಲಿ ಕಿಸಾನ್​ ರೈಲು ಯೋಜನೆಯನ್ನು ಜಾರಿಗೊಳಿಸಲಾಗಿದೆ. ಕೃಷಿ ಉತ್ಪನ್ನವನ್ನು ರಾಷ್ಟ್ರಮಟ್ಟ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ಸಾಗಿಸಲು ಕೃಷಿ ಉಡಾನ್ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇನ್ನು ಕ್ಲಸ್ಟರ್​ ಆಧಾರದಲ್ಲಿ ಒಂದು ಜಿಲ್ಲೆಯಲ್ಲಿ ಒಂದು ತೋಟಗಾರಿಕೆ ಬೆಳೆ ಎಂಬ ಮಾದರಿಯ ಯೋಜನೆಯನ್ನು ಸರ್ಕಾರ ಉತ್ತೇಜಿಸಲಿದೆ. ಈ ರೀತಿಯ ಪ್ರಯೋಗದಿಂದ ಆಹಾರ ಧಾನ್ಯಗಳ ಉತ್ಪಾದನೆ 311 ಎಂಟಿ ದಾಟಿದೆ ಎಂದಿದ್ದಾರೆ.ಅದೇ ರೀತಿ, ಸಮುದ್ರ ಮೀನುಗಾರಿಕೆ ಸಂರಕ್ಷಣೆ, ಕೃಷಿ ಉತ್ಪನ್ನ ಉಗ್ರಾಣ ಸೌಕರ್ಯ ವೃದ್ಧಿಗೆ ಸ್ವ ಸಹಾಯ ಸಂಘಗಳಿಗೆ ಹೆಚ್ಚು ಅನುಕೂಲ ಕಲ್ಪಿಸುವ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ

Leave A Reply

Your email address will not be published.