ನಟ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಸಿನಿಮಾ ಭರ್ಜರಿ ಯಶಸ್ಸನ್ನು ಕಂಡಿದೆ. ಪೊಗರು ಸಿನಿಮಾದಲ್ಲಿ ಕಾಣಿಸಿಕೊಂಡ ವಿಶ್ವ ಪ್ರಖ್ಯಾತಿ ಪಡೆದಿದ್ದ (Jo Lindner died) ಜೋ ಲಿಂಡ್ನರ್ (30 ವರ್ಷ) ಅವರು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಫಿಟ್ನೆಸ್ ಮತ್ತು ಬಾಡಿ ಬಿಲ್ಡಿಂಗ್‌ನಲ್ಲಿ ಹೆಸರುವಾಸಿಯಾಗಿದ್ದು, ಗಟ್ಟಿಮುಟ್ಟು ದೇಹವನ್ನು ಹೊಂದಿರುವ ಜೋ ಲಿಂಡ್ನರ್ ಹಠಾತ್ ನಿಧನ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ
ಕೆಲವು ದಿನಗಳ ಹಿಂದೆಯಷ್ಟೇ ಜೋ ಲಿಂಡ್ನರ್‌ಗೆ ಕುತ್ತಿಗೆಯಲ್ಲಿ ನೋವು ಕಾಣಿಸಿಕೊಂಡಿತ್ತು. ಇವರಿಗೆ ಸಾವಿಗೆ ರಕ್ತನಾಳ ಸಮಸ್ಯೆಯೇ ಕಾರಣ ಎಂದು ಹೇಳಲಾಗುತ್ತಿದೆ. ಸದ್ಯ ಜೋ ಲಿಂಡ್ನರ್ ಸಾವಿನ ಸುದ್ದಿಯನ್ನು ಅವರ ಪ್ರಿಯತಮೆ ಖಚಿತಪಡಿಸಿದ್ದಾರೆ.
ಇದನ್ನೂ ಓದಿ : Harshika poonacha Bhuvan marriage : ಖ್ಯಾತ ನಟಿ ಹರ್ಷಿಕಾ ಪೂಣಚ್ಚ ಭುವನ್ ಮದುವೆ ಡೇಟ್ ಫಿಕ್ಸ್
ಇದನ್ನೂ ಓದಿ : Ram Charan and Upasana : ಮಗಳಿಗೆ ಕ್ಲಿನ್ ಕಾರಾ ಹೆಸರಿಟ್ಟ ನಟ ರಾಮ್ ಚರಣ್ – ಉಪಾಸನಾ ಕೊನಿಡೆಲಾ
ನಟ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದಲ್ಲಿ ಜೋ ಲಿಂಡ್ನರ್ ಅಭಿನಯಿಸಿದ್ದಾರೆ. ಈ ಸಿನಿಮಾದ ಕ್ಲೈಮಾಕ್ಸ್‌ನಲ್ಲಿ ನಟ ಧ್ರುವ ಸರ್ಜಾ ಎದರು ಸಖತ್ ಆಗಿ ಫೈಟ್ ಮಾಡಿದ್ದಾರೆ. ಆದರೆ ಇದೀಗ ಜೋ ಲಿಂಡ್ನರ್ ಅಭಿಮಾನಿಗಳಿಗೆ ನೆನಪು ಮಾತ್ರ. ಜೋ ಲಿಂಡ್ನರ್ ಬಾಡಿ ಬಿಲ್ಡಿಂಗ್‌ನಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಜನರು ಫಾಲೋ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಸದಾ ಸಾಮಾಜಿಕ ಜಾಲತಾಣದಲ್ಲಿ ಫಿಟ್ನೆಸ್ ಬಗ್ಗೆ ಅನೇಕ ಟಿಪ್ಸ್‌ನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ಜೋ ಲಿಂಡ್ನರ್ ಅನೇಕ ಯುವ ಪೀಳಿಗೆಗೆ ಮಾದರಿಯಾಗಿದ್ದು, ಇವರ ಹಠಾತ್ ಸಾವಿನ ಸುದ್ದಿ ಅಭಿಮಾನಿಗಳಿಗೆ ಆಘಾತ ತಂದಿದೆ.
Jo Lindner died : Pogaru movie fame body builder Jo Lindner passed away