New York : ಮನೆಯ ಮುಂದಿದ್ದ ಮರಗಳನ್ನು ಕಡಿದವನಿಗೆ 12 ಕೋಟಿ ದಂಡ ವಿಧಿಸಿದ ನ್ಯಾಯಾಲಯ

ನವದೆಹಲಿ : ಆತ ತನ್ನ ಮನೆಯ ಸೌಂದರ್ಯವನ್ನು ಹೆಚ್ಚಿಸಲು ಮನೆಯ ಮುಂಭಾಗದಲ್ಲಿದ್ದ (New York) ಸುಮಾರು 32 ಮರಗಳನ್ನು ಕಡಿದಿದ್ದಾನೆ. ಈ ಕುರಿತು ನೆರೆ ಹೊರೆಯವರು ದೂರು ನೀಡಿದ್ದು, ಇದೀಗ ಮರ ಕಡಿದ ವ್ಯಕ್ತಿ ಬರೋಬ್ಬರಿ 1.5 ಮಿಲಿಯನ್ ಡಾಲರ್ (ರೂ. 12,31,44,375) ಮೊತ್ತದ ದಂಡ ವಿಧಿಸಲಾಗಿದೆ. ಈ ಘಟನೆ ನಡೆದಿರೋದು ಅಮೇರಿಕಾದ ನ್ಯೂಜೆರ್ಸಿಯಲ್ಲಿ. ಈ ಕುರಿತು ನ್ಯಾಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಗ್ರಾಂಟ್ ಹೇಬರ್ ಹೇಬರ್‌ ಎನ್ನುವ ಭಾರತೀಯ ಮೂಲದ ವ್ಯಕ್ತಿಯೇ ಇದೀಗ ಆರೋಪಕ್ಕೆ ಗುರಿಯಾದವರು. ಸಮಿಹ್ ಶಿನ್ವೇ ಎಂಬರು ತಮ್ಮ ನೆರೆ ಮನೆಯಲ್ಲಿದ್ದ ವಾಸವಾಗಿದ್ದ ಗ್ರಾಂಟ್‌ ಹೇಬರ್‌ ಅವರು ನಾಲ್ಕು ಎಕರೆ ಜಾಗದಲ್ಲಿ ನೆಡಲಾಗಿದ್ದ ಓಕ್‌, ಮೇಪಲ್ಸ್‌ ಹಾಗೂ ಬರ್ಜ್‌ ಮಗಳನ್ನು ಕಾನೂನು ಬಾಹಿರವಾಗಿ ಕಡಿಯಲಾಗಿದೆ ಎಂದು ದೂರು ನೀಡಿದ್ದರು. 32 ಮರಗಳನ್ನು ಕಡಿದ ತಪ್ಪಿಗೆ ಬರೋಬ್ಬರ 1.5 ಮಿಲಿಯನ್ ಡಾಲರ್ (ರೂ. 12,31,44,375) ದಂಡ ವಿದಿಸಲಾಗಿದೆ.

ಮರಗಳನ್ನು ಬೆಳೆಯಲು ಸಾಕಷ್ಟು ಸಮಯ ಬೇಕಾಗುತ್ತದೆ. ನೆರೆಮನೆಯವರು ಮರಗಳನ್ನು ಕಡಿದಿರುವುದು ನನ್ನ ಹೃದಯಕ್ಕೆ ನೋವನ್ನು ಉಂಟು ಮಾಡಿದೆ. ಎಂದು ಶಿನ್ವೇ ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದ್ದಾರೆ. ಇನ್ನು ಗ್ರಾಂಟ್ ಹೇಬರ್‌ ಭಯೋತ್ಪಾದನಾ ನಿಗ್ರಹ ಕಂಪೆನಿಯ ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಆರಂಭಿಕವಾಗಿ USD 32,000 ದಂಡ ವಿಧಿಸಲಾಗಿದೆ. ಇದು ಅವರು ಕಾನೂನುಬಾಹಿರವಾಗಿ ಕಡಿದ ಪ್ರತಿ ಮರಕ್ಕೆ USD 1,000 (Rs 26,27,080 – Rs 82,096) ಸಮನಾಗಿರುತ್ತದೆ.

ನ್ಯೂಜೆರ್ಸಿಯ ಕಾನೂನಿನ ಪ್ರಕಾರ ಮರಗಳನ್ನು ಕಡಿಯುವುದು ಕಾನೂನು ಬಾಹಿರ. ಈ ವರ್ಷದ ಮಾರ್ಚ್‌ ತಿಂಗಳಿನಲ್ಲಿ ಶಿನ್ವೇ ತನ್ನ ಆಸ್ತಿಯಲ್ಲಿ ಮರಗಳನ್ನು ಕತ್ತರಿಸುತ್ತಿರುವ ಕೆಲವು ಕಾರ್ಮಿಕರನ್ನು ಹಿಡಿದಿದ್ದರು. ಇದು ನೆರೆ ಹೊರೆಯವರ ನಡುವೆ ಕಾನೂನು ವಿವಾದ ಆರಂಭವಾಗಿತ್ತು. ಮರ ಕಡಿಯುವವರು ಬೇಲಿಯನ್ನು ಹತ್ತಿ ತಮ್ಮ ಜಾಗದಲ್ಲಿದ್ದ ಮರಗಳನ್ನು ಕಡಿದಿದ್ದಾರೆ ಎಂದು ಶಿನ್ವೇ ಆರೋಪಿಸಿದ್ದರು. ನಂತರ ಪೊಲೀಸರು ಸ್ಥಳಕ್ಕೆ ಕರೆಯಿಸಿ ಮರ ಕಡಿಯುವುದನ್ನು ನಿಲಲಿಸಿದ್ದಾರೆ. ಮರಗಳ ನಗ್ಗೆ ನಿಜವಾದ ಕಾಳಜಿಯಿಂದ ದೂರು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : Manipur violence : ಮಣಿಪುರ ಹಿಂಸಾಚಾರ : ಇಂದು ಸಂಚಾರ ನಿರ್ಬಂಧ ಸಡಿಲಿಕೆ

ಇದನ್ನೂ ಓದಿ : Dog Bite Case : 16 ಗಂಟೆಗಳಲ್ಲಿ 14 ಮಂದಿಯನ್ನು ಕಚ್ಚಿದ ಬೀದಿ ನಾಯಿ

ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಹೇಬರ್ ಈಗ ಕನಿಷ್ಠ 32 ಅಕ್ರಮ ಮರ ತೆಗೆಯುವಿಕೆ ಮತ್ತು ಒಂದು ಅತಿಕ್ರಮಣ ಆರೋಪವನ್ನು ಎದುರಿಸುತ್ತಿದ್ದಾರೆ. ಹೆಚ್ಚುವರಿಯಾಗಿ, ಮರ ಕಡಿಯುವುದಕ್ಕಾಗಿ ಅವರು ನೇಮಿಸಿದ ಇಬ್ಬರು ಗುತ್ತಿಗೆದಾರರು USD 400,000 (Rs 3,28,38,500) ಹೆಚ್ಚುವರಿ ದಂಡವನ್ನು ಎದುರಿಸಬೇಕಾಗುತ್ತದೆ.

New York: The court fined 12 crores to the person who cut the trees in front of the house

Comments are closed.