ನವದೆಹಲಿ : ಟಿಕ್ ಟಾಕ್ ಸೇರಿದಂತೆ ಆ್ಯಪ್ ಗಳ ಮೂಲಕ ಭಾರತೀಯ ಬಳಕೆದಾರರ ಮಾಹಿತಿಯನ್ನು ಕದಿಯುತ್ತಿದ್ದ 59 ಚೀನಾ ಆ್ಯಪ್ ಗಳಿಗೆ ಕೇಂದ್ರ ಸರಕಾರ ನಿಷೇಧ ಹೇರಿದೆ.

ಟಿಕ್ ಟಾಕ್, ಝೂಮ್ ಸೇರಿದಂತೆ ಹಲವು ಆ್ಯಪ್ ಗಳು ಬಳಕೆದಾರರ ಮಾಹಿತಿಯನ್ನು ಕದಿಯುತ್ತಿವೆ. ಮಾತ್ರವಲ್ಲದೇ ಚೀನಾ ಸರಕಾರ ಇಂತಹ ಆ್ಯಪ್ ಗಳಿಗೆ ಹಣವನ್ನೂ ಹೂಡಿಕೆ ಮಾಡಿದೆ ಅನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆ ಕೇಂದ್ರ ಸರಕಾರಕ್ಕೆ ನೀಡಿತ್ತು. ಭಾರತದ ಮೇಲೆ ಸೈಬರ್ ದಾಳಿ ನಡೆಸಲು ಹೊಂಚು ಹಾಕಿದ್ದ ಚೀನಾಕ್ಕೆ ಮೋದಿ ಸರಕಾರ ಸರಿಯಾಗಿಯೇ ಪೆಟ್ಟುಕೊಟ್ಟಿದೆ. ಕೇಂದ್ರ ಸರಕಾರ ನಿಷೇಧಿಸಿರುವ ಆ್ಯಪ್ ಗಳ ಪಟ್ಟಿ ಇಲ್ಲಿದೆ.
