ನಿತ್ಯಭವಿಷ್ಯ : 30-06-2020

0

ಮೇಷರಾಶಿ
ನಿಮ್ಮ ಕ್ರಿಯಾಶೀಲತೆಯಿಂದ ಕಾರ್ಯಕಲಾಪಗಳನ್ನು ನಡೆಸಿಕೊಂಡು ಹೋಗಬಹುದಾಗಿದೆ. ವೃತ್ತಿರಂಗದಲ್ಲಿ ಚೇತರಿಕೆಯ ದಿನಗಳಾಗಿವೆ. ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಸ್ವಲ್ಪ ಪ್ರಯತ್ನ ಪಟ್ಟರೆ ಉತ್ತಮ ಫಲ, ಕುತಂತ್ರದಿಂದ ಹಣ ಸಂಪಾದನೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ನಿರ್ಧಾರ ಕೈಗೊಳ್ಳುವುದು ಉತ್ತಮ. ಮುನ್ನಡೆಗೆ ಸಾಧ್ಯವಿದೆ. ಕೃಷಿಕರಿಗೆ ಉತ್ಸಾಹ ತಂದೀತು.

ವೃಷಭರಾಶಿ
ಧರ್ಮಕಾರ್ಯಗಳಲ್ಲಿ ಅಭಿರುಚಿ ಕಂಡೀತು. ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಋಣ ಬಾಧೆ, ಸಾಧಾರಣ ಲಾಭ, ಪರಸ್ತ್ರೀಯಿಂದ ತೊಂದರೆ, ದೃಷ್ಠಿ ದೋಷದಿಂದ ಸಮಸ್ಯೆ. ದೈವಾನುಗ್ರಹದಿಂದ ಕಾರ್ಯಸಾಧನೆಯಾಗಿ ಕಿಂಚಿತ್‌ ಸಮಾಧಾನ ತಂದೀತು. ವಿವಿಧ ರೂಪದಲ್ಲಿ ಧನಾಗಮನವು ಕಂಡು ಬರುವುದು.

ಮಿಥುನರಾಶಿ
ಹಿತಶತ್ರುಗಳ ಉಪಟಳ ಕಾರ್ಯಕ್ಷೇತ್ರದಲ್ಲಿ ಕಂಡು ಬಂದೀತು. ಯತ್ನ ಕಾರ್ಯದಲ್ಲಿ ವಿಳಂಬ, ವ್ಯಾಸಂಗದಲ್ಲಿ ಹಿನ್ನಡೆ, ಅತಿಯಾದ ಕೋಪ, ಆರೋಗ್ಯದಲ್ಲಿ ಸಮಸ್ಯೆ. ಸಹೋದ್ಯೋಗಿಗಳ ಹೀನ ವ್ಯವಹಾರಗಳು ಅಸಮಾಧಾನ ತರಲಿದೆ.ಮುಖ್ಯವಾಗಿ ಆರೋಗ್ಯದಲ್ಲಿ ಹೆಚ್ಚಿನ ಜಾಗ್ರತೆ ಮಾಡುವುದು.

ಕಟಕರಾಶಿ
ಚಿನ್ನ ವ್ಯಾಪಾರಿಗಳಿಗೆ ಸ್ವಲ್ಪ ಮಟ್ಟಿನ ಪ್ರಗತಿ ಕಂಡು ಬಂದೀತು. ನೀವಾಡುವ ಮಾತಿನಿಂದ ಅನರ್ಥ, ಹಿತೈಷಿಗಳಿಂದ ಉತ್ತಮ ಸಲಹೆ, ಮಾನಸಿಕ ವ್ಯಥೆ, ನೆಮ್ಮದಿ ಇಲ್ಲದ ಜೀವನ. ಇಷ್ಟ ಮಿತ್ರರ ಪ್ರೀತಿ ಹಾಗೂ ವಿಶ್ವಾಸ ಮನಸ್ಸಿಗೆ ನೆಮ್ಮದಿ ತರಲಿದೆ.ಯೋಗ್ಯ ವಯಸ್ಕರು ಕಂಕಣಬಲದ ಯೋಗವನ್ನು ಹೊಂದಲಿದ್ದಾರೆ.

ಸಿಂಹರಾಶಿ
ಮನೆಯಲ್ಲಿ ಶುಭಮಂಗಲ ಕಾರ್ಯಗಳ ಚಿಂತನೆ ನಡೆಯಲಿದೆ. ಹೊಸ ಅವಕಾಶಗಳು ಪ್ರಾಪ್ತಿ, ಕಾರ್ಯ ಸಾಧನೆಗಾಗಿ ತಿರುಗಾಟ, ಮಾನಸಿಕ ನೆಮ್ಮದಿ, ಮನೆಯಲ್ಲಿ ಸಂತಸದ ವಾತಾವರಣ, ಭೂ ವ್ಯವಹಾರಗಳಲ್ಲಿ ಲಾಭ. ವ್ಯಾಪಾರಗಳಲ್ಲಿ ಹೊಸ ಹೂಡಿಕೆ ಲಾಭವನ್ನು ಹೆಚ್ಚಿಸಲಿದೆ.ಕೋರ್ಟುಕಚೇರಿಯ ಕಾರ್ಯಭಾಗದಲ್ಲಿ ನಿಮಗೆ ಯಶಸ್ಸು ತಂದೀತು.

ಕನ್ಯಾರಾಶಿ
ನಿಶ್ಚಿತ ಗುರಿಯತ್ತ ಸಾಗಲು ಹೆಚ್ಚಿನ ಪರಿಶ್ರಮ ಪಡಬೇಕಾದೀತು. ಸೇವಕ ವರ್ಗದವರಿಂದ ತೊಂದರೆ, ಚಂಚಲ ಮನಸ್ಸು, ಅಧಿಕ ಲಾಭ, ತಾತ್ಕಾಲಿಕ ಸಮಸ್ಯೆ ಬಗೆಹರಿಯುವುದು. ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ ಇದೆ.ಅವಿರತ ಚಟುವಟಿಕೆಗಳು ದೇಹಾರೋಗ್ಯವನ್ನು ಕೆಡಿಸಲಿವೆ.ಅತೀ ಉದ್ವೇಗ ಒಳ್ಳೆಯದಲ್ಲಾ.

ತುಲಾರಾಶಿ
ವೃತ್ತಿರಂಗದಲ್ಲಿ ಆತ್ಮೀಯರ ಸಹಕಾರದಿಂದ ಕಾರ್ಯಸಾಧನೆಯಾಗಲಿದೆ. ಇಲ್ಲ ಸಲ್ಲದ ಅಪವಾದ, ವೃಥಾ ನಿಂದನೆ, ಸ್ತ್ರೀಯರಿಗೆ ತೊಂದರೆ, ಶತ್ರುಗಳ ಬಾಧೆ, ನಗದು ವ್ಯವಹಾರಗಳಲ್ಲಿ ಎಚ್ಚರ. ಶನಿ ಅನಾವಶ್ಯಕ ಸಮಸ್ಯೆಗಳಿಗೆ ಕಾರಣನಾದಾನು. ನೀವು ಕೈಗೊಳ್ಳುವ ನಿರ್ಧಾರಗಳು ನಿಮಗೆ ಯಶೋಭಿವೃದ್ಧಿ ತರಲಿವೆ.

ವೃಶ್ಚಿಕರಾಶಿ
ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ದೊರಕಲಿದೆ. ರಫ್ತು ವ್ಯಾಪಾರದವರಿಗೆ ನಷ್ಟ, ಮಕ್ಕಳಿಂದ ಶುಭ ಸುದ್ದಿ, ಮಾನಸಿಕ ನೆಮ್ಮದಿ, ನಗದು ವ್ಯವಹಾರಗಳಲ್ಲಿ ಎಚ್ಚರ. ದೂರ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ.ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ. ದುಂದು ವೆಚ್ಚದ ಅತಿರೇಕ ಆತಂಕ ತರಲಿದೆ.

ಧನುರಾಶಿ
ಸಾಂಸಾರಿಕವಾಗಿ ನೆಮ್ಮದಿಯ ವಾತಾವರಣ ಸಂತಸ ತಂದೀತು. ಯತ್ನ ಕಾರ್ಯದಲ್ಲಿ ವಿಳಂಬ, ಕೆಲಸ ಕಾರ್ಯಗಳಲ್ಲಿ ಪರಿಶ್ರಮ, ಪರರಿಗೆ ಸಹಾಯ, ಅಕಾಲ ಭೋಜನ. ಕಾಲೋಚಿತವಾದ ನಡೆ ನುಡಿ ನೇರವಿದ್ದು ನಿಮ್ಮ ಗಮನದಲ್ಲಿರಲಿ. ಉದ್ಯೋಗಿಗಳಿಗೆ ವರ್ಗಾವಣೆಯ ಸೂಚನೆ ಗೋಚರಕ್ಕೆ ಬರಲಿದೆ.

ಮಕರರಾಶಿ
ಇಷ್ಟ ಮಿತ್ರರ ಪ್ರೀತಿ,ವಿಶ್ವಾಸ, ಸಹಕಾರ ಮನೋಭಾವನೆಗಳು ನಿಮಗೆ ಸಂತಸ ತರಲಿವೆ. ವ್ಯಾಪಾರ, ವ್ಯವಹಾರದಲ್ಲಿ ಚೇತರಿಕೆ ಸಮಾಧಾನ ತರಲಿದೆ. ವಿವಾದಗಳಿಂದ ದೂರವಿರಿ, ಮಾನಸಿಕ ಗೊಂದಲ, ಹಣಕಾಸು ಖರ್ಚು, ವಿಪರೀತ ವ್ಯಸನ, ಆರೋಗ್ಯದಲ್ಲಿ ವ್ಯತ್ಯಾಸ. ದೂರ ಸಂಚಾರದಲ್ಲಿ ಗಮನವಿರಲಿ.

ಕುಂಭರಾಶಿ
ನಿಮ್ಮ ಕ್ರಿಯಾಶೀಲತೆ ಮುನ್ನಡೆಗೆ ಸಾಧಕವಾಗಿ ಸಮಾಧಾನ ತರಲಿದೆ. ಮಿತ್ರರಿಂದ ನಂಬಿಕೆ ದ್ರೋಹ, ಆರೋಗ್ಯದಲ್ಲಿ ವ್ಯತ್ಯಾಸ, ತಾಳ್ಮೆ ಅತ್ಯಗತ್ಯ, ಮನಸ್ಸಿನಲ್ಲಿ ಆತಂಕ, ಉದ್ಯೋಗದಲ್ಲಿ ಬಡ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ. ಕೌಟುಂಬಿಕವಾಗಿ ಹೊಂದಾಣಿಕೆಗಳಿಗೆ ಸಹಕರಿಸಬೇಕಾದೀತು. ಯೋಗ್ಯ ವಯಸ್ಕರಿಗೆ ಅನಿರೀಕ್ಷಿತ ರೂಪದಲ್ಲಿ ಕಂಕಣಬಲ ತಂದೀತು.

ಮೀನರಾಶಿ
ನಾನಾ ರೀತಿಯ ಕೆಲಸಕಾರ್ಯಗಳು ಪೂರ್ಣತೆಯನ್ನು ಪಡೆಯಲಿವೆ. ಆರ್ಥಿಕವಾಗಿ ಹೆಚ್ಚಿನ ಸಮಸ್ಯೆ ಇರಲಾರದು. ಉಪ ಉದ್ಯೋಗ ಆರಂಭಕ್ಕೆ ಇದು ಸಕಾಲ. ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ, ನಂಬಿಕಸ್ಥರಿಂದ ದ್ರೋಹ, ಇಲ್ಲ ಸಲ್ಲದ ಅಪವಾದ, ಅನಾವಶ್ಯಕ ಖರ್ಚು ಮಾಡಬೇಡಿ, ಹಣಕಾಸು ವಿಚಾರದಲ್ಲಿ ಎಚ್ಚರಿಕೆ. ನ್ಯಾಯಾಲಯದ ಕಾರ್ಯದಲ್ಲಿ ಜಯವಿದೆ.

Leave A Reply

Your email address will not be published.