ಶುಕ್ರವಾರ, ಮೇ 9, 2025
HomeSportsCricketIndia Vs West Indies test series : ಇನ್ನು ಐದು ತಿಂಗಳು ಟೀಮ್ ಇಂಡಿಯಾಗೆ...

India Vs West Indies test series : ಇನ್ನು ಐದು ತಿಂಗಳು ಟೀಮ್ ಇಂಡಿಯಾಗೆ ಟೆಸ್ಟ್ ಪಂದ್ಯಗಳೇ ಇಲ್ಲ!

- Advertisement -

ಬೆಂಗಳೂರು: ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು (India Vs West Indies test series) 1-0 ಅಂತರದಲ್ಲಿ ಗೆದ್ದುಕೊಂಡಿರುವ ಟೀಮ್ ಇಂಡಿಯಾ, 2023-25ನೇ ಸಾಲಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ (ICC World test championship 2023-25) ಋತುವಿನಲ್ಲಿ ಶುಭಾರಂಭ ಮಾಡಿದೆ.

ಇದು ಈ ಸಾಲಿನ WTC ಋತುವಿನಲ್ಲಿ ಭಾರತ ತಂಡದ ಮೊದಲ ಸರಣಿ. ಮೊದಲ ಸರಣಿಯನ್ನೇ ರೋಹಿತ್ ಶರ್ಮಾ ಬಳಗ ಗೆದ್ದು ಗೆಲುವಿನ ಆರಂಭ ಕಂಡಿದೆ. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ಇನ್ನು ಮುಂದಿನ ಐದು ತಿಂಗಳುಗಳ ಕಾಲ ಭಾರತ ತಂಡಕ್ಕೆ ಯಾವುದೇ ಟೆಸ್ಟ್ ಪಂದ್ಯಗಳಿಲ್ಲ.

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು ಮುಗಿಸಿರುವ ಟೀಮ್ ಇಂಡಿಯಾ, ಆತಿಥೇಯರ ವಿರುದ್ಧ 3 ಪಂದ್ಯಗಳ ಏಕದಿನ ಹಾಗೂ 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ವಿಂಡೀಸ್ ಪ್ರವಾಸದ ನಂತರ ಐರ್ಲೆಂಡ್’ಗೆ ತೆರಳಲಿರುವ ಭಾರತ, ಅಲ್ಲಿ 3 ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿದೆ. ಬಳಿಕ ಆಗಸ್ಟ್ 31ರಿಂದ ಆರಂಭವಾಗಲಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಭಾಗವಹಿಸಲಿದೆ. ನಂತರ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಆಡಲಿದೆ.

ಭಾರತಕ್ಕೆ ಮುಂದಿನ ಟೆಸ್ಟ್ ಸರಣಿ ನಿಗದಿಯಾಗಿರುವುದು ಐದು ತಿಂಗಳ ನಂತರ. ಅಂದರೆ ಮುಂದಿನ ಡಿಸೆಂಬರ್’ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಹರಿಣಗಳ ನಾಡಿನಲ್ಲಿ 3 ಪಂದ್ಯಗಳ ಟಿ20 ಸರಣಿ, 3 ಪಂದ್ಯಗಳ ಏಕದಿನ ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ.

ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದ ವೇಳಾಪಟ್ಟಿ (India tour of South Africa 2023-24)
ಮೊದಲ ಟಿ20: 10 ಡಿಸೆಂಬರ್ 2023 (ಡರ್ಬನ್)
ಎರಡನೇ ಟಿ20: 12 ಡಿಸೆಂಬರ್ 2023 (ಗೆಬೆರ್ಹ)
ಮೂರನೇ ಟಿ20: 14 ಡಿಸೆಂಬರ್ 2023 (ಜೋಹಾನ್ಸ್’ಬರ್ಗ್)

ಮೊದಲ ಏಕದಿನ: 17 ಡಿಸೆಂಬರ್ 2023 (ಜೋಹಾನ್ಸ್’ಬರ್ಗ್)
ಎರಡನೇ ಏಕದಿನ: 19 ಡಿಸೆಂಬರ್ 2023 (ಗೆಬೆರ್ಹ)
ಮೂರನೇ ಏಕದಿನ: 21 ಡಿಸೆಂಬರ್ 2023 (ಪಾರ್ಲ್)

ಇದನ್ನೂ ಓದಿ : Avesh Khan : ಮಧ್ಯಪ್ರದೇಶದ ಪಾನ್’ವಾಲಾನ ಮಗ ಟೀಮ್ ಇಂಡಿಯಾಗೆ ಆಯ್ಕೆಯಾದ ರೋಚಕ ಕಥೆ

ಇದನ್ನೂ ಓದಿ : Ishan Kishan – Virat Kohli : ಕೊಹ್ಲಿ ಕೃಪೆಯಿಂದ ಟೆಸ್ಟ್’ನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ ಇಶಾನ್ ಕಿಶನ್

ಪ್ರಥಮ ಟೆಸ್ಟ್: 26-30 ಡಿಸೆಂಬರ್ 2023 (ಸೆಂಚೂರಿಯನ್)
ಎರಡನೇ ಟೆಸ್ಟ್: 03-07 ಜನವರಿ 2024 (ಕೇಪ್ ಟೌನ್)

India Vs West Indies test series : No test matches for India in 5 months

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular