VR Vanitha : ದೇಶದ ಇತಿಹಾಸದಲ್ಲಿ ಇದೇ ಮೊದಲು, ಪುರುಷರ ಕ್ರಿಕೆಟ್ ತಂಡಕ್ಕೆ ಮಹಿಳಾ ಕೋಚ್, ಕೆಎಸ್’ಸಿಯ ಟಿ20 ಲೀಗ್’ನಲ್ಲಿ ಹೊಸ ಪ್ರಯೋಗ

ಬೆಂಗಳೂರು: ಮಹಿಳಾ ಕ್ರಿಕೆಟ್ ತಂಡಗಳಿಗೆ ಪುರುಷರು ಕೋಚ್ ಆಗುವುದು (VR Vanitha) ಸಾಮಾನ್ಯ. ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಮುಂಬೈನ ದಿಗ್ಗಜ ಬ್ಯಾಟ್ಸ್’ಮನ್ ಅಮೋಲ್ ಮಜುಮ್ದಾರ್ ಹೆಡ್ ಕೋಚ್. ಮಹಿಳಾ ಕ್ರಿಕೆಟ್ ತಂಡಗಳಿಗೆ ಪುರುಷರು ಕೋಚ್ ಆಗುವುದು ಹೊಸತೇನಲ್ಲ. ಆದರೆ ಪುರುಷರ ಕ್ರಿಕೆಟ್ ತಂಡಕ್ಕೆ ಮಹಿಳೆಯೊಬ್ಬರು ಕೋಚ್ ಆಗುವುದು ತುಂಬಾ ಅಪರೂಪ. ಅಂತಹ ಅಪರೂಪದಲ್ಲೇ ಅಪರೂಪದ ಪ್ರಸಂಗಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (Karnataka State Cricket Association – KSCA) ಆಯೋಜಿಸುವ ಮಹಾರಾಜ ಟ್ರೋಫಿ ಟಿ20 ಲೀಗ್ (Maharaja Trophy) ಸಾಕ್ಷಿಯಾಗಲಿದೆ.

ಈ ಬಾರಿಯ ಮಹಾರಾಜ ಟ್ರೋಫಿ ಟಿ20 ಲೀಗ್’ಗೆ ಸಿದ್ಧತೆ ಆರಂಭಗೊಂಡಿದ್ದು, ಶನಿವಾರವಷ್ಟೇ ರಾಜ್ಯ ಕ್ರಿಕಟ್ ಸಂಸ್ಥೆಯ ಆವರಣದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದೆ. ಈ ಪೈಕಿ ಶಿವಮೊಗ್ಗ ಲಯನ್ಸ್ ಫ್ರಾಂಚೈಸಿ ತನ್ನ ತಂಡಕ್ಕೆ ಮಹಿಳಾ ಕೋಚ್ ನೇಮಿಸುವ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಅಂದ ಹಾಗೆ ಶಿವಮೊಗ್ಗ ಲಯನ್ಸ್ ತಂಡದ ಹೆಡ್ ಕೋಚ್ ಆಗಿ ನೇಮಕಗೊಂಡಿರುವವರು ಬೇರಾರೂ ಅಲ್ಲ, ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಫೀಲ್ಡಿಂಗ್ ಕೋಚ್ ವಿ.ಆರ್ ವನಿತಾ.

ಇದನ್ನೂ ಓದಿ : Avesh Khan : ಮಧ್ಯಪ್ರದೇಶದ ಪಾನ್’ವಾಲಾನ ಮಗ ಟೀಮ್ ಇಂಡಿಯಾಗೆ ಆಯ್ಕೆಯಾದ ರೋಚಕ ಕಥೆ

ಭಾರತ ಪರ ಆರು ಏಕದಿನ ಹಾಗೂ 16 ಟಿ20 ಪಂದ್ಯಗಳನ್ನಾಡಿರುವ 33 ವರ್ಷದ ವಿ.ಆರ್ ವನಿತಾ, ಕ್ರಿಕೆಟ್’ಗೆ ವಿದಾಯ ಘೋಷಿಸಿದ ನಂತರ ಕೋಚಿಂಗ್ ಜವಾಬ್ದಾರಿ ಆಯ್ದುಕೊಂಡಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫೀಲ್ಡಿಂಗ್ ಕೋಚ್ ಆಗಿರುವ ವನಿತಾ, ಇದೀಗ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಪುರುಷರ ತಂಡಕ್ಕೆ ಕೋಚಿಂಗ್ ನೀಡುವ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಲಿದ್ದಾರೆ. ಈ ಬಾರಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಆಡಲಿರುವ ಶಿವಮೊಗ್ಗ ಲಯನ್ಸ್ ತಂಡದಲ್ಲಿ ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ವಿ.ಕೌಶಿಕ್, ನಿಹಾಲ್ ಉಲ್ಲಾಳ್, ರೋಹನ್ ಕದಂರಂತಹ ಪ್ರತಿಭಾವಂತ ಆಟಗಾರರಿದ್ದಾರೆ.

VR Vanitha : For the first time in the history of the country, a woman coach for the men’s cricket team, a new experiment in the T20 league of KSC.

Comments are closed.