ಉಡುಪಿ : ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಮೊಬೈಲ್ ಚಿತ್ರೀಕರಣ ನಡೆಸಿದ ಪ್ರಕರಣ (Udupi College Toilet Video Case) ಬೂದಿ ಮುಚ್ಚಿದ ಕೆಂಡದಂತೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಕಾಲೇಜಿನ ಶೌಚಾಲಯ ಕೊಠಡಿಯಲ್ಲಿ ಹಿಂದೂ ವಿದ್ಯಾರ್ಥಿನಿಯೊಬ್ಬಳನ್ನು ಚಿತ್ರೀಕರಿಸಿದ ಮೂವರು ಮುಸ್ಲಿಂ ಯುವತಿಯರ ವಿರುದ್ಧ ಬಿಜೆಪಿ ಇಂದು ಉಡುಪಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಉಡುಪಿ ಜಿಲ್ಲಾ ಬಿಜೆಪಿ ಕಚೇರಿ ಕಡಿಯಾಳಿಯಿಂದ ಬನ್ನಾಜೆಯ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಯಿತು. ಭದ್ರತಾ ಕ್ರಮವಾಗಿ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಸದ್ಯ ರಾಜಕೀಯ ತಿರುವು ಪಡೆಯುವ ಸಾಧ್ಯತೆ ಕಾಣುತ್ತಿದೆ. ಒಂದು ಸಮುದಾಯದ ಹುಡುಗಿಯೊಬ್ಬಳನ್ನು ಕಾಲೇಜಿನ ವಾಶ್ ರೂಂನಲ್ಲಿ ಮೂವರು ವಿವಿಧ ಸಮುದಾಯದ ಮೂವರು ಸಹಪಾಠಿಗಳು ಚಿತ್ರೀಕರಿಸಿದ ವಿವಾದಾತ್ಮಕ ಘಟನೆಯ ಸಲುವಾಗಿ ಉಡುಪಿಯಲ್ಲಿ ಇಂದು ಬೃಹತ್ ಮಟ್ಟದ ಪ್ರತಿಭಟನೆ ನಡೆದಿದೆ. ಇದನ್ನೂ ಓದಿ : Crime News : ಐಫೋನ್ ಆಸೆಗೆ ಮಗುವನ್ನೇ ಮಾರಾಟ ಮಾಡಿದ ದಂಪತಿ
ಸುದ್ದಿಗಾರರೊಂದಿಗೆ ಮಾತನಾಡಿದ ಉಡುಪಿ ಶಾಸಕ ಯಶಪಾಲ್ ಸುವರ್ಣ, ಪ್ರಕರಣದಲ್ಲಿ ಪಿಎಫ್‌ಐ ನಂಟು ಇರುವ ಶಂಕೆ ಇದೆ. ಪಿಎಫ್‌ಐ ನಿಷೇಧದ ನಂತರ, ಪಿಎಫ್‌ಐ ಮಹಿಳಾ ವಿಭಾಗವು ಸಕ್ರಿಯವಾಗಿದೆಯೇ ಎಂದು ನಮಗೆ ಅನುಮಾನವಿದೆ. ಈ ವಿದ್ಯಾರ್ಥಿಗಳು ಈ ಕಾರ್ಯಾಚರಣೆಯ ಭಾಗವಾಗಿರಬಹುದು. ರಾಜ್ಯ ಸರಕಾರ ನಡೆಸುತ್ತಿರುವ ತನಿಖೆಯ ಮೇಲೆ ನನಗೆ ನಂಬಿಕೆ ಇಲ್ಲ. ಅವರು ಪ್ರಕರಣವನ್ನು ಕೇಂದ್ರ ಸರಕಾರಕ್ಕೆ ಹಸ್ತಾಂತರಿಸಬೇಕು ಮತ್ತು ವಿಸ್ತೃತ ತನಿಖೆ ಅಥವಾ ರಾಜ್ಯ ಸರಕಾರದೊಂದಿಗೆ ಜಂಟಿ ತನಿಖೆ ನಡೆಸಬೇಕು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬಿಜೆಪಿ ಮುಖಂಡ ಉದಯ ಕುಮಾರ್ ಶೆಟ್ಟಿ ಕಿದಿಯೂರು ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
Udupi College Toilet Video Case: Massive protest by BJP