Sanju Samson : ವಿಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಆಡಿದ ಸಂಜು ಸ್ಯಾಮ್ಸನ್ ಜರ್ಸಿ

ಬಾರ್ಬೆಡೋಸ್: ಟೀಮ್ ಇಂಡಿಯಾದಲ್ಲಿ ಅತ್ಯಂತ ನತದೃಷ್ಟ ಕ್ರಿಕೆಟಿಗ ಅಂತ ಯಾರಾದ್ರೂ ಇದ್ರೆ ಅದು ಕೇರಳದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ (Sanju Samson) ಸಂಜು ಸ್ಯಾಮ್ಸನ್. ಪ್ರತಿಭೆಯಿದ್ರೂ ಅವಕಾಶ ಸಿಗುತ್ತಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದರೂ, ಮೊದಲ ಏಕದಿನ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಸ್ಯಾಮ್ಸನ್ ಬದಲು ’’ಮುಂಬೈ ಇಂಡಿಯನ್ಸ್ ಕೋಟಾ’’ ಆಟಗಾರ ಇಶಾನ್ ಕಿಶನ್ ಅವರಿಗೆ ಟೀಮ್ ಇಂಡಿಯಾ ಮ್ಯಾನ್ಮೇಜ್ಮೆಂಟ್ ಮಣೆ ಹಾಕಿತ್ತು.

ಅಚ್ಚರಿಯ ಸಂಗತಿ ಏನಂದ್ರೆ ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಏಕದಿನ (India Vs West Indies ODI series) ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಭಾರತದ ಪ್ಲೇಯಿಂಗ್ XIನಲ್ಲಿ ಸ್ಥಾನ ಪಡೆಯದಿದ್ರೂ, ಅವರ ಜರ್ಸಿ ಮಾತ್ರ ಮೈದಾನದಲ್ಲಿ ಕಾಣಿಸಿಕೊಂಡಿದೆ. ಇದು ಹೇಗೆ ಸಾಧ್ಯ ಎಂದು ಕೇಳಬಹುದು. ಸಂಜು ಸ್ಯಾಮ್ಸನ್ ಅವರ ಜರ್ಸಿ ನಂ.9. ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ಸೂರ್ಯಕುಮಾರ್ ಯಾದವ್ ಫೀಲ್ಡಿಂಗ್ ಹಾಗೂ ಬ್ಯಾಟಿಂಗ್ ನಡೆಸುವ ವೇಳೆ ಸ್ಯಾಮ್ಸನ್ ಅವರ ಜರ್ಸಿಯನ್ನು ಧರಿಸಿದ್ದರು. ಇದನ್ನೂ ಓದಿ : Arjun Tendulkar’s six pack : ವಿರಾಟ್ ಕೊಹ್ಲಿ ಎಫೆಕ್ಟ್, ಸಿಕ್ಸ್ ಪ್ಯಾಕ್ ತೋರಿಸಿದ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್

ಸೂರ್ಯಕುಮಾರ್ ಯಾದವ್ ಸಂಜು ಸ್ಯಾಮ್ಸನ್ ಅವರ ಜರ್ಸಿ ಧರಿಸಲು ಆಡಲು ಕಾರಣ “ಸೈಜ್” ಸೀಕ್ರೆಟ್. ಸೂರ್ಯಕುಮಾರ್ ಯಾದವ್ ಅವರ ಜರ್ಸಿ ಸೈಜ್ “Large”. ಆದರೆ ಅವರಿಗೆ “Medium” ಅಳತೆಯ ಜರ್ಸಿ ನೀಡಲಾಗಿತ್ತು. ಈ ವಿಚಾರವನ್ನು ಸೂರ್ಯಕುಮಾರ್ ಯಾದವ್ ಟೀಮ್ ಮ್ಯಾನೇಜ್ಮೆಂಟ್ ಗಮನಕ್ಕೂ ತಂದಿದ್ದರು. ಆದರೆ ಪ್ರಥಮ ಏಕದಿನ ಪಂದ್ಯಕ್ಕೂ ಮೊದಲು L ಸೈಜಿನ ಜರ್ಸಿ ಲಭ್ಯವಾಗದ ಹಿನ್ನೆಲೆಯಲ್ಲಿ ಸಂಜು ಸ್ಯಾಮ್ಸನ್ ಅವರ ಜರ್ಸಿಯನ್ನು ಪಡೆದು ಸೂರ್ಯಕುಮಾರ್ ಯಾದವ್ ಮೈದಾನಕ್ಕಿಳಿದರು. 28 ವರ್ಷದ ಸಂಜು ಸ್ಯಾಮ್ಸನ್ ಆಡಿರುವ 11 ಏಕದಿನ ಪಂದ್ಯಗಳಿಂದ 66ರ ಉತ್ತಮ ಸರಾಸರಿಯಲ್ಲಿ 2 ಅರ್ಧಶತಕಗಳ ಸಹಿತ 330 ರನ್ ಕಲೆ ಹಾಕಿದ್ದಾರೆ. ಆದರೂ ಪದೇ ಪದೇ ಅವಕಾಶ ವಂಚಿತರಾಗುತ್ತಿರುವುದು ಕ್ರಿಕೆಟ್ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

Sanju Samson: Sanju Samson jersey as played in the first ODI against West Indies

Comments are closed.