ಸಿಡ್ನಿ: ಭಾರತದಲ್ಲಿ ನಡೆಯಲಿರುವ ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ (ICC World Cup 2023) ಕ್ರಿಕೆಟ್ ಆಸ್ಟ್ರೇಲಿಯಾ 18 ಮಂದಿಯ ತಂಡವನ್ನು ಪ್ರಕಟಿಸಿದೆ. ವಿಶ್ವಕಪ್’ನಲ್ಲಿ ಆಡಲಿರುವ ಆಸೀಸ್ ತಂಡದಲ್ಲಿ ಅಚ್ಚರಿಯ ಹೆಸರೊಂದು ಕಾಣಿಸಿಕೊಂಡಿದೆ. ಅವರೇ (Tanveer Sangha) ತನ್ವೀರ್ ಸಂಘಾ.
21 ವರ್ಷದ ಯುವ ಲೆಗ್ ಸ್ಪಿನ್ನರ್ ತನ್ವೀರ್ ಸಂಘಾ ಅವರ ತಂದೆ ಜೋಗಾ ಸಂಘಾ ಭಾರತೀಯ ಮೂಲದವರು. ಪಂಜಾಬ್’ನ ಜಲಂಧರ್’ನ ರಹೀಮ್’ಪುರದವರಾದ ಜೋಗಾ ಸಂಘಾ 1997ರಲ್ಲಿ ಭಾರತದಿಂದ ಆಸ್ಟ್ರೇಲಿಯಾದ ವಲಸೆ ಹೋಗಿದ್ದರು. ವಿದ್ಯಾಭ್ಯಾಸಕ್ಕಾಗಿ ಆಸ್ಟ್ರೇಲಿಯಾಗೆ ಬಂದಿದ್ದ ಜೋಗಾ ಸಂಘಾ ಇದೀಗ ಕಾಂಗರೂಗಳ ನಾಡಿನಲ್ಲಿ ಟ್ಯಾಕ್ಸಿ ಡ್ರೈವರ್ ಆಗಿದ್ದಾರೆ. ಸಂಘಾ ಅವರ ಕುಟುಂಬ ಸಿಡ್ನಿಯಲ್ಲಿ ನೆಲೆಸಿದೆ. ಆಸ್ಟ್ರೇಲಿಯಾ ಅಂಡರ್-19 ಹಾಗೂ ಸಿಡ್ನಿ ಥಂಡರ್ ತಂಡಗಳನ್ನು ಪ್ರತಿನಿಧಿಸಿರುವ ತನ್ವೀರ್ ಸಂಘಾ, ಒಟ್ಟು 8 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದು, 24 ವಿಕೆಟ್ ಪಡೆದಿದ್ದಾರೆ. 5 ಲಿಸ್ಟ್ ಎ ಪಂದ್ಯಗಳಿಂದ 7 ವಿಕೆಟ್ ಹಾಗೂ 28 ಟಿ20 ಪಂದ್ಯಗಳಿಂದ 37 ವಿಕೆಟ್ ಕಬಳಿಸಿದ್ದಾರೆ. 2020-21ನೇ ಸಾಲಿನ ಬಿಗ್ ಬ್ಯಾಷ್ ಲೀಗ್’ನಲ್ಲಿ ಸಿಡ್ನಿ ಥಂಡರ್ಸ್ ಪರ 15 ಪಂದ್ಯಗಳಿಂದ 21 ವಿಕೆಟ್ ಪಡೆದು ಮಿಂಚಿದ್ದರು.
2020ರ ಅಂಡರ್-19 ವಿಶ್ವಕಪ್’ನಲ್ಲಿ ತನ್ವೀರ್ ಸಂಘಾ ಆಸ್ಟ್ರೇಲಿಯಾ ಪರ ಅತೀ ಹೆಚ್ಚು ವಿಕೆಟ್ ಪಡೆದ ಗೌರವಕ್ಕೆ ಪಾತ್ರರಾಗಿದ್ದರು. ಆ ಟೂರ್ನಿಯಲ್ಲಿ ಆರು ಪಂದ್ಯಗಳಿಂದ 15 ವಿಕೆಟ್ ಪಡೆದಿದ್ದ ಸಂಘಾ, ಭಾರತ ವಿರುದ್ಧದ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದರು. ಇದನ್ನೂ ಓದಿ : India Vs West Indies T20: ಸರಣಿ ಸೋಲಿನ ಭೀತಿಯಲ್ಲಿ ಟೀಮ್ ಇಂಡಿಯಾ, ಇವತ್ತು ಡೆಬ್ಯೂ ಮಾಡ್ತಾನಾ ಪಾನಿಪೂರಿ ಹುಡುಗ?
ಐಸಿಸಿ ವಿಶ್ವಕಪ್ ಟೂರ್ನಿ: ಆಸ್ಟ್ರೇಲಿಯಾ ತಂಡದ ವೇಳಾಪಟ್ಟಿ (ICC World Cup 2023 Schedule)
- ಅಕ್ಟೋಬರ್ 8: ಭಾರತ Vs ಆಸ್ಟ್ರೇಲಿಯಾ (ಚೆನ್ನೈ)
- ಅಕ್ಟೋಬರ್ 13: ಆಸ್ಟ್ರೇಲಿಯಾ Vs ದಕ್ಷಿಣ ಆಫ್ರಿಕಾ (ಲಕ್ನೋ)
- ಅಕ್ಟೋಬರ್ 16: ಆಸ್ಟ್ರೇಲಿಯಾ Vs ಕ್ವಾಲಿಫೈಯರ್-2 (ಲಕ್ನೋ)
- ಅಕ್ಟೋಬರ್ 20: ಆಸ್ಟ್ರೇಲಿಯಾ Vs ಪಾಕಿಸ್ತಾನ (ಬೆಂಗಳೂರು)
- ಅಕ್ಟೋಬರ್ 25: ಆಸ್ಟ್ರೇಲಿಯಾ Vs ಕ್ವಾಲಿಫೈಯರ್-1 (ದೆಹಲಿ)
- ಅಕ್ಟೋಬರ್ 28: ಆಸ್ಟ್ರೇಲಿಯಾ Vs ನ್ಯೂಜಿಲೆಂಡ್ (ಧರ್ಮಶಾಲಾ)
- ನವೆಂಬರ್ 4: ಇಂಗ್ಲೆಂಡ್ Vs ಆಸ್ಟ್ರೇಲಿಯಾ (ಅಹ್ಮದಾಬಾದ್)
- ನವೆಂಬರ್ 7: ಆಸ್ಟ್ರೇಲಿಯಾ Vs ಅಫ್ಘಾನಿಸ್ತಾನ (ಮುಂಬೈ)
- ನವೆಂಬರ್ 12: ಆಸ್ಟ್ರೇಲಿಯಾ Vs ಬಾಂಗ್ಲಾದೇಶ (ಪುಣೆ)
Tanveer Sangha: Son of a taxi driver by Indian origin who made it to the Aussie World Cup squad